ಬುರಹಾನಪುರ (ಮಧ್ಯಪ್ರದೇಶ)ದ ಘಟನೆ
ಬುರಹಾನಪುರ (ಮಧ್ಯಪ್ರದೇಶ) – ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಬಾ ನವನಾಥ ಅವರ ಸಮಾಧಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಸಂಭವಿಸಿದೆ. ಈ ವೇಳೆ ಕಲ್ಲು ತೂರಾಟ, ಗುಂಡು ಹಾರಾಟ ನಡೆದಿದೆ. ಪೊಲೀಸರು ಕ್ರಮ ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯಿಂದ ಸಮಾಧಿಯನ್ನು ಕಬಳಿಸುವ ಮುಸ್ಲಿಮರ ಸಂಚನ್ನು ಹಿಂದೂಗಳು ವಿಫಲಗೊಳಿಸಿದರು ಎಂದು ಹೇಳಲಾಗುತ್ತಿದೆ.
ಹಿಂದೂಗಳ ಪ್ರಕಾರ, ಇಲ್ಲಿ ಬಾಬಾ ನವನಾಥರ ಸಮಾಧಿ ಇದೆ ಎಂದು ಹೇಳುತ್ತಾರೆ, ಆದರೆ ಮುಸ್ಲಿಮರು ಇದು ದರ್ಗಾ (ಗೋರಿಯ ಸ್ಥಳದಲ್ಲಿ ನಿರ್ಮಿಸಿದ ಕಟ್ಟಡ) ಎಂದು ಹೇಳುತ್ತಿದ್ದಾರೆ. ಹಿಂದೂಗಳು ಇಲ್ಲಿನ ಸಮಾಧಿಯ ಪ್ರದೇಶಕ್ಕೆ ಕೇಸರಿ ಬಣ್ಣವನ್ನು ಹಚ್ಚಿದ್ದರು. ಇದರ ವಿರುದ್ಧ ಮುಸ್ಲಿಮರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ನಂತರ ಪೊಲೀಸರು ಮತ್ತು ಆಡಳಿತ ಇಲ್ಲಿಗೆ ಬಂದು ಸಭೆ ನಡೆಸಿದರು. ಆ ವೇಳೆ ನಡೆದ ವಾಗ್ವಾದದಿಂದ ಹೊಡೆದಾಟ ನಡೆದಿದೆ. ಪೊಲೀಸರು ತಡೆಯಲು ಪ್ರಯತ್ನಿಸಿದರು; ಆದರೆ ಅವರು ಮೊದಲಿಗೆ ಯಶಸ್ವಿಯಾಗಲಿಲ್ಲ. ಈ ವೇಳೆ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ನಂತರ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘರ್ಷಣೆಯಲ್ಲಿ 4 ಮಂದಿ ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವುದರಿಂದ, ಅವರು ಮತಾಂಧರ ಇಂತಹ ಯಾವುದೇ ಕುತಂತ್ರವನ್ನು ಯಶಸ್ವಿಯಾಗಲು ಬಿಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! |