ದ್ವೇಷಯುಕ್ತ ಹೇಳಿಕೆಗಳ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿನ ಅರ್ಜಿಯ ಮೇಲೆ ಹಿಂದೂ ಸಂಘಟನೆಗಳಿಂದ ಹಸ್ತಕ್ಷೇಪ ಅರ್ಜಿ ದಾಖಲು
ನವದೆಹಲಿ – ಸರ್ವೋಚ್ಚ ನ್ಯಾಯಾಲಯದಲ್ಲಿ ದ್ವೇಷಯುಕ್ತ ಹೇಳಿಕೆಗಳ ಬಗ್ಗೆ ಹಾಕಲಾಗಿದ್ದ ಅರ್ಜಿಯ ಮೇಲೆ ‘ಹಿಂದೂ ಫ್ರಂಟ ಫಾರ ಜಸ್ಟಿಸ’ ಎಂಬ ಹಿಂದೂ ಸಂಘಟನೆಯು ಹಸ್ತಕ್ಷೇಪ ಅರ್ಜಿಯನ್ನು ದಾಖಲಿಸಿದೆ. ಇದರಲ್ಲಿ ಹಿಂದೂ ದ್ವೇಷದ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಾಗೆಯೇ ದೇಶದಲ್ಲಿ ಮುಸಲ್ಮಾನ, ಹಾಗೆಯೇ ಕ್ರೈಸ್ತ ಮಿಶನರಿಗಳಿಂದ ಹಿಂದೂಗಳ ಮತಾಂತರದ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದೆ.
೧. ಉತ್ತರಾಖಂಡದ ಹರಿದ್ವಾರದಲ್ಲಿ ಡಿಸೆಂಬರ ೧೭, ೨೦೨೧ರಂದು ಯತಿ ನರಸಿಂಹಾನಂದರು ಆಯೋಜಿಸಿದ ಧರ್ಮಸಂಸತ್ತಿನಲ್ಲಿ, ಹಾಗೆಯೇ ಡಿಸೆಂಬರ ೧೯, ೨೦೨೧ರಂದು ದೆಹಲಿಯಲ್ಲಿನ ಹಿಂದೂ ಯುವಾ ವಾಹಿನಿಯ ಕಾರ್ಯಕ್ರಮದಲ್ಲಿ ದ್ವೇಷಪೂರ್ಣ ಭಾಷಣ ಮಾಡಿರುವ ಸಂದರ್ಭದಲ್ಲಿ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ಮನವಿ ಮಾಡುತ್ತ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ. ಇದರ ಮೇಲೆ ಆಲಿಕೆ ನಡೆಯುತ್ತಿದೆ. ಇದರಲ್ಲಿ ‘ಹಿಂದೂ ಫ್ರಂಟ ಫಾರ ಜಸ್ಟಿಸ’ನಿಂದಲೂ ಈ ಹಸ್ತಕ್ಷೇಪ ಅರ್ಜಿಯನ್ನು ದಾಖಲಿಸಲಾಗಿದೆ.
(ಸೌಜನ್ಯ : TIMES NOW)
‘ಸರ ತನ ಸೆ ಜುದಾ’ (ಶಿರಚ್ಛೇದ ಮಾಡುವುದು) ಎಂದು ಹೇಳುವವರ ಮೇಲೆ ಕಾರ್ಯಾರಣೆ ಆಗುತ್ತಿಲ್ಲ !
ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನರವರು ದಾಖಲಿಸಿದ ಹಸ್ತಕ್ಷೇಪ ಅರ್ಜಿಯಲ್ಲಿ ಮುಂದಿನಂತೆ ಹೇಳಲಾಗಿದೆ. ಅನೇಕ ಘಟನೆಗಳಲ್ಲಿ ಮುಸಲ್ಮಾನ ಗುಂಪುಗಳಿಂದ ‘ಸರ ತನ ಸೆ ಜುದಾ’ (ಶಿರಚ್ಛೇದ ಮಾಡುವುದು) ಎಂದು ಘೋಷಣೆ ಮಾಡಲಾಯಿತು. ಬಹಿರಂಗವಾಗಿ ಶಿರಚ್ಛೇದ ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇನ್ನೊಂದು ಕಡೆಯಲ್ಲಿ ಹಾಸ್ಯ ಕಲಾವಿದರಿಂದ ಹಿಂದೂಗಳ ದೇವತೆಗಳ ಮೇಲೆ ಅಶ್ಲೀಲ ಮತ್ತು ಹೊಲಸು ಹಾಸ್ಯ ಮಾಡಲಾಗುತ್ತಿರುವುದು ಕಂಡುಬರುತ್ತಿದೆ. ಕೆಲವು ದಿನಗಳ ಹಿಂದೆ ಶಾಯರ (ಉರ್ದು ಕವಿ) ಮುನವ್ವರ ಫಾರೂಕಿಯೂ ಭಗವಾನ ಶ್ರೀರಾಮ ಮತ್ತು ಸೀತಾ ಮಾತೆಯರ ವಿರುದ್ಧ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿದ್ದನು. ಹಿಂದೂಗಳ ವಿರುದ್ಧ ಇಂತಹ ದ್ವೇಷಯುಕ್ತ ಹೇಳಿಕೆಗಳ ನಂತರ ಮುಸಲ್ಮಾನರ ಕುಕೃತ್ಯಗಳು ಹೆಚ್ಚಾಗಿವೆ. ಹಿಂದೂಗಳ ಪ್ರತಿ ಮುಸಲ್ಮಾನರಲ್ಲಿ ದ್ವೇಷ ಭಾವನೆಯು ತೀವೃಗತಿಯಲ್ಲಿ ಹೆಚ್ಚುತ್ತಿದೆ. ಆದರೆ ಪೊಲೀಸರು ರಾಜಕೀಯ ಕಾರಣಗಳಿಂದ, ಹಾಗೆಯೇ ಗುಂಪಿನ ಭಯದಿಂದಾಗಿ ಆರೋಪಿಗಳ ಮೇಲೆ ಕಾರ್ಯಾಚರಣೆ ಮಾಡಲು ಹೆದರುತ್ತಿದ್ದಾರೆ. ಅತ್ಯಂತ ವಿಶೇಷ ಅಥವಾ ಹತಬಲತೆಯ ನಂತರ ಪೊಲೀಸರಿಂದ ಇಂತಹ ಅಪರಾಧಗಳ ನೋಂದಣಿಯಾಗಿದೆ. ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ದ್ವೇಷವನ್ನು ತಡೆಯಲು ಯಾವುದೇ ಪ್ರಭಾವಿ ಕಾರ್ಯಾಚರಣೆ ನಡೆದಿಲ್ಲ.
ಕ್ರೈಸ್ತ ಮಿಶನರಿಗಳಿಂದ ಹಿಂದೂಗಳ ಮತಾಂತರ !
ಈ ಅರ್ಜಿಯಲ್ಲಿ ಮುಂದುವರಿದು, ಭಾರತದಲ್ಲಿ ವಿವಿಧ ಭಾಗಗಳಲ್ಲಿ ಕ್ರೈಸ್ತ ಮಿಶನರಿಗಳು ಸಕ್ರೀಯರಾಗಿದ್ದಾರೆ. ಅವರು ಬಡ ಹಿಂದೂಗಳನ್ನು ಆಮಿಷವೊಡ್ಡಿ ಮತಾಂತರಿಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನಾಂಶ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದೂಗಳಿದ್ದಾರೆ. ಮೇಘಾಲಯ, ಝಾರಖಂಡ, ಓಡಿಶಾ, ಛತ್ತೀಸಗಡ, ಹಾಗೆಯೇ ಭಾರತದಲ್ಲಿನ ಇತರ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ, ಎಂದು ಹೇಳಲಾಗಿದೆ.