ರಾಜಸ್ಥಾನದ ಬಾಡಮೇರ ಜಿಲ್ಲೆಯಲ್ಲಿ ಹೋಳಿಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜ್ಯಾರಿಯಾಗಿದೆ

  • ಹೋಳಿ ಆಡುವಾಗ ಇತರ ಧರ್ಮೀಯರ ಭಾವನೆಗಳನ್ನು ನೋಯಿಸದಿರುವಂತೆ ಕರೆ

  • ಭಾಜಪ ಹಾಗೂ ಹಿಂದೂ ಸಂಘಟನೆಗಳಿಂದ ವಿರೋಧ

ಬಾಡಮೇರ (ರಾಜಸ್ಥಾನ) – ಇಲ್ಲಿನ ಜಿಲ್ಲಾಧಿಕಾರಿಯಾದ ಲೋಕಬಂಧುರವರು ಜಿಲ್ಲೆಯಲ್ಲಿ ಹೋಳಿಯ ಹಿನ್ನೆಲೆಯಲ್ಲಿ ಕಲಮು ೧೪೪ (ನಿಷೇಧಾಜ್ಞೆ)ಯನ್ನು ಜ್ಯಾರಿಗೊಳಿಸಿದ್ದಾರೆ. ಈ ಆದೇಶದಲ್ಲಿ ‘ಇತರ ಧರ್ಮೀಯರ ಭಾವನೆಗಳನ್ನು ನೋಯಿಸುವಂತಹ ರೀತಿಯಲ್ಲಿ ಯಾರೂ ಹೋಳಿ ಆಡಬಾರದು ಹಾಗೂ ಬಣ್ಣಗಳನ್ನು ಹಾಕಬಾರದು’ ಎಂದು ಹೇಳಲಾಗಿದೆ. ಈ ಆದೇಶವನ್ನು ಭಾಜಪ ಹಾಗೂ ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ. ಹಿಂದಿನ ವರ್ಷ ಕಾಂಗ್ರೆಸ್‌ ಸರಕಾರದಿಂದ ಹಿಂದೂಗಳ ಹಬ್ಬಗಳ ಸಮಯದಲ್ಲಿ ಅಜಮೇರಿನೊಂದಿಗೆ ಅನೇಕ ಜಿಲ್ಲೆಗಳಲ್ಲಿ ಕಲಮು ೧೪೪ ಜ್ಯಾರಿಗೊಳಿಸಲಾಗಿತ್ತು.

೧. ಈ ಆದೇಶದಲ್ಲಿ ‘ಇತರ ಧರ್ಮೀಯರ ಅಥವಾ ಯಾವುದೇ ವ್ಯಕ್ತಿಯ ಭಾವನೆಗಳಿಗೆ ನೋವಾಗುವಂತಹ ಯಾವುದೇ ಹಾಡುಗಳನ್ನು ಹಾಕಬಾರದು ಮತ್ತು ಘೋಷಣೆಗಳನ್ನು ಕೂಗಬಾರದು, ಹಾಗೆಯೇ ಯಾವುದೇ ವ್ಯಕ್ತಿಯ ಮೇಲೆ ಅವರ ಇಚ್ಛೆಯ ವಿರುದ್ಧವಾಗಿ ಅವರ ಧಾರ್ಮಿಕ ಭಾವನೆಗಳಿಗೆ ನೋವಾಗುವಂತೆ ಬಣ್ಣಗಳನ್ನು ಎಸೆಯಬಾರದು ಎಂದು ಹೇಳಲಾಗಿದೆ.

೨. ಈ ಆದೇಶದ ಬಗ್ಗೆ ಜಿಲ್ಲಾಧಿಕಾರಿ ಲೋಕಬಂಧುರವರು ಮಾತನಾಡುತ್ತ ಇಂತಹ ಆದೇಶಗಳನ್ನು ಪ್ರತಿಯೊಂದು ಹಬ್ಬಗಳ ಸಮಯದಲ್ಲಿ ನೀಡಲಾಗುತ್ತದೆ. ಇದರಲ್ಲಿ ೫ಕ್ಕಿಂತಲೂ ಹೆಚ್ಚಿನ ಜನರು ಸಾರ್ವಜನಿಕ ಸ್ಥಳಗಳಲ್ಲಿ ಸೇರಬಾರದು. ಮಧ್ಯಪಾನ ಮಾಡಬಾರದು. ಶಸ್ತ್ರಗಳನ್ನು ಹೊಂದಿರಬಾರದು. ವಾದ ಮಾಡಬಾರದು. ಅನೇಕ ವರ್ಷಗಳಿಂದ ಇಂತಹ ಆದೇಶಗಳನ್ನು ನೀಡಲಾಗುತ್ತಿದೆ, ಎಂದು ಹೇಳಿದರು.

೩. ರಾಜ್ಯದಲ್ಲಿನ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಉಪನೇತಾರರಾದ ರಾಜೇಂದ್ರ ರಾಠೋಡರವರು ಈ ಆದೇಶವನ್ನು ಆಕ್ಷೇಪಿಸಿದ್ದಾರೆ. ಅವರು ರಾಜ್ಯದ ಕಾಂಗ್ರೆಸ್‌ ಸರಕಾರದ ಮೇಲೆ ಈ ಕಳಂಕವಿರುವ ಬಗ್ಗೆ ಆರೋಪಿಸಿದ್ದಾರೆ. ಈ ವಿಷಯದಲ್ಲಿ ರಾಠೋಡರವರು ವಿಧಾನಸಭೆಯಲ್ಲಿಯೂ ಈ ಅಂಶವನ್ನು ಮಂಡಿಸುತ್ತ ‘ಸರಕಾರವು ಇದಕ್ಕೆ ಉತ್ತರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

  • ಕಾಂಗ್ರೆಸ್ಸಿನ ಆಡಳಿತವೆಂದರೆ ಪಾಕಿಸ್ತಾನಿ ಆಳ್ವಿಕೆ ! ಇನ್ನ ಎಷ್ಟು ದಿನಗಳವರೆಗೆ ಕಾಂಗ್ರೆಸ್ಸಿಗೆ ರಾಜಸ್ಥಾನದಲ್ಲಿ ಆಳ್ವಿಕೆ ಮಾಡಲು ನೀಡುವುದು ?
  • ಯಾವಾಗಲಾದರೂ ಇತರ ಧರ್ಮೀಯರ ಹಬ್ಬಗಳ ಸಮಯದಲ್ಲಿ ಇಂತಹ ನಿರ್ಬಂಧವನ್ನು ಹೇರಲಾಗುತ್ತದೆಯೇ ?