16 ಲಕ್ಷ ಹೆಸರುಗಳನ್ನು ಮತದಾರರ ಯಾದಿಯಿಂದ ಕೈಬಿಡಲಾಗಿದೆ
ಕೋಲಕಾತಾ (ಬಂಗಾಳ) – ಚುನಾವಣಾ ಆಯೋಗಕ್ಕೆ ಬಂಗಾಳದ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಕ್ರಮ ಸಂಖ್ಯೆಯನ್ನು ಹೊಂದಿರುವ 25 ಸಾವಿರ ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು 7 ಕೋಟಿ 40 ಲಕ್ಷ ಹೆಸರುಗಳನ್ನು ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಕೆಲವು ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸುಮಾರು 16 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಅಥವಾ ಅದರಲ್ಲಿ ತಿದ್ದುಪಡಿ ಮಾಡಲಾಗಿದೆ.
ಬೊನಗಾವ್ ದಕ್ಷಿಣ ಮತ್ತು ಮಾಟಿಗಾರಾ-ನಕ್ಸಲಬಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಕ್ರಮ ಸಂಖ್ಯೆಯ ಅತಿ ಹೆಚ್ಚು ಮತದಾರರ ಗುರುತಿನ ಚೀಟಿಗಳು ಕಂಡು ಬಂದಿವೆ. ಇದರಲ್ಲಿ, ಬೊನಗಾವ್ ಗಡಿ ಬಾಂಗ್ಲಾದೇಶಕ್ಕೆ ಮತ್ತು ಮಾಟಿಗಾರಾ- ನಕ್ಸಲಬಾರಿಯ ಗಡಿ ನೇಪಾಳಕ್ಕೆ ಹೊಂದಿಕೊಂಡಿದೆ. ಮಧ್ಯಗ್ರಾಮ, ರಾಜಾರಹಾಟ-ಗೋಪಾಲಪುರ, ಕ್ಯಾನಿಂಗ ಪೂರ್ಬಾ, ಬರುಯಿಪುರ ಪೂರ್ವ ಮತ್ತು ಪಶ್ಚಿಮ, ಕುರ್ಸಿಯೊಂಗ, ಸಿಲಿಗುಡಿ, ಬೊನಗಾವ್ ಉತ್ತರ ಮತ್ತು ಫಲಕಾತಾದಲ್ಲಿಯೂ ನಕಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.
ನಾವು ಪರಿಶೀಲನೆ ನಡೆಸುತ್ತಿದ್ದೇವೆ ! – ಚುನಾವಣಾ ಆಯೋಗ
ನಾವು ಜಿಲ್ಲಾಡಳಿತಕ್ಕೆ ಎಲ್ಲಾ ಮತದಾರರ ಗುರುತಿನ ಚೀಟಿಗಳನ್ನು ಪ್ರತ್ಯಕ್ಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದೇವೆ ಮತ್ತು ಮತದಾರರ ಪಟ್ಟಿಯಿಂದ ನಕಲಿ ಹೆಸರುಗಳನ್ನು ತೆಗೆದುಹಾಕುವಂತೆಯೂ ತಿಳಿಸಿದ್ದೇವೆ. ಇದು ಅಧಿಕಾರಿಗಳ ತಪ್ಪೋ ಅಥವಾ ವಿದೇಶಿ ಜನರನ್ನು ಭಾರತೀಯರೆಂದು ತೋರಿಸುವ ಪ್ರಯತ್ನವಾಗಿದೆಯೋ ಎನ್ನುವುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಚುನಾವಣಾ ಆಯೋಗದ ಅಧಿಕಾರಿ ಸ್ಥಳೀಯ ದಿನಪತ್ರಿಕೆ ‘ಟೆಲಿಗ್ರಾಫ್’ಗೆ ತಿಳಿಸಿದರು.
ಸಂಪಾದಕೀಯ ನಿಲುವುಚುನಾವಣಾ ಆಯೋಗಕ್ಕೆ ಮತದಾರರ ಗುರುತಿನ ಚೀಟಿಯನ್ನು ನೀಡುವಾಗ ಇದು ಗಮನಕ್ಕೆ ಬರುವುದಿಲ್ಲ ಏಕೆ ? ಆಯೋಗದ ಕಾರ್ಯಪದ್ಧತಿಯಲ್ಲಿಯೇ ಲೋಪದೋಷವಿರುವುದು ಇದರಿಂದ ಗಮನಕ್ಕೆ ಬರುತ್ತದೆ. ಇದರಿಂದ ದೇಶದ ಭದ್ರತೆಯು ಅಪಾಯಕ್ಕೊಳಗಾಗುತ್ತಿದೆ. |