ಯುಗಾದಿ ಹಬ್ಬದ ಸಮಯದಲ್ಲಿ ಕಾನೂನುಬಾಹಿರವಾದ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ‘ಹಲಾಲ್ ಮುಕ್ತ ಯುಗಾದಿ’ ಆಚರಿಸಿ !

ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಯಶಸ್ವಿ ಅಭಿಯಾನ ಹಾಗೂ ರಾಜ್ಯ ಸರಕಾರಕ್ಕೆ ಮನವಿ

ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಿರುವ (ಎಡದಿಂದ) ನ್ಯಾಯವಾದಿ ಶುಭಾ ಬಿ. ನಾಯಕ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ

ಬೆಂಗಳೂರು : ಯುಗಾದಿಯ ಸಮಯದಲ್ಲಿ ಹಿಂದೂ ಸಮಾಜವು ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು, ದೇಶದ ಅರ್ಥವ್ಯವಸ್ಥೆಗೆ ಮಾರಕವಾಗಿರುವ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಅಭಿಯಾನ ನಡೆಸಲಾಯಿತು. ಅಭಿಯಾನದ ಮೊದಲನೆಯ ದಿನವಾದ ಇಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ, ಹಿಂದೂ ಹೋರಾಟಗಾರ ಶ್ರೀ. ಪ್ರಶಾಂತ್ ಸಂಬರಗಿ, ರಾಷ್ಟ್ರೀಯ ಹಿಂದೂ ಪರಿಷದ್ ನ ಶ್ರೀ. ವಿಕ್ರಮ್ ಶೆಟ್ಟಿ, ನ್ಯಾಯವಾದಿ ಸೌ. ಶುಭಾ ಬಿ. ನಾಯಕ್ ಸೇರಿದಂತೆ ಹಲವಾರು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ ಪ್ರಾರ್ಥನೆಯೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮೈಸೂರು ಬ್ಯಾಂಕ್ ಸರ್ಕಲ್, ವಿಜಯನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಹಾಗೂ ಮಾಂಸ ಮಾರಾಟ ಮಳಿಗೆಗಳು ಸೇರಿದಂತೆ ಜನಸಾಮಾನ್ಯರಿಗೂ ಜಾಗೃತಿ ಮುಡಿಸಲಾಯಿತು. ಬಳಿಕ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ‘ಈ ಕುರಿತು ಮುಖ್ಯಮಂತ್ರಿಗಳಿಗೆ ತಲುಪಿಸಿ ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಶ್ರೀ. ಮೋಹನ್ ಗೌಡ ಇವರು ಮಾತನಾಡಿ, ‘ದೇಶದಲ್ಲಿ ಆಹಾರ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎಫ್.ಎಸ್.ಎಸ್.ಎ.ಐ ಮತ್ತು ಎಫ್‌ಡಿಎ ಯಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ, ಹಣ ಪಡೆದುಕೊಂಡು ಇಸ್ಲಾಮ್ ಪದ್ದತಿಯ ಪ್ರಮಾಣಪತ್ರವನ್ನು ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಮತ್ತು ದೇಶದ ಬಹುಸಂಖ್ಯಾತ ಹಿಂದೂ ಉದ್ಯಮಿಗಳಿಗೆ, ವಂಶಪಾರಂಪರ್ಯವಾಗಿ ಮಾಂಸದ ವ್ಯಾಪಾರ ಮಾಡಿಕೊಂಡು ಬರುವ ಹಿಂದೂ ಕಟುಕ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಮತ್ತು ಅವರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕೆನ್ನುವ ಸಂವಿಧಾನದ ಕಲಂ 46 ರ ಉಲ್ಲಂಘನೆಯಾಗಿದೆ. ಇಂದು ಮುಸಲ್ಮಾನ ಸಮುದಾಯವು ಹಲಾಲ್ ಮೂಲಕ ದೇಶದ ಆರ್ಥಿಕ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಮಾಡಿದ ಸಂಚಾಗಿದೆ. ಹಾಗಾಗಿ