
ಪುಣೆ – ೧೮ ವರ್ಷದ ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೇಮದ ಜಾಲಕ್ಕೆ ಸೆಳೆಯುವ ಉದ್ದೇಶದಿಂದ ಆಕೆಯನ್ನು ಬೆನ್ನಟ್ಟುವುದು, ಸತತವಾಗಿ ತಿರಸ್ಕರಿಸಿದರೂ ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿ ತೊಂದರೆ ಕೊಡುವುದು ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಸುಫಿಯಾನ್ ಖಾನ್ ವಿರುದ್ಧ ಇಲ್ಲಿನ ಸಮರ್ಥ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
೧. ದೂರಿನ ಪ್ರಕಾರ, ಸಂತ್ರಸ್ತ ಹಿಂದೂ ಯುವತಿ ಮತ್ತು ಶಂಕಿತ ಆರೋಪಿ ಸುಫಿಯಾನ್ ಖಾನ್ ಇಬ್ಬರಿಗೂ ಶಾಲೆಯಲ್ಲಿ ಪರಿಚಯವಾಗಿತ್ತು.
೨. ಅಕ್ಟೋಬರ್ ೨೦೨೪ ರಂದು ಸುಫಿಯಾನ್ ಆ ಯುವತಿಯ ಮುಂದೆ ತನ್ನ ಪ್ರೇಮ ಪ್ರಸ್ತಾಪ ಇಟ್ಟಿದ್ದನು, ಆದರೆ ಯುವತಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು. ಆದಾಗ್ಯೂ, ಅವನು ಸತತವಾಗಿ ಬೇರೆ ಬೇರೆ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಿ ಆಕೆಗೆ ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು.
೩. ಯುವತಿ ಅವನ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿದ ನಂತರ, ಸುಫಿಯಾನ್ ತನ್ನ ಇತರ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ಬಳಸಿ ತೊಂದರೆ ಕೊಡುವುದನ್ನು ಮುಂದುವರಿಸಿದನು. ‘ನನ್ನ ಜೊತೆ ಮಾತನಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’, ಹಾಗೂ ಯುವತಿಯ ಅಜ್ಜಿಯ ಮನೆಯ ಛಾಯಾಚಿತ್ರವನ್ನು ಕಳುಹಿಸಿ ‘ನನ್ನ ಮಾತು ಕೇಳದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ವಾಟ್ಸಾಪ್ ಸಂದೇಶಗಳ ಮೂಲಕ ಬೆದರಿಕೆ ಹಾಕಿದ್ದನು.
೪. ಸುಫಿಯಾನ್ ಸಂಖ್ಯೆಯನ್ನು ಸಂತ್ರಸ್ತೆ ‘ಬ್ಲಾಕ್’ ಮಾಡಿದ ನಂತರ, ಆಕೆಯ ಗೆಳತಿ ಮರಿಯಮ್ ಶೇಖ್ ಸಂತ್ರಸ್ತೆಗೆ ಮೊಬೈಲ್ ಕರೆ ಮಾಡಿ ‘ನೀವು ಪೊಲೀಸರಿಗೆ ದೂರು ನೀಡಿದರೂ ಸುಫಿಯಾನ್ ಗೆ ಏನೂ ಆಗುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾಳೆ. ಇವೆಲ್ಲವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. (ಲವ್ ಜಿಹಾದ್ ಮಾಡುವ ಮುಸಲ್ಮಾನ್ ಯುವಕರಿಗೆ ಮುಸಲ್ಮಾನ್ ಯುವತಿಯರ ಬೆಂಬಲವೂ ಸಿಗುತ್ತದೆ ಎಂಬುದು ಈ ಪ್ರಕರಣದಿಂದ ಕಂಡುಬರುತ್ತದೆ! – ಸಂಪಾದಕರು)
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ