ಚೀನಾ ಆ್ಯಪ್ ಮೂಲಕ ೨೪ ದಿನಗಳಲ್ಲಿ ದುಪ್ಪಟ್ಟು ಹಣ ಮಾಡಿಕೊಡುವ ಆಮಿಷ ತೋರಿಸಿ ಮೋಸ ಮಾಡಿದ ಸಮೂಹದ ಬಂಧನ
ದೆಹಲಿ ಪೊಲೀಸರ ಸೈಬರ್ ಶಾಖೆಯು ಒಂದು ಗ್ಯಾಂಗ್ ಅನ್ನು ಬಂಧಿಸಿದೆ. ಈ ಗುಂಪು ಚೀನಾದ ಆ್ಯಪ್ ಮೂಲಕ ೫ ಲಕ್ಷ ಭಾರತೀಯರಿಗೆ ಮೋಸ ಮಾಡಿ ೧೫೦ ಕೋಟಿ ರೂಪಾಯಿ ಲೂಟಿ ಮಾಡಿದೆ. ಈ ಮೊತ್ತ ೨೫೦ ಕೋಟಿ ರೂಪಾಯಿವರೆಗೆ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ಯಾಂಗ್ ‘೨೪ ದಿನಗಳಲ್ಲಿ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ’, ಎಂದು ಹೇಳುವ ಮೂಲಕ ಜನರನ್ನು ಮೋಸ ಮಾಡಿದೆ.