ಭಗವದ್ಗೀತೆ ಕಲಿಸುವ ವಿರುದ್ಧದ ಅರ್ಜಿ ತಿರಸ್ಕೃತ !
ಕರ್ಣಾವತಿ (ಗುಜರಾತ್) – ಭಗವದ್ಗೀತೆ ಯಾವುದೇ ಧಾರ್ಮಿಕ ಸಿದ್ಧಾಂತ ಕಲಿಸುವುದನ್ನು ಬೆಂಬಲಿಸುವುದಿಲ್ಲ. ಭಗವದ್ಗೀತೆಯಲ್ಲಿ ‘ಫಲದ ಅಪೇಕ್ಷೆ ಇಡದೆ ಕರ್ಮ ಮಾಡುವುದರ ಮೇಲೆ ನಂಬಿಕೆ ಇಡಬೇಕು’, ಎಂಬುದನ್ನು ಕಲಿಸುವುದು ಮೂಲಭೂತ ನೈತಿಕ ತತ್ವವಾಗಿದೆ. ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವುದು, ಇದು ನೀತಿಶಾಸ್ತ್ರ ವಿಷಯ ಕಲಿಸುವಂತೆ ಇದೆ, ಎಂದು ಗುಜರಾತ್ ಉಚ್ಚನ್ಯಾಯಾಲಯವು ಹೇಳಿದೆ. ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವ ರಾಜ್ಯ ಸರಕಾರದ ಇತ್ತೀಚಿನ ನಿರ್ಧಾರದ ವಿರುದ್ಧ ‘ಜಮಿಯತ್ ಉಲೇಮಾ-ಎ-ಹಿಂದ್’ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಗುಜರಾತ್ ಉಚ್ಚನ್ಯಾಯಾಲಯವು ಮೇಲಿನ ನಿಲುವನ್ನು ತೆಗೆದುಕೊಂಡಿದೆ. ‘ಭಗವದ್ಗೀತೆ ಕಲಿಸುವ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಕೇವಲ ‘ಒಂದು ಪ್ರಚಾರ’ ಮತ್ತು ‘ಸ್ಟಂಟ್’ ಆಗಿದೆಯೇ ಹೊರತು ಬೇರೇನೂ ಅಲ್ಲ’, ಎಂಬ ಪದಗಳಲ್ಲಿ ಗುಜರಾತ್ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ಪ್ರಣವ್ ತ್ರಿವೇದಿ ಅವರ ವಿಭಾಗೀಯ ಪೀಠವು ಅರ್ಜಿದಾರರ ಕಿವಿ ಹಿಂಡಿದೆ.
ಗುಜರಾತ್ ರಾಜ್ಯ ವಿಧಾನಸಭೆಯು ಫೆಬ್ರವರಿ 2024 ರಲ್ಲಿ ರಾಜ್ಯದಲ್ಲಿ 6 ನೇ ತರಗತಿಯಿಂದ 12 ನೇ ತರಗತಿಯವರೆಗಿನ ಮಕ್ಕಳಿಗೆ ಭಗವದ್ಗೀತೆಯ ತತ್ವಗಳು, ಶ್ಲೋಕಗಳು ಮತ್ತು ಪ್ರಾರ್ಥನೆಗಳನ್ನು ಕಲಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ಆ ನಂತರ ರಾಜ್ಯ ಸರಕಾರವು ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವ ನಿರ್ಣಯ ತೆಗೆದುಕೊಂಡಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು ಯುಕ್ತಿವಾದ ಮಂಡಿಸಿ, ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿಯ ಪ್ರಕಾರ, ಜಾತ್ಯತೀತ ಮನೋಭಾವನೆಯಲ್ಲಿ ಎಲ್ಲ ಧರ್ಮಗಳ ತತ್ವಗಳನ್ನು ಶಾಲೆಗಳಲ್ಲಿ ಬೋಧಿಸಬೇಕು. ಅವರು ಕೇವಲ ಒಂದು ಧರ್ಮವನ್ನು ಆಧರಿಸಿರಬಾರದು. ಸರಕಾರದ ನಿರ್ಧಾರಕ್ಕೆ ಯಾವುದೇ ಧಾರ್ಮಿಕ ಬಣ್ಣ ಇರುವುದೆಂಬ ಅರ್ಜಿದಾರರ ವಾದವನ್ನು ಉಚ್ಚನ್ಯಾಯಾಲಯವು ಅಸಮ್ಮತಿ ತೋರಿಸಿದೆ. ಅಲ್ಲದೆ, ಹೊಸ ಶಿಕ್ಷಣ ನೀತಿಯು ಏಕಕಾಲದಲ್ಲಿ ಒಂದೇ ಮೂಲದಿಂದ ಬೋಧನೆ ಮಾಡುವುದನ್ನು ನಿಷೇಧಿಸುವುದಿಲ್ಲ, ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಹೇಳಿದ್ದಾರೆ.
‘Teaching Bhagavad Gita in schools is like teaching ethics’. – Gujarat High Court.
The Court dismissed the petition against teaching Bhagavad Gita in school.
VC: @LawChakra pic.twitter.com/HSPxWCPKpe
— Sanatan Prabhat (@SanatanPrabhat) November 22, 2024