ಹುಗಳಿ (ಬಂಗಾಲ)ಯಲ್ಲಿ ಮತ್ತೆ ಹಿಂಸಾಚಾರ !

  • ಕಲ್ಲುತೂರಾಟದ ನಂತರ ರೀಶರಾ ರೈಲು ನಿಲ್ದಾಣ ಬಂದ್ !

  • ಹಾವಡ-ಬರ್ಡಮನ ಮಾರ್ಗದಲ್ಲಿನ ರೈಲು ರದ್ದು !

ಕೋಲಕಾತ – ಶ್ರೀ ರಾಮನವಮಿಯ ಪ್ರಯುಕ್ತ ಮಾರ್ಚ್ ೩೦ ರಂದು ನಡೆದಿರುವ ಶೋಭಾಯಾತ್ರೆಯ ಮೇಲೆ ಮತಾಂಧರು ನಡೆಸಿರುವ ದಾಳಿಯಿಂದಾಗಿ ನಡೆದ ಹಿಂಸಾಚಾರವು ಇನ್ನೂ ಮುಂದುವರೆದಿದೆ. ಏಪ್ರಿಲ್ ೩ ರಂದು ತಾಡರಾತ್ರಿಯವರೆಗೆ ಹುಗಳಿ ಇಲ್ಲಿಯ ರಿಶರಾ ರೈಲು ನಿಲ್ದಾಣದ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಆದ್ದರಿಂದ ರಿಶರಾ ರೈಲು ನಿಲ್ದಾಣ ಮುಚ್ಚಲಾಯಿತು. ಈ ಘಟನೆಯ ನಂತರ ಹಾವಡಾ – ಬರ್ಡಮನ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ರದ್ದಪಡಿಸಲಾಯಿತು. ರೈಲು ನಿಲ್ದಾಣದ ಹೊರಗೆ ಹೆಚ್ಚಿನ ಪೊಲೀಸು ಬಂದೋಬಸ್ತ್ ಮಾಡಲಾಗಿತ್ತು. ಅಲ್ಲಿ ಏಪ್ರಿಲ್ ೨ ರಂದು ಸಂಜೆ ಭಾಜಪದಿಂದ ಶ್ರೀ ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸಲಾಗಿತ್ತು. ಅದರ ಮೇಲೆ ರಿಶರಾ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಶೋಭಾಯಾತ್ರೆಯ ಮೇಲೆ ದಾಳಿ ಮಾಡಲಾಗಿತ್ತು. ಈ ಹಿಂಸಚಾರದಲ್ಲಿ ಭಾಜಪದ ಸಂಸದ ಭೀಮನ್ ಘೋಷ್ ಹಾಗೂ ಅನೇಕ ಪೊಲೀಸರು ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸೇರಿಸಲಾಗಿತ್ತು. ಹುಗಳಿ ಮತ್ತು ಅಕ್ಕ-ಪಕ್ಕದ ಪ್ರದೇಶದಲ್ಲಿ ಕಲಂ ೧೪೪ ಜಾರಿ ಮಾಡಲಾಗಿದೆ. ಇದರ ಜೊತೆಗೆ ಎರಡು ದಿನದ ಹಿಂದೆ ಹಾವಡಾದಲ್ಲಿ ನಡೆದಿರುವ ಹಿಂಸಾಚಾರದ ಪ್ರಕರಣದ ಬಗ್ಗೆ ಕೊಲಕಾತಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರದಿಂದ ಎಪ್ರಿಲ್ ೫ ರ ವರೆಗೆ ಉತ್ತರ ಕೇಳಿದೆ.

ಹಾವಡಾದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಬಿಹಾರದಿಂದ ಓರ್ವನ ಬಂಧನ

ಹಾವಡಾದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಪೊಲೀಸರು ಸುಮಿತ ಸಾವ (೧೯ ವರ್ಷ) ಇವನಿಗೆ ಬಿಹಾರದಲ್ಲಿನ ಮುಂಗೇರದಿಂದ ಬಂಧಿಸಲಾಯಿತು. ಹಾವಡಾದಲ್ಲಿನ ಶ್ರೀರಾಮನವಮಿಯ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದ ಸುಮಿತ ಸಾವ ಇವನು ಕೈಯಲ್ಲಿ ಬಂದುಕೂ ಹಿಡಿದು ಗಾಳಿಯಲ್ಲಿ ತಿರುಗಿಸುವ ವಿಡಿಯೋ ಪ್ರಸಾರವಾಗಿತ್ತು ಎಂದು ಹೇಳಲಾಗುತ್ತಿದೆ. (ಹಿಂದೂ ಯುವಕನು ಗಾಳಿಯಲ್ಲಿ ಬಂದುಕೂ ತಿರುಗಿಸಿರಿವ ವಿಡಿಯೋ ಪ್ರಸಾರವಾದ ನಂತರ ಅವನಿಗೆ ಬಂಧಿಸುವುದಕ್ಕೆ ಬಿಹಾರಗೆ ಹೋಗುವ ಬಂಗಾಲ ಪೊಲೀಸ್ ಬಂಗಾಲದಲ್ಲಿ ಮತಾಂಧರ ಎದುರು ಮಂಡಿ ಊರುತ್ತಾರೆ, ಇದೇ ವಾಸ್ತವ ! – ಸಂಪಾದಕರು) ಸಾವ ಇವನ ಬಂಧನದ ನಂತರ ಬಂಗಾಲದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಭಾಜಪವನ್ನು ಟೀಕಿಸುತ್ತಾ ಹಿಂಸಾಚಾರ ನಡೆಸಿರುವ ಆರೋಪ ಮಾಡಲಾಗುತ್ತಿದೆ. (ಗಲಭೆಯ ಆರೋಪ ಭಾಜಪದ ಮೇಲೆ ಹೊರೆಸಿ ತೃಣಮೂಲ ಕಾಂಗ್ರೆಸ್ ತನ್ನ ಪಾಪ ಮುಚ್ಚಿಡಲು ನೋಡುತ್ತಿದೆ ! – ಸಂಪಾದಕರು)

(ಸೌಜನ್ಯ : ZEE NEWS)

ಸಂಪಾದಕರ ನಿಲುವು

ತೃಣಮೂಲ ಕಾಂಗ್ರೆಸ್ಸಿನ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಕೇಂದ್ರ ಸರಕಾರವು ಈಗಲಾದರೂ ಹಸ್ತಕ್ಷೇಪ ಮಾಡಿ ಬಂಗಾಲದಲ್ಲಿ ತಕ್ಷಣದಿಂದ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !