ಜಾರ್ಖಂಡ್ ನ ಸರಕಾರವನ್ನು ಉರುಳಿಸಲು ನನಗೆ ೧ ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನ ನೀಡುವ ಆಮಿಷವನ್ನು ನೀಡಲಾಗಿತ್ತು ! – ಕಾಂಗ್ರೆಸ್ ಶಾಸಕನ ಹೇಳಿಕೆ

ದೇಶದಲ್ಲಿ ಸರಕಾರವನ್ನು ಉರುಳಿಸಲು ಹಾಗೂ ನಿರ್ಮಿಸಲು ಎಲ್ಲಾ ಪಕ್ಷಗಳಿಂದ ಶಾಸಕರ ಕುದುರೆ ವ್ಯಾಪಾರವಾಗುತ್ತದೆ, ಎಂಬುದು ಹೊಸ ವಿಷಯವೇನಲ್ಲ ! ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಕಾಂಗ್ರೆಸ್‍ನ ಶಾಸಕ ನಮನ್ ಬಿಕ್ಸಲ್ ಕೊಂಗಾರಿ

ರಾಂಚಿ (ಜಾರ್ಖಂಡ್) – ಜಾರ್ಖಂಡ್‍ನ ಮುಖ್ಯಮಂತ್ರಿ ಹೇಮಂತ ಸೊರೆನ ಅವರ ಸರಕಾರವನ್ನು ಉರುಳಿಸಲು ನನಗೆ ೧ ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನ ನೀಡುವುದಾಗಿ ಪ್ರಸ್ತಾವನೆಯನ್ನು ನೀಡಲಾಗಿತ್ತು, ಎಂದು ಕಾಂಗ್ರೆಸ್‍ನ ಶಾಸಕ ನಮನ್ ಬಿಕ್ಸಲ್ ಕೊಂಗಾರಿ ಇವರು ಹೇಳಿದ್ದಾರೆ. ‘ಮುಖ್ಯಮಂತ್ರಿ ಹೇಮಂತ ಸೊರೆನ ಅವರ ಸರಕಾರವನ್ನು ಉರುಳಿಸಲು ಮೂವರು ಸಂಚು ರೂಪಿಸಿದ್ದರು’, ಎಂಬ ಮಾಹಿತಿ ಸಿಕ್ಕಿದನಂತರ ಪೊಲೀಸರು ರಾಂಚಿಯ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅದರ ನಂತರ, ಕೊಂಗಾರಿಯವರು ಗುಟ್ಟು ರಟ್ಟು ಮಾಡಿದರು. ಜಾರ್ಖಂಡ್‍ನಲ್ಲಿ, ಪ್ರಸ್ತುತ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ ಮೈತ್ರಿಯ ಸರಕಾರವಿದೆ. ಸರಕಾರವನ್ನು ಉರುಳಿಸಲು ಯಾವ ಪಕ್ಷ ಪ್ರಯತ್ನಿಸಿದೆ ಎಂಬುದನ್ನು ಮಾತ್ರ ಅವರು ಹೇಳಲಿಲ್ಲ.

ಕೊಂಗಾರಿಯವರು ಮಾತನಾಡುತ್ತಾ, ‘ಈ ೩ ಜನರು ಪಕ್ಷದ ಕಾರ್ಯಕರ್ತರಾಗಿ ನನ್ನೊಂದಿಗೆ ಸಂಪರ್ಕಕ್ಕೆ ಬಂದರು. ಅವರು ಕೆಲವು ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಹೇಳಿದ್ದರು. ನಾನು ಆ ಮೂವರಿಂದ ದೂರವಿರಲು ಪ್ರಯತ್ನಿಸಿದೆ; ಆದರೆ ಅವರು ಮತ್ತೆ ನನ್ನೊಂದಿಗೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕಕ್ಕೆ ಬಂದರು. ಒಂದುಸಲ ಅವರು ನನಗೆ ೧ ಕೋಟಿ ರೂಪಾಯಿಯ ಪ್ರಸ್ತಾವನೆ ನೀಡಿದ ನಂತರ ಕೂಡಲೇ ಪಕ್ಷದ ಮುಖಂಡ ಅಲಮ್‍ಗೀರ್ ಆಲಮ್ ಮತ್ತು ಪಕ್ಷದ ಉಸ್ತುವಾರಿ ಆರ್.ಪಿ.ಎನ್. ಸಿಂಗ್ ಅವರಿಗೆ ಈ ವಿಷಯವನ್ನು ಕಿವಿಗೆ ಹಾಕಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಹೇಮಂತ ಸೊರೆನ ಅವರಿಗೂ ತಿಳಿಸಿದ್ದೆ.’ ಎಂದು ಹೇಳಿದರು.