ವಿದ್ಯುತ್ ಕಂಪನಿಗೆ ೧೫೦ ಕೋಟಿ ರೂಪಾಯಿ ಪಾವತಿ ಬಾಕಿ; ‘ಹಿಮಾಚಲ ಭವನ’ ಕಟ್ಟಡ ಹರಾಜಿಗೆ ಆದೇಶಿಸಿದ ನ್ಯಾಯಾಲಯ

ದೆಹಲಿಯಲ್ಲಿನ ಹಿಮಾಚಲ ಪ್ರದೇಶದ ‘ಹಿಮಾಚಲ ಭವನ’ ದ ಹರಾಜು

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ದೆಹಲಿಯಲ್ಲಿನ ‘ ಹಿಮಾಚಲ ಭವನ ‘ ಜಪ್ತಿ ಮಾಡುವ ಆದೇಶ ನೀಡಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಜಲ ವಿದ್ಯುತ್ ನಿರ್ಮಾಣ ಮಾಡುವ ಕಂಪನಿಗೆ ೧೫೦ ಕೋಟಿ ರೂಪಾಯಿ ಬಾಕಿ ಹಣ ನೀಡುವುದು ಬಾಕಿ ಇತ್ತು. ಈ ಪ್ರಕರಣ ಉಚ್ಚ ನ್ಯಾಯಾಲಯಕ್ಕೆ ಹೋದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ. ಉಚ್ಚ ನ್ಯಾಯಾಲಯವು ಸರಕಾರಕ್ಕೆ ದಂಡ ಕೂಡ ಪಾವತಿಸಲು ಆದೇಶ ನೀಡಿತ್ತು ; ಆದರೆ ಸರಕಾರವು ನ್ಯಾಯಾಲಯದ ಆದೇಶದ ಪಾಲನೆ ಮಾಡಿಲ್ಲ. ಅದರ ನಂತರ ನ್ಯಾಯಾಲಯವು ತೀರ್ಪು ಕಾದಿರಿಸಿತ್ತು.

ಈ ಪ್ರಕರಣವು ಹಿಮಾಚಲ ಪ್ರದೇಶದಲ್ಲಿನ ಲಾಹೌಲ – ಸ್ಪಿತಿ ಜಿಲ್ಲೆಯಲ್ಲಿನ ಚಿನಾಬ್ ನದಿಯ ಮೇಲೆ ೪೦೦ ಮೆಗಾ ವ್ಯಾಟ್ ಕ್ಷಮತೆಯ ಸೇಲಿ ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ್ದಾಗಿದೆ. ಉಚ್ಚ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಸರಕಾರಕ್ಕೆ ಕಂಪನಿಯಿಂದ ಜಮಾಗೊಳಿಸಿರುವ ೬೪ ಕೋಟಿ ರೂಪಾಯಿ ಶೇಕಡ ೭ ರಷ್ಟು ಬಡ್ಡಿ ಸಹಿತ ಹಿಂತಿರುಗಿಸಲು ಹೇಳಿತ್ತು. ಬಾಕಿ ಪಾವತಿಸುವಲ್ಲಿ ವಿಫಲವಾಗಿರುವುದರ ಗಂಭೀರ ಪರಿಣಾಮ ಎದುರಿಸಬೇಕಾಗುವುದು, ಎಂದು ಈ ಹಿಂದೆಯೇ ನ್ಯಾಯಾಲಯವು ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ಹಣ ಸರಕಾರದ ಬೊಕ್ಕಸದಲ್ಲಿರುವುದೆಂದು ನ್ಯಾಯಾಲಯ ಹೇಳಿದೆ. ಉಚ್ಚ ನ್ಯಾಯಾಲಯದ ಆದೇಶದ ನಂತರ ಪ್ರಸ್ತುತ ಕಂಪನಿ ಹಣ ವಸೂಲಿ ಮಾಡುವುದಕ್ಕಾಗಿ ‘ಹಿಮಾಚಲ ಭವನ’ವನ್ನು ಹರಾಜು ಮಾಡುವ ಸಾಧ್ಯತೆಯಿದೆ.

ಸರಕಾರ ಈ ಬಗ್ಗೆ ಅಭ್ಯಾಸ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದು ! – ಮುಖ್ಯಮಂತ್ರಿ ಸುಖೂ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ ಸಿಂಗ್ ಸುಖೂ ಅವರು ಈ ನಿರ್ಣಯದ ಕುರಿತು ಮಾತನಾಡಿ, ನಾನು ಇಲ್ಲಿಯವರೆಗೆ ನ್ಯಾಯಾಲಯದ ಆದೇಶವನ್ನು ಓದಿಲ್ಲ. ಸರಕಾರವು ಉಚ್ಚ ನ್ಯಾಯಾಲಯದ ತೀರ್ಪಿನ ಅಭ್ಯಾಸ ಮಾಡುತ್ತಿದೆ. ನಾನು ಅಧಿಕಾರಿಗಳ ಜೊತೆಗೆ ಇದರ ಕುರಿತು ಚರ್ಚಿಸಿ ಮುಂದಿನ ಹೆಜ್ಜೆ ನಿರ್ಧರಿಸುವೆನು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ ಕಾಂಗ್ರೆಸ್ ಸರಕಾರವು ಜನರಿಗೆ ಅನೇಕ ಸೌಕರ್ಯಗಳನ್ನು ಉಚಿತವಾಗಿ ನೀಡುವ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಈ ಆಶ್ವಾಸನೆ ಪೂರ್ಣಗೊಳಿಸುವಾಗ ಸರಕಾರ ದಿವಾಳಿ ಆಗಿರುವುದರಿಂದ ಸರಕಾರದ ಬೊಕ್ಕಸ ಖಾಲಿ ಆಗಿರುವುದರ ಪರಿಣಾಮವೇ ಇದಾಗಿದೆ. ಇನ್ನಾದರೂ ದೇಶದ ಜನರು ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ಸಿನ ಸುಳ್ಳು ಆಶ್ವಾಸನೆಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು !