Canada Allegations On Narendra Modi : ಪ್ರಧಾನಿ ಮೋದಿ ಅವರಿಗೆ ನಿಜ್ಜರ ಹತ್ಯೆಯ ಷಡ್ಯಂತ್ರದ ಮಾಹಿತಿ ಇತ್ತು: ಕೆನಡಾದ ಲಜ್ಜಾಸ್ಪದ ಆರೋಪ !

ಓಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ಹತ್ಯೆಯ ಪ್ರಕರಣದಲ್ಲಿ ಕೆನಡಾ ಮೊದಲಿನಿಂದಲೂ ಭಾರತದ ಮೇಲೆ, ಭಾರತದ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳ ಮೇಲೆ, ನಂತರ ಭಾರತದ ಗೃಹ ಸಚಿವ ಅಮಿತ ಶಹಾ ಅವರ ಮೇಲೆ ಮತ್ತು ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆಯೂ ಆರೋಪ ಹೊರಿಸಿದೆ. ‘ ಹರದೀಪ ಸಿಂಹ ನಿಜ್ಜರ್ ಹತ್ಯೆ ಮತ್ತು ಅದಕ್ಕೆ ಸಂಬಂಧಿತ ಷಡ್ಯಂತ್ರದ ಮಾಹಿತಿ ನರೇಂದ್ರ ಮೋದಿ ಅವರಿಗೂ ಇತ್ತು, ಎಂದು ಕೆನಡಾದ ಸುರಕ್ಷಾ ವ್ಯವಸ್ಥೆಯ ಅಭಿಪ್ರಾಯ ಹೊಂದಿರುವ ವಾರ್ತೆಯನ್ನು ಕೆನಡಾದಲ್ಲಿನ ಪ್ರಸಿದ್ಧ ದೈನಿಕದಲ್ಲಿ ಅಧಿಕಾರಿಗಳ ಮೂಲದಿಂದ ನೀಡಲಾಗಿದೆ. ಕೆನಡಾದಲ್ಲಿ ಭಾರತದ ವಿದೇಶಿ ಹಸ್ತಕ್ಷೇಪದ ಕಾರ್ಯ ಚಟುವಟಿಕೆಯಲ್ಲಿ ಗುಪ್ತಚರ ಮೌಲ್ಯಮಾಪನದ ಮೇಲೆ ಕಾರ್ಯನಿರ್ವಹಿಸುವ ಓರ್ವ ಹಿರಿಯ ರಾಷ್ಟ್ರೀಯ ಸುರಕ್ಷಾ ಅಧಿಕಾರಿಗಳು ಈ ಬಗ್ಗೆ ದಾವೆ ಮಾಡಿದ್ದಾರೆ. ಈ ಅಧಿಕಾರಿಗಳ ಪರಿಚಯ ಬಹಿರಂಗವಾಗಿಲ್ಲ.
‘ ಗ್ಲೋಬ್ ಅಂಡ್ ಮೇಲ್ ‘ ಪತ್ರಿಕೆಯ ಪ್ರಕಾರ ಅಧಿಕಾರಿಗಳು ಹೇಳಿರುವುದೇನೆಂದರೆ, ಕೆನಡ ಮತ್ತು ಅಮೇರಿಕಾ ಗುಪ್ತಚರರು ನಿಜ್ಜರ ಹತ್ಯೆಯ ಕಾರ್ಯ ಚಟುವಟಿಕೆಯಲ್ಲಿ ಭಾರತದ ಗೃಹ ಸಚಿವ ಅಮಿತ್ ಶಹಾ ಅವರನ್ನು ಜೋಡಿಸಲಾಗಿದೆ. ನರೇಂದ್ರ ಮೋದಿ ಅವರ ಆಪ್ತ ರಾಷ್ಟ್ರೀಯ ಸುರಕ್ಷಾ ಸಲಹೆಗಾರರಾದ ಅಜಿತ್ ಡೋಬಾಲ್ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರಿಗೂ ಕೂಡ ಇದೆಲ್ಲದರ ಬಗ್ಗೆ ಮಾಹಿತಿ ಇರಬಹುದು, ಎಂದು ಪತ್ರಿಕೆ ವರದಿ ಮಾಡಿದೆ.

ಕೆನಡಾದ ಬಳಿ ಸಾಕ್ಷಿ ಇಲ್ಲ

ಈ ಅಧಿಕಾರಿಯು ಕೆನಡಾದ ಬಳಿ ಮೋದಿ ಅವರಿಗೆ ಹತ್ಯೆಯ ಕುರಿತು ಮಾಹಿತಿ ಇರುವುದರ ಬಗ್ಗೆ ಯಾವುದೇ ದೃಢವಾದ ಸಾಕ್ಷಿ ಇಲ್ಲ; ಆದರೆ ಭಾರತದಲ್ಲಿನ ಮೂವರು ಹಿರಿಯ ರಾಜಕೀಯ ವ್ಯಕ್ತಿಗಳಿಗೆ (ಅಮಿತ ಶಹಾ, ಎಸ್.ಜೈಶಂಕರ್ ಮತ್ತು ಅಜಿತ್ ಡೋಬಾಲ್) ಈ ಹತ್ಯೆಯ ಮಾಹಿತಿ ಇರಲಿಲ್ಲ ಎಂದು ನಂಬಲು ಸಾಧ್ಯವಿಲ್ಲ .

ಕೆನಡಾದ ಮತ್ತೊಂದು ಆರೋಪ !

ಕೆನಡಾದ.’ ಪ್ರಿವಿ ಕೌನ್ಸಿಲ್ ‘ ಕಾರ್ಯಾಲಯವು ಒಂದು ಮನವಿಯಲ್ಲಿ ಹೇಳಿರುವ ಪ್ರಕಾರ, ಪೊಲೀಸರು ನೀಡಿರುವ ಮಾಹಿತಿಯಂತೆ ಭಾರತ ಸರಕಾರದ ಏಜೆಂಟ್ ಗಳು ಕೆನಡಾದಲ್ಲಿ ಗಂಭೀರ ಅಪರಾಧಿ ಕೃತ್ಯಗಳಲ್ಲಿ ತೊಡಗಿದ್ದಾರೆ ; ಆದರೆ ಕೆನಡಾ ಸರಕಾರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇಲ್ಲಿಯತನಕ ಕೆನಡಾ ಮಿತಿ ಮೀರಿ ಮಾತನಾಡಿರುವುದರಿಂದ ಭಾರತ ಕಠಿಣ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿದೆ . ಕೆನಡಾದ ಮೇಲೆ ಭಾರತ ಸಂಪೂರ್ಣ ನಿಷೇಧ ಹೇರಿ ಅದರ ಜೊತೆಗಿನ ಎಲ್ಲಾ ರೀತಿಯ ಸಂಬಂಧ ಕಡಿದುಕೊಳ್ಳಬೇಕು !