ಮಥೂರಾದಲ್ಲಿ ಸಂಸ್ಕೃತಿ ವಿದ್ಯಾಪೀಠದಲ್ಲಿ ಕಾಶ್ಮೀರಿ ಮುಸಲ್ಮಾನರಿಂದ ನಮಾಜ್

ಕ್ರಮ ಕೈಗೊಳ್ಳದೆ ಇದ್ದರೆ ಹನುಮಾನ್ ಚಾಲೀಸಾ ಓದುವೆವು ! – ಅಖಿಲ ಭಾರತೀಯ ಹಿಂದೂ ಮಹಾಸಭೆ

ಮಥೂರ (ಉತ್ತರಪ್ರದೇಶ) – ಇಲ್ಲಿಯ ಪ್ರಸಿದ್ಧ ಸಂಸ್ಕೃತಿ ವಿದ್ಯಾಪೀಠದಲ್ಲಿನ ಉದ್ಯಾನವನದಲ್ಲಿ ಕೆಲವು ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ವಿರುದ್ಧ ಮಥೂರಾದ ಹಿಂದೂತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಸಂಬಂಧಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿದ್ಯಾಪೀಠದಲ್ಲಿ ಹನುಮಾನ ಚಾಲಿಸಾ ಪಠಿಸುವೇವು, ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ನೀಡಿದ್ದಾರೆ.

ಮಹಾಸಭೆಯ ಜಿಲ್ಲಾ ಪದಾಧಿಕಾರಿ ಛಾಯಾ ಗೌತಮ ಇವರು, ವಿದ್ಯಾಪೀಠದಲ್ಲಿ ಬಹಳ ದಿನದಿಂದ ಬಹಿರಂಗವಾಗಿ ನಮಾಜ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು; ಆದರೆ ಅದರ ಸಾಕ್ಷಿ ಇಂದು ದೊರೆತಿದೆ. ವಿದ್ಯಾಪೀಠದಲ್ಲಿ ಶೇಕಡ ೮೨ ಮುಸಲ್ಮಾನ ವಿದ್ಯಾರ್ಥಿಗಳು ಸರಕಾರಿ ಶಿಷ್ಯವೇತನದಲ್ಲಿ ಶಿಕ್ಷಣ ಪಡೆಯುತ್ತಾರೆ. ಕಳೆದ ೬ ದಿನದಿಂದ ನಮಾಜ ಮಾಡಲಾಗುತ್ತಿದೆ, ಎಂದು ಛಾಯಾ ಗೌತಮ ಇವರು ದಾವೆ ಮಾಡಿದ್ದಾರೆ.

ಇನ್ನೊಂದು ಕಡೆ ವಿದ್ಯಾಪೀಠದ ಅಧಿಕಾರಿ ಕಿಶನ ಚತುರ್ವೇದಿ ಇವರು ಈ ಪ್ರಕರಣ ಒಂದು ತಿಂಗಳ ಹಳೆಯದಾಗಿದ್ದೂ ಸಂಬಂಧ ಪಟ್ಟ ವಿದ್ಯಾರ್ಥಿಗಳಿಗೆ ಈ ಪ್ರಕರಣದ ಬಗ್ಗೆ ಬುದ್ಧಿ ಹೇಳಲಾಗಿತ್ತು, ಎಂದು ದಾವೆ ಮಾಡಿದ್ದಾರೆ.

ಸಂಪಾದಕರ ನಿಲುವು

ಇಲ್ಲಿ ಕಾಶ್ಮೀರಿ ಮುಸಲ್ಮಾನರ ಬದಲು ಹಿಂದೂ ವಿದ್ಯಾರ್ಥಿಗಳು ಪೂಜಾರ್ಚನೆ ಮಾಡಿದ್ದರೆ, ಇಷ್ಟೊತ್ತಿಗೆ ಪ್ರಗತಿ(ಅಧೋಗತಿ)ಪರರ ತಂಡ ಹಿಂದೂಗಳ ವಿರುದ್ಧ ಕೂಗಾಡುತ್ತಿದ್ದರು ಹಾಗೂ ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಕೇಸರಿಕರಣವಾಗುತ್ತಿದೆ ಎಂದು ಕಿರುಚುತ್ತಿದ್ದರು, ಇದನ್ನು ತಿಳಿದುಕೊಳ್ಳಿ !