‘ಚಿನ್ಮಯ ಮಿಷನ್ ದಕ್ಷಿಣ ಆಫ್ರಿಕಾ’ ವತಿಯಿಂದ ‘ಮ್ಯಾನ್ ಟು ಹನುಮಾನ್’ ಆಧ್ಯಾತ್ಮಿಕ ಕಾರ್ಯಕ್ರಮದ ಆಯೋಜನೆ

ಚಾಟ್ಸವರ್ತ್ (ದಕ್ಷಿಣ ಆಫ್ರಿಕಾ) – ‘ಚಿನ್ಮಯ ಮಿಷನ್ ದಕ್ಷಿಣ ಆಫ್ರಿಕಾ’ ವತಿಯಿಂದ ‘ಮ್ಯಾನ್ ಟು ಹನುಮಾನ್’ ಎಂಬ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಇಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಆಫ್ರಿಕಾದ ಇತಿಹಾಸದಲ್ಲಿ ಇದು ಹಿಂದೂಗಳ ಇದುವರೆಗಿನ ಅತ್ಯಂತ ದೊಡ್ಡ ಸಮಾವೇಶವೆನಿಸಿಕೊಂಡಿತು. ಕಾರ್ಯಕ್ರಮದಲ್ಲಿ ೧೭ ಸಾವಿರಕ್ಕೂ ಹೆಚ್ಚು ಭಕ್ತರು ಒಂದೆಡೆ ಸೇರಿ ೨೭ ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರು ಎಂದು ‘ಚಿನ್ಮಯ ಮಿಷನ್’ನ ಶ್ರೀ. ಅಪರಾಜಿತ ಅಯ್ಯರ್ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡಿದರು.

‘ಚಿನ್ಮಯ ಮಿಷನ್ ದಕ್ಷಿಣ ಆಫ್ರಿಕಾ’ ಸಂಸ್ಥೆಯ ಆಧ್ಯಾತ್ಮಿಕ ಮುಖ್ಯಸ್ಥರಾದ ಪೂಜ್ಯ ಸ್ವಾಮಿ ಅಭೇದಾನಂದ ಸರಸ್ವತಿ ಅವರಿಗೆ ‘ಇಲ್ಲಿನ ಎಲ್ಲಾ ಹಿಂದೂಗಳನ್ನು ಭಾಷೆ, ಪ್ರಾಂತ, ಆರ್ಥಿಕ ಸ್ಥಿತಿ ಇತ್ಯಾದಿ ಎಲ್ಲಾ ಸಾಮಾಜಿಕ ಭೇದಭಾವಗಳನ್ನು ಬದಿಗೊತ್ತಿ ಒಂದೇ ಸೂರಿನಡಿ ಒಟ್ಟಿಗೆ ತರುವುದು’, ಎಂಬ ಕನಸಿತ್ತು.

ಈ ಕನಸು ಈ ಗೌರವಾನ್ವಿತ ಕಾರ್ಯಕ್ರಮದ ರೂಪದಲ್ಲಿ ಸಾಕಾರಗೊಂಡಿದೆ. ಈ ಕಾರ್ಯಕ್ರಮವನ್ನು ‘ಜಾಗತಿಕ ಚಿನ್ಮಯ ಮಿಷನ್’ನ ೭೫ ನೇ ವರ್ಷಾಚರಣೆಯ ನಿಮಿತ್ತವೂ ಆಯೋಜಿಸಲಾಗಿತ್ತು.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಶುಭ ಹಾರೈಕೆ !
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಲು ಒಂದು ವಿಶೇಷ ಪತ್ರವನ್ನು ಕಳುಹಿಸಿದ್ದರು. ಇದರಲ್ಲಿ ಅವರು ‘ಚಿನ್ಮಯ ಮಿಷನ್’ನ ಕೊಡುಗೆಯನ್ನು ಗೌರವಿಸಿದರು ಮತ್ತು ಪ್ರಾರ್ಥನೆಯ ಮಾಧ್ಯಮದಿಂದ ಶ್ರದ್ಧೆ ಹಾಗೂ ಏಕತೆಯ ಮಹತ್ವವನ್ನು ಒತ್ತಿಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭಜನಾ ಗಾಯಕ ಶ್ರೀ. ಅನೂಪ ಜಲೋಟಾ ಅವರೂ ಸಹ ಉಪಸ್ಥಿತರಿದ್ದರು. |

ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಭಾರತಕ್ಕೆ ಹಿನ್ನಡೆ? ತೀಸ್ತಾ ಯೋಜನೆ ಚೀನಾದ ಪಾಲು : Teesta Project to China