ಮಸೀದಿಯನ್ನು ವಶಕ್ಕೆ ಪಡೆದು ಅನುಮತಿಯಿಲ್ಲದೆ ಯಾರನ್ನೂ ಪ್ರವೇಶಿಸಲು ಅವಕಾಶ ಕೊಡಬೇಡಿ! – ಪೊಲೀಸರಿಗೆ ಕೋಲಕಾತಾ ಉಚ್ಚನ್ಯಾಯಾಲಯದ ಆದೇಶ
ಕೋಲಕಾತಾ (ಬಂಗಾಳ) – ಕೋಲಕಾತಾ ಉಚ್ಚನ್ಯಾಯಾಲಯವು ಪೊಲೀಸರಿಗೆ ಪೂರ್ವ ಮಿದನಾಪುರದಲ್ಲಿರುವ ಮಸೀದಿಯನ್ನು ವಶಕ್ಕೆ ಪಡೆಯುವಂತೆ ಆದೇಶ ನೀಡಿದೆ. ನಮಾಜ ಮಾಡುವ 2 ಗುಂಪುಗಳ ನಡುವೆ ನಡೆದ ಘರ್ಷಣೆ ಬಳಿಕ ಈ ಆದೇಶ ನೀಡಲಾಗಿದೆ. ಈ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿಯ ಸಾವಾಗಿದೆ.
1. ನವೆಂಬರ್ 7, 2024 ರಂದು, ಉಚ್ಚ ನ್ಯಾಯಾಲಯವು ಪೂರ್ವ ಮಿದನಾಪುರದ ಎಗ್ರಾದಲ್ಲಿರುವ ಮಸೀದಿಯಲ್ಲಿ ಎರಡು ಬೇರೆ ಬೇರೆ ಗುಂಪುಗಳಿಗೆ ಬೇರೆ ಬೇರೆ ಸಮಯದಲ್ಲಿ ನಮಾಜ ಮಾಡಲು ಆದೇಶ ನೀಡಿತ್ತು; ಆದರೆ ನ್ಯಾಯಾಲಯದ ಆದೇಶ ಪಾಲಿಸಲಿಲ್ಲ. (ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಮತಾಂಧ ಮುಸಲ್ಮಾನರು ! – ಸಂಪಾದಕರು) ಆನಂತರ ನವೆಂಬರ್ 13 ರಂದು ಎರಡು ಗುಂಪುಗಳ ನಡುವೆ ಭಾರಿ ಹಿಂಸಾಚಾರನಡೆಯಿತು. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ. ಪೋಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
2. ಪೊಲೀಸರು ಮಸೀದಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಎಗ್ರಾ ಪೊಲೀಸ್ ಠಾಣೆಯ ಮುಖ್ಯಸ್ಥರ ಅನುಮತಿಯಿಲ್ಲದೆ ಯಾರಿಗೂ ಪ್ರವೇಶ ನೀಡಬಾರದು ಎಂದು ಉಚ್ಚನ್ಯಾಯಾಲಯವು ಪೊಲೀಸರಿಗೆ ಹೇಳಿದೆ. ನಾವು ತುಂಬಾ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮತ್ತೆ ಹಿಂಸಾಚಾರ ನಡೆದು ಯಾರಾದರೂ ಸತ್ತರೆ ಮಸೀದಿಯಲ್ಲಿ ನಮಾಜ ಮಾಡುವುದನ್ನು ನಿಷೇಧಿಸಲಾಗುವುದು. ಧರ್ಮದ ಕಾರಣಕ್ಕಾಗಿ ಯಾರೂ ಸಾಯಬಾರದು ಎಂದೂ ಹೇಳಿದೆ. (ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಸೀದಿಯ ಮುಂದೆ ಹೋಗುತ್ತವೆ, ಆಗ ಅವರ ಮೇಲೆ ಮಸೀದಿಯಿಂದ ದಾಳಿ ಮಾಡಲಾಗುತ್ತದೆ, ಅಂತಹ ಸಂದರ್ಭಗಳಲ್ಲಿಯೂ ‘ಪೋಲೀಸರು ಮಸೀದಿಯನ್ನು ವಶಕ್ಕೆ ಪಡೆಯಬೇಕು’, ಎಂದು ಆದೇಶ ನೀಡಬೇಕು, ಹೀಗೆಂದು ಹಿಂದೂಗಳಿಗೆ ಅನ್ನಿಸುತ್ತದೆ ! – ಸಂಪಾದಕರು)
ಸಂಪಾದಕೀಯ ನಿಲುವು
|