ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಡ್ರೋನ್‍ಗಳನ್ನು ಉರುಳಿಸಿದ ಭಾರತೀಯ ಸೇನೆ : ೫ ಕೆಜಿ ಸ್ಫೋಟಕ ಸ್ವಾಧೀನ !

ಭಯೋತ್ಪಾದಕರ ಸಹಾಯದಿಂದ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಆದ್ದರಿಂದ, ಭಾರತವು ಎಷ್ಟು ಡ್ರೋನ್‍ಗಳನ್ನು ಹೊಡೆದುರುಳಿಸಿದರೂ, ಪಾಕಿಸ್ತಾನವು ಭಾರತದ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಮಾಡುತ್ತಲೇ ಇರುವುದು. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೆಂದರೆ ಪಾಕಿಸ್ತಾನವನ್ನು ನಾಶಪಡಿಸುವುದು ಎಂದು ಸರಕಾರವು ಈಗಲಾದರೂ ತಿಳಿದುಕೊಳ್ಳಬೇಕು !

ಶ್ರೀನಗರ – ಜಮ್ಮು-ಕಾಶ್ಮೀರ ನಡುವಿನ ಭಾರತೀಯ ಗಡಿಯಿಂದ ೮ ಕಿ.ಮೀ. ಒಳಗೆ ನುಸುಳಿದ ಭಯೋತ್ಪಾದಕರ ಡ್ರೋನ್‍ಅನ್ನು ಜುಲೈ ೨೩ ರಂದು ಭಾರತೀಯ ಸೇನೆಯು ಹೊಡೆದುರುಳಿಸಿದೆ. ಈ ಡ್ರೋನ್‍ನಿಂದ ೫ ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅವರು ಅಖನೂರ ಬಳಿ ಡ್ರೋನ್‍ನಿಂದ ದಾಳಿ ನಡೆಸಲು ಸಂಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದ ನಂತರ ಸೈನ್ಯವು ವ್ಯೂಹವನ್ನು ರಚಿಸಿತು. ಅದರಂತೆ ಮಧ್ಯರಾತ್ರಿ ೧ ಗಂಟೆಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ಮಾತನಾಡಿ, ‘ಡ್ರೋನ್ ೬ ಅಡಿ ಉದ್ದ ಮತ್ತು ೧೭ ಕೆಜಿ ತೂಕವಿತ್ತು. ಈ ಡ್ರೋನ್‍ಗಳನ್ನು ಚೀನಾದಲ್ಲಿ ತಯಾರಿಸಲಾಗಿದ್ದು, ಅದರ ಬಿಡಿಭಾಗಗಳನ್ನು ತೈವಾನ್‍ನಲ್ಲಿ ತಯಾರಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಡ್ರೋನ್‍ನಿಂದ ೧೬ ಎಕೆ-೪೭ ರೈಫಲ್‍ಗಳು, ೩ ಎಂ-೪ ರೈಫಲ್‍ಗಳು, ೩೪ ಬಂದೂಕುಗಳು, ೧೫ ಗ್ರೆನೇಡ್‍ಗಳು ಮತ್ತು ೧೮ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಡ್ರೋನ್‍ಗಳಿಂದಲೂ ಹಣವನ್ನು ಸಹ ಕಳುಹಿಸಲಾಗಿದೆ. ಈವರೆಗೆ ಸುಮಾರು ೪ ಲಕ್ಷ ರೂಪಾಯಿಗಳಷ್ಟು ನಗದು ಮೊತ್ತವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯಿಬಾ ಈ ಭಯೋತ್ಪಾದಕ ಸಂಘಟನೆಗಳು ಡ್ರೋನ್‍ಗಳ ಸಹಾಯದಿಂದ ಕಾಶ್ಮೀರದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿವೆ.” ಎಂದು ಹೇಳಿದರು.