ಸಂಸದ ಇಮ್ತಿಯಾಜ್ ಜಲೀಲ್ ಇವರಿಂದ ಸರಣಿ ಉಪವಾಸ !
ಸಂಭಾಜಿನಗರ – ‘ಔರಂಗಾಬಾದ’ ಜಿಲ್ಲೆಯ ಹೆಸರು ಬದಲಾಯಿಸಿ ಛತ್ರಪತಿ ಸಂಭಾಜಿ ನಗರ ಎಂದು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರ ನಿರ್ಧರಿಸಿದೆ; ಆದರೆ ಈಗ ಈ ನಿರ್ಣಯದ ಬಗ್ಗೆ ಎಂ.ಐ.ಎಂ. ಪಕ್ಷ ವಿರೋಧಿಸುತ್ತಿದೆ. ಈ ನಿರ್ಣಯಕ್ಕೆ ವಿರೋಧಿಸುತ್ತಾ ಛತ್ರಪತಿ ಸಂಭಾಜಿನಗರದ ನಾಮಕರಣ ಔರಂಗಾಬಾದ ಎಂದು ಮಾಡಬೇಕು, ಅದಕ್ಕಾಗಿ ಮಾರ್ಚ್ ೪ ರಿಂದ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ಸರಣಿ ಉಪವಾಸ ಆರಂಭಿಸಿದ್ದಾರೆ. (ಹಿಂದೂ ದ್ವೇಷದ ಕಾಮಾಲೆ ಆಗಿರುವ ಎಂ.ಐ.ಎಂ. ಪಕ್ಷದ ಸಂಸದನಿಂದ ಇನ್ನು ಯಾವ ಅಪೇಕ್ಷೆ ಮಾಡಲು ಸಾಧ್ಯ ? – ಸಂಪಾದಕರು) ಈ ಉಪವಾಸದಲ್ಲಿ ಎಂ.ಐ.ಎಂ. ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಹಭಾಗಿಯಾಗಿದ್ದು ಈ ಸಮಯದಲ್ಲಿ ‘ಐ ಲವ್ ಔರಂಗಾಬಾದ್’ ಹೆಸರಿನ ಫಲಕಗಳು ತೆಗೆದುಕೊಂಡು ಕೆಲವು ಜನರು ಈ ಉಪವಾಸದಲ್ಲಿ ಸಹಭಾಗಿದ್ದಾರೆ. ‘ರಾಜಕೀಯಕ್ಕಾಗಿ ನಗರಗಳ ಹೆಸರು ಬದಲಾಯಿಸಲಾಗಿದೆ’, ಎಂದು ಜಲೀಲ್ ಆರೋಪಿಸಿದ್ದಾರೆ. ಉಪವಾಸದ ಸ್ಥಳದಲ್ಲಿ ಬೃಹತ್ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ.
ಇಮ್ತಿಯಾಜ್ ಜಲೀಲ್ ಇವರು, ಈ ಸರಣಿ ಉಪವಾಸ ಎಲ್ಲಿಯವರೆಗೆ ನಡೆಯುವುದು ?
ಇದರ ಬಗ್ಗೆ ಏನು ಹೇಳಲಾಗುವುದಿಲ್ಲ. ಉಪವಾಸಕ್ಕಾಗಿ ಬಂದಿರುವವರು ಸಾಮಾನ್ಯ ಎಲ್ಲರೂ ಔರಂಗಾಬಾದದವರೆ ಆಗಿದ್ದಾರೆ. ‘ಔರಂಗಾಬಾದದ ಹೆಸರು ಇದು ಔರಂಗಾಬಾದವೇ ಇಡಬೇಕು’, ಹೀಗೆ ಅವರ ಭಾವನೆಯಾಗಿದೆ. ನಾವು ಯಾವುದೇ ರೀತಿಯ ರಾಜಕೀಯ ಮಾಡುತ್ತಿಲ್ಲ. ಇದು ನನ್ನ ನಗರವಾಗಿದ್ದು ಅದರ ಜೊತೆಗೆ ನಮ್ಮ ಭಾವನೆಗಳು ಕೂಡಿದೆ. ‘ನಮ್ಮ ನಗರದ ಹೆಸರು ದೆಹಲಿಯ ಮತ್ತು ಮುಂಬಯಿಲ್ಲಿ ಕುಳಿತು ಬದಲಾಯಿಸಲು ಸಾಧ್ಯವಿಲ್ಲ’, ಎಂದು ಸರಕಾರಕ್ಕೆ ಹೇಳಬೇಕಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇದ್ದರೂ ನಿಮ್ಮ ಸರ್ವಾಧಿಕಾರ ನಡೆಯುವುದಿಲ್ಲ. ಆದ್ದರಿಂದ ನಮಗೆ ಹೆಸರು ಬದಲಾವಣೆಯ ನಿರ್ಣಯ ಒಪ್ಪಿಗೆ ಇಲ್ಲ ಎಂದು ಹೇಳಿದರು. (ಔರಂಗಾಬಾದ ರೀತಿಯಲ್ಲಿ ಮೊಘಲ ಆಕ್ರಮಕರ ಹೆಸರು ನೀಡಿರುವ ಎಲ್ಲಾ ನಗರಗಳ, ಗ್ರಾಮಗಳ, ರಸ್ತೆಯ ಹೆಸರು ಬದಲಾವಣೆ ಮಾಡಬೇಕು, ಇದು ಜನರ ಭಾವನೆಯಾಗಿದೆ, ಇದನ್ನು ಜಲೀಲ್ ಗಮನದಲ್ಲಿಟ್ಟುಕೊಳ್ಳಬೇಕು !- ಸಂಪಾದಕರು)
ಸಂಪಾದಕೀಯ ನಿಲುವುಛತ್ರಪತಿ ಸಂಭಾಜಿ ಮಹಾರಾಜರನ್ನು ಹಿಂಸಿಸಿ ಹತ್ಯೆ ಮಾಡಿರುವ ಮತ್ತು ಲಕ್ಷಾಂತರ ಹಿಂದುಗಳನ್ನು ಕ್ರೂರವಾಗಿ ಹತ್ಯೆ ಮಾಡಿ ಸಾವಿರಾರು ದೇವಸ್ಥಾನಗಳ ಧ್ವಂಸ ಮಾಡಿರುವ ಔರಂಗಜೇಬ ಬಗ್ಗೆ ಇಮ್ತಿಯಾಜ್ ಜಲೀಲ್ ಇವರಿಗೆ ಎಷ್ಟು ಪ್ರಿಯವಾಗಿದ್ದಾನೆ, ಎಂದು ಈ ಉಪವಾಸದಿಂದ ತಿಳಿದು ಬರುತ್ತದೆ, ಇಂತಹ ಪೋಸ್ಟರ್ ಹಚ್ಚಿರುವ ಪ್ರಕರಣದಲ್ಲಿ ಸಂಬಂಧಪಟ್ಟವರ ಮೇಲೆ ಪೊಲೀಸರು ಯಾವಾಗ ಕ್ರಮ ಕೈಗೊಳ್ಳುವುದು ? ಭಾರತದಲ್ಲಿನ ನಗರಗಳು, ಗ್ರಾಮಗಳಿಗೆ ನೀಡಿರುವ ಮೊಘಲ್ ಆಕ್ರಮಕರ ಹೆಸರು ಆದಷ್ಟು ಬೇಗನೆ ಬದಲಾಯಿಸುವುದಕ್ಕಾಗಿ ಸರಕಾರದಿಂದ ಪ್ರಯತ್ನ ಮಾಡುವುದೇ ಅವಶ್ಯಕ ! |