ಆಸ್ಸಾಂನಲ್ಲಿ ಭಾಜಪ ಸರ್ಕಾರದ ನಿರ್ಧಾರ
ಗುವಾಹಾಟಿ(ಆಸ್ಸಾಂ) – ಆಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯರಿರುವ ‘ಕರೀಮಗಂಜ್’ ಜಿಲ್ಲೆಯ ಹೆಸರನ್ನು ‘ಶ್ರೀ ಭೂಮಿ’ಯೆಂದು ಬದಲಾಯಿಸಲಾಗಿದೆ. ನವೆಂಬರ್ 19 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. `ಈ ನಿರ್ಣಯದಿಂದ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಗೋಚರಿಸುತ್ತದೆ’ ಎಂದು ಸರಕಾರ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಮಾತನಾಡಿ, ಬಂಗಾಳಿ ಅಥವಾ ಆಸ್ಸಾಮಿ ಭಾಷೆಯಲ್ಲಿ ‘ಕರೀಮಗಂಜ್’ ಎಂಬ ಪದವಿಲ್ಲ. ಯಾವುದಕ್ಕೆ ಭಾಷೆಯ ಆಧಾರವಿಲ್ಲವೋ, ಅಂತಹ ಹೆಸರನ್ನು ನಾವು ಬದಲಾಯಿಸುತ್ತೇವೆ. 1919 ರಲ್ಲಿ ಈ ಪ್ರದೇಶಕ್ಕೆ ಬಂದಿದ್ದ ಗುರುದೇವ ರವೀಂದ್ರನಾಥ ಠಾಗೂರ್ ಅವರು ಈ ಪ್ರದೇಶವನ್ನು ‘ಶ್ರೀ ಭೂಮಿ’ ಎಂದು ಕರೆದಿದ್ದರು.
ಸಂಪಾದಕೀಯ ನಿಲುವುಒಂದೊಂದೇ ರಾಜ್ಯದಲ್ಲಿ ಈ ಬದಲಾವಣೆ ಮಾಡುವುದಕ್ಕಿಂತ ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿರುವ ಗುಲಾಮಗಿರಿಯ ಹೆಸರುಗಳನ್ನು ಪಟ್ಟಿ ಮಾಡಿ ಅದನ್ನು ಸ್ಥಳೀಯ ಮಾಹಿತಿಯನುಸಾರ ಬದಲಾಯಿಸುವಂತೆ ಆದೇಶವನ್ನು ನೀಡುವುದು ಆವಶ್ಯಕವಾಗಿದೆಯೆಂದು ಹಿಂದೂಗಳಿಗೆ ಅನಿಸುತ್ತದೆ. |