ಮುರಾದಾಬಾದ್ (ಉತ್ತರಪ್ರದೇಶ)ನಲ್ಲಿ ಪರಾರಿಯಾಗಿದ್ದ ಆರೋಪಿಯು ಚುನಾವಣೆಯಲ್ಲಿ ಸ್ಪರ್ಧಿಸಿ, ಆಯ್ಕೆಯಾಗಿ ಗ್ರಾಮದ ಸರಪಂಚನೂ ಆದ !

ಪೊಲೀಸರಿಗೆ ಮಾತ್ರ ಮಾಹಿತಿಯಿಲ್ಲ !

* ಪೊಲೀಸರ ಕಾರ್ಯವೈಖರಿಯ ಮರ್ಯಾದೆ ಹಾಳು ಮಾಡಿದ ಘಟನೆ ! ಪರಾರಿಯಾದ ಊರಿನ ಗೂಂಡಾನೊಬ್ಬನು ಚುನಾವಣೆಯಲ್ಲಿ ಸ್ಪರ್ಧಿಸಿ ಸರಪಂಚ ಆಗುವ ತನಕ ಆತನನ್ನು ಪತ್ತೆಹಚ್ಚಲು ಸಾಧ್ಯವಾಗದ ಪೊಲೀಸರಿಗೆ ನುಸುಳುಕೋರರ, ನಕ್ಸಲರು ಹಾಗೂ ಭಯೋತ್ಪಾದಕರ ಬಗ್ಗೆ ಮಾಹಿತಿ ಎಂದಾದರೂ ಸಿಗಬಹುದೇ ? ಇಂತಹ ಪೊಲೀಸರು ಜನರ ರಕ್ಷಣೆಯನ್ನು ಎಂದಾದರೂ ಮಾಡಬಹುದೇ ? ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

* ಇದಕ್ಕೆ ಕಾರಣಕರ್ತರಾದ ಪೊಲೀಸರಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು !

* ನಾವು ಯಾರನ್ನು ಆರಿಸುತ್ತೇವೆ, ಆತನ ಅಪರಾಧಿ ಹಿನ್ನೆಲೆಯನ್ನು ನೋಡದಿರುವ ಜನರು. ಇದರಿಂದ ಜನರು ನಿದ್ರಾವಸ್ಥೆಯಲ್ಲಿದ್ದಾರೆ ಎಂಬುದು ಕಂಡು ಬರುತ್ತದೆ. ಇಂತಹವರಿಗೆ ನಂತರ ಅಪರಾಧಿಗಳು ತೊಂದರೆ ನೀಡುತ್ತಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ ?

ಕುಖ್ಯಾತ ಗೂಂಡಾ ಸಂಜಯ್ ಸಿಂಗ್

ಮುರಾದಾಬಾದ್ (ಉತ್ತರಪ್ರದೇಶ) – ಪರಾರಿಯಾಗಿದ್ದ ಓರ್ವ ಕುಖ್ಯಾತ ಗೂಂಡಾನು ಗ್ರಾಮಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ನಂತರ ಗ್ರಾಮದ ಸರಪಂಚನಾದ. ಆದರೂ ಪೊಲೀಸರಿಗೆ ಆತನ ಸುಳಿವು ಸಿಗದಿರುವ ಘಟನೆ ಉತ್ತರಪ್ರದೇಶದ ಮುರಾದಾಬಾದನಲ್ಲಿ ನಡೆದಿದೆ.

ಸಂಜಯ್ ಸಿಂಗ್ ಎಂಬ ಹೆಸರಿನ ಕುಖ್ಯಾತ ಗೂಂಡಾನನ್ನು ಪೊಲೀಸರು ೫೦ ಲಕ್ಷ ರೂಪಾಯಿಯ ೩೦ ಸಾವಿರ ಲೀಟರ್ ನಕಲಿ ಸರಾಯಿಯೊಂದಿಗೆ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಮೇ ತಿಂಗಳಿನಲ್ಲಿ ಜಾಮೀನು ಸಿಕ್ಕಿತ್ತು; ಆದರೆ ಇತರ ಪ್ರಕರಣಗಳ ತನಿಖೆಗಾಗಿ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಆಗ ಪೊಲೀಸರಿಗೆ ಆತ ಸಿಕ್ಕಿರಲಿಲ್ಲ. ಪರಾರಿಯಾಗಿದ್ದ ಸಿಂಹನ ವಿರುದ್ಧ ಪೊಲೀಸರು ‘ಗ್ಯಾಂಗ್‍ಸ್ಟರ’ ಕಾನೂನಿನಡಿಯಲ್ಲಿ ಅಪರಾಧವನ್ನು ದಾಖಲಿಸಿದ್ದರು, ಅದೇ ರೀತಿ ಆತನ ಮೇಲೆ ೨೦ ಸಾವಿರದ ಬಹುಮಾನವನ್ನೂ ಘೋಷಿಸಿದ್ದರು.

ಈ ಕಾಲಾವಧಿಯಲ್ಲಿ ಮುರಾದಾಬಾದನ ನಿವಾಡ ಗ್ರಾಮದಲ್ಲಿ ಗ್ರಾಮಪಂಚಾಯತಿ ಚುನಾವಣೆ ಘೋಷಣೆಯಾಯಿತು. ಸಂಜಯ ಸಿಂಗ್ ಚುನಾವಣೆಗಾಗಿ ಅರ್ಜಿ ಸಲ್ಲಿಸಿದ್ದ. ಚುನಾವಣೆ ಸ್ಪರ್ಧಿಸಿ ಆಯ್ಕೆಯೂ ಆದ. ಅಷ್ಟೇ ಅಲ್ಲ ಆತ ಗ್ರಾಮದ ಸರಪಂಚನೆಂದು ಪ್ರಮಾಣವಚನವನ್ನೂ ತೆಗೆದುಕೊಂಡಿದ್ದ. ಇಷ್ಟೆಲ್ಲಾ ನಡೆದರೂ ಪೊಲೀಸರಿಗೆ ಆತನ ಬಗ್ಗೆ ಸ್ವಲ್ಪವೂ ಸುಳಿವು ಸಿಗಲಿಲ್ಲ.

ಸಂಜಯ್ ಸಿಂಗ್‍ನ ಬಂಧನ, ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ !

ಈ ವಿಷಯ ತಿಳಿದ ಕೂಡಲೇ ಉತ್ತರಪ್ರದೇಶ ಪೊಲೀಸರ ವಿಶೇಷ ತಂಡವು ಸಂಜಯ ಸಿಂಗ್‍ನನ್ನು ಬಂಧಿಸಿ ಸೆರೆಮನೆಗೆ ಅಟ್ಟಿದೆ. ಈ ವಿಷಯದ ಸುಳಿವು ಕಂಡು ಹಿಡಿಯದ ಪೊಲೀಸ್ ನಿರೀಕ್ಷಕ ಧರ್ಮೆಂದ್ರ ಸಿಂಗ್, ಮಹೇಶಚಂದ್ರ ಶರ್ಮಾ, ಮಹಿಳಾ ಪೊಲೀಸ್ ಅಧಿಕಾರಿ ಸರೋಜ ಹಾಗೂ ಪೇದೆ ಮೋಹಿತ ನೌಟಿಯಾಲ ಮೇಲೆ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪಮಹಾನಿರೀಕ್ಷಕ ಶಲಭ ಮಾಥುರ ಇವರು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ