ಹಿಂದೂಗಳ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ದಾವೆಗೆ ವಿರೋಧ
ಚೆನ್ನೈ (ತಮಿಳುನಾಡು) – ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯೆ ವಿರುದ್ಧ ಇಲ್ಲಿನ ಚುಲೈ ಪ್ರದೇಶದಲ್ಲಿ ಭಾರತ ಹಿಂದೂ ಮುನ್ನಾನಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಅರುಳ್ಮಿಗು ಆಂಗಾಲಮ್ಮನ ದೇವಸ್ಥಾನದ ಜಮೀನು ತಮಗೆ ಸೇರಿದ್ದು ಎಂದು ಇಲಾಖೆ ಹೇಳಿಕೊಂಡಿದೆ. ಚುಲೈ-ತಟ್ಟಂಕುಲಂ ಪ್ರದೇಶದ ನಿವಾಸಿಗಳಿಂದ ಇಲಾಖೆಯು ಮಾಸಿಕ ಬಾಡಿಗೆಯಾಗಿ ಹೆಚ್ಚಿನ ಮೊತ್ತವನ್ನು ಕೇಳಿದೆ. ಅಲ್ಲದೆ ಬಾಡಿಗೆ ಬಾಕಿ ಇರುವ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಾಡಿಗೆ ಪಾವತಿಸದಿದ್ದರೆ ಅತಿಕ್ರಮಣಕಾರರೆಂದು ಪರಿಗಣಿಸಿ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನು ವಿರೋಧಿಸಿ ಭಾರತ ಹಿಂದೂ ಮುನ್ನಾನಿ ಸಂಘಟನೆ ಪ್ರತಿಭಟನೆ ನಡೆಸಿತ್ತು. ಮಹಿಳೆಯರೂ ಸೇರಿದಂತೆ ಸುಮಾರು 200 ಜನರು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ. ಅರ್. ಜಯಕುಮಾರ್, ಹಾಗೂ ಹಿಂದೂ ಜನಜಾಗೃತಿ ಸಮಿತಿ ಕೂಡ ಇದರಲ್ಲಿ ಭಾಗವಹಿಸಿದ್ದರು.
ಆಂದೋಲನದ ಸಂದರ್ಭದಲ್ಲಿ ಭಾರತ ಹಿಂದೂ ಮುನ್ನಾನಿಯ ರಾಜ್ಯ ಮುಖ್ಯಸ್ಥರಾದ ಶ್ರೀ. ಆರ್. ಡಿ. ಪ್ರಭು ಮತ್ತು ಚುಲೈ-ತಟ್ಟಂಕುಲಂ ಮನೆ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀ. ಸಿ. ಬಾಲಾಜಿ ಇವರು ತಮ್ಮ ವಿಚಾರಗಳನ್ನು ಮಂಡಿಸಿದರು. ಚುಲೈ ಜವಳಿ ನೌಕರರ ಸಂಘದ ಸಂಸ್ಥಾಪಕ ಮಾಥಿ ಇವರು ಮಾತನಾಡಿ, ಹಿಂದಿನ ಹಾಗೂ ಈಗಿನ ಸರಕಾರಗಳು ದೇವಸ್ಥಾನದ ಸಂಪತ್ತನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿವೆ ಮತ್ತು ದತ್ತಿ ಇಲಾಖೆಯು ಶ್ರೀಸಾಮಾನ್ಯರಿಗೆ ಕಿರುಕುಳ ನೀಡುತ್ತಿದೆ ಎಂಬುದರ ಮಹಿತಿ ನೀಡಿದರು.