‘ಟೈಮ್ಸ್ ನೌ’ ಸುದ್ದಿ ವಾಹಿನಿಯಲ್ಲಿ ಇತಿಹಾಸಕಾರ ವಿಕ್ರಮ ಸಂಪತ್ ಅವರಿಂದ ಗಂಭೀರ ಆರೋಪ !
* ಸ್ವಾತಂತ್ರ್ಯವೀರ ಸಾವರಕರರ ಸಹೋದರನ ಹತ್ಯೆ !
* ೨೦,೦೦೦ ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು ! * ಒಂದೇ ಒಂದು ಅಪರಾಧ ದಾಖಲಾಗಿಲ್ಲ ! * ಗಲಭೆಯ ಹಿಂದೆ ಕಾಂಗ್ರೆಸ್ ಮುಖಂಡರು ಮತ್ತು ಬ್ರಾಹ್ಮಣ ವಿರೋಧಿ ಸಂಘಟನೆಗಳ ಕೈವಾಡ ! * ಸುದ್ದಿಯನ್ನು ಮುಚ್ಚಿಹಾಕಿದ ಆ ಕಾಲದ ಪತ್ರಿಕೆಗಳು ! * ಕಪಟ ಗಾಂಧಿವಾದಿ ಕಾಂಗ್ರೆಸ್ಸಿಗರ ಈ ಇತಿಹಾಸವನ್ನು ಇತಿಹಾಸಕಾರರು ಹೊರ ತರಬೇಕು. ಅಲ್ಲದೆ, ಕೇಂದ್ರ ಸರಕಾರವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಅದನ್ನು ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ಕಲಿಸಬೇಕು ! ಇಂತಹ ಕಾಂಗ್ರೆಸ್ ಈ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ, ಎಂಬುದು ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ ! |
ಮುಂಬಯಿ – ಚಿತ್ಪಾವನ ಬ್ರಾಹ್ಮಣರಾದ ಪಂಡಿತ ನಾಥುರಾಮ ಗೋಡ್ಸೆಯವರು ಜನವರಿ ೩೦, ೧೯೪೮ ರಂದು ಗಾಂಧಿಯವರ ಹತ್ಯೆ ಮಾಡಿದ ನಂತರ ಕಾಂಗ್ರೆಸ್ ಮುಖಂಡರು ಮುಂಬಯಿ ಸಹಿತ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ವಿರೋಧಿಗಳನ್ನು ಪ್ರಾರಂಭಿಸಿದರು. ಅದರಲ್ಲಿ ಸುಮಾರು ೨೦,೦೦೦ ಬ್ರಾಹ್ಮಣರ ಮನೆ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ೨ ಸಾವಿರದಿಂದ ೫ ಸಾವಿರ ಬ್ರಾಹ್ಮಣರನ್ನು ಹತ್ಯೆ ಮಾಡಲಾಯಿತು. ಈ ಸಂಖ್ಯೆ ೮,೦೦೦ ವರೆಗೆ ಇರಬಹುದು. ಮಹಿಳೆಯರು ಮತ್ತು ಮಕ್ಕಳನ್ನು ಸಹ ಗುರಿಯಾಗಿಸಲಾಗಿತ್ತು. ಈ ಗಲಭೆಯಲ್ಲಿ ಸ್ವಾತಂತ್ರ್ಯವೀರ ಸಾವರಕರರ ಅವರ ಸಹೋದರ ನಾರಾಯಣ ದಾಮೋದರ ಸಾವರಕರ ಅವರನ್ನೂ ಕೂಡ ಹತ್ಯೆ ಮಾಡಲಾಗಿತ್ತು. ಇಷ್ಟು ದೊಡ್ಡ ಹತ್ಯಾಕಾಂಡ ಆದರೂ ಪೊಲೀಸರು ಒಂದೇ ಒಂದು ಪ್ರಕರಣವನ್ನು ದಾಖಲಿಸಿಲ್ಲ ಮತ್ತು ಯಾರನ್ನೂ ಬಂಧಿಸಲಿಲ್ಲ. ಕಾಂಗ್ರೆಸ್ ಒತ್ತಡದಿಂದಲೇ ಇದು ಸಂಭವಿಸಿದೆ ಎಂದು ಖ್ಯಾತ ಬರಹಗಾರ ಮತ್ತು ಇತಿಹಾಸಕಾರ ವಿಕ್ರಮ ಸಂಪತ ಇವರು ‘ಟೈಮ್ಸ್ ನೌ’ ಈ ಆಂಗ್ಲ ವಾರ್ತಾವಾಹಿನಿಯಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರೋಪಿಸಿದ್ದಾರೆ. ವಿಕ್ರಮ ಸಂಪತರು ಸ್ವಾತಂತ್ರ್ಯವೀರ ಸಾವರಕರರ ಚರಿತ್ರೆಯನ್ನು ೨ ಸಂಪುಟಗಳಲ್ಲಿ ಬರೆದಿದ್ದಾರೆ. ಈ ಎರಡು ಸಂಪುಟಗಳ ಹೆಸರುಗಳು ಹೀಗಿವೆ. ‘Savarkar (Part 1) : Echoes from a Forgotten Past 1883-1924’ ಮತ್ತು ‘Savarkar (Part 2) : A Contested Legacy 1924-1966’
‘Liberals don’t allow different point of view to thrive. In India, there is a narrow historical narrative that needs to be pushed’.
Author of Savarkar – A Contested Legacy, @vikramsampath joins Navika Kumar on #FranklySpeakingWithSampath.
Watch the full episode at 10 PM. pic.twitter.com/vq6w3syFit
— TIMES NOW (@TimesNow) July 25, 2021
ವಿಕ್ರಮ ಸಂಪತರು ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು,
೧. ಇಂದಿನ ಪೀಳಿಗೆಗೆ ಈ ನರಮೇಧದ ಬಗ್ಗೆ ತಿಳಿದಿಲ್ಲ. ೧೯೮೪ ರಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಇವರ ಹತ್ಯೆಯ ನಂತರ ಸಿಖ್ಖರ ಹತ್ಯಾಕಾಂಡ ನಡೆಯಿತು. ಅದೇ ರೀತಿ ಬ್ರಾಹ್ಮಣರ ಹತ್ಯಾಕಾಂಡವು ೧೯೪೮ ರಲ್ಲಿ ನಡೆಯಿತು. ನಾಗಪುರದಲ್ಲಿ ೧೦೦ ಕಾಂಗ್ರೆಸ್ ಗಲಭೆಕೋರರನ್ನು ಬಂಧಿಸಲಾಗಿತ್ತು; ಆದರೆ, ಅವರ ವಿರುದ್ಧ ಯಾವುದೇ ಅಪರಾಧಗಳು ದಾಖಲಾಗಲಿಲ್ಲ.
೨. ಸ್ವಾತಂತ್ರ್ಯವೀರ ಸಾವರಕರರ ಬಗ್ಗೆ ಪುಸ್ತಕ ಬರೆಯುವಾಗ, ಅನೇಕ ಜನರನ್ನು ಭೇಟಿಯಾಗಿದ್ದೆ. ಅವರಲ್ಲಿ ಕೆಲವರ ಪೂರ್ವಜರು ಈ ಹತ್ಯಾಕಾಂಡದಲ್ಲಿ ಬಲಿಯಾಗಿದ್ದರು.
೩. ಮ. ಗಾಂಧಿಯವರ ಹತ್ಯೆಯಲ್ಲಿ ಸ್ವಾತಂತ್ರ್ಯವೀರ ಸಾವರಕರರನ್ನು ಆರೋಪಿಯನ್ನಾಗಿಸಲಾಯಿತು. ತರುವಾಯ ಅವರನ್ನು ರಾಜಕೀಯದಿಂದ ಹೊರಗಿಡಲಾಯಿತು. ವಿಶೇಷವೆಂದರೆ ನ್ಯಾಯಾಲಯ ಅವರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿತ್ತು.
೪. ಆ ಕಾಲದ ಭಾರತೀಯ ಪತ್ರಿಕೆಗಳು ಗಲಭೆಗಳಿಗೆ ಕಡಿಮೆ ಪ್ರಸಾರವನ್ನು ನೀಡಿವೆ; ಆದರೆ ಅದನ್ನು ವಿದೇಶಿ ಪತ್ರಿಕೆಗಳು ಚೆನ್ನಾಗಿ ಪ್ರಸಾರ ಮಾಡಿದ್ದವು. ‘ಗಾಂಧಿಯವರ ಅನುಯಾಯಿಗಳು ನಡೆಸಿದ ಬ್ರಾಹ್ಮಣ ವಿರೋಧಿ ಹಿಂಸಾಚಾರವನ್ನು ಹರಡಲು ಕೆಲವು ಸಂಘಟನೆಗಳು ಕೈಜೋಡಿಸಿದ್ದವು’, ಎಂದು ಕೆಲವು ವಿದೇಶಿ ಪತ್ರಿಕೆಗಳು ವರದಿ ಮಾಡಿದ್ದವು
೫. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಕಚೇರಿಗಳನ್ನು ಸಹ ಧ್ವಂಸಗೊಳಿಸಲಾಗಿತ್ತು.
೬. ಪೊಲೀಸರು ಈ ಗಲಭೆಯ ಬಗ್ಗೆ ಯಾವುದೇ ದಾಖಲೆಗಳನ್ನು ತೋರಿಸಲು ನಿರಾಕರಿಸಿದರು.
೭. ಪ್ರಗತಿಪರರು ತಮ್ಮ ಆಲೋಚನೆಗಳನ್ನು ಹೊರತುಪಡಿಸಿ ಇತರ ವಿಚಾರಗಳಿಗೆ ಮಣೆ ಹಾಕುವುದಿಲ್ಲ, ಮತ್ತು ಯಾವಾಗ ಭಾರತದ ಇತಿಹಾಸದ ಬಗ್ಗೆ ಚರ್ಚೆ ನಡೆಯುತ್ತದೆ, ಆಗ ಸಂಕುಚಿತ ಚಿಂತನೆಯನ್ನು ಮುಂದಿಡಲಾಗುತ್ತದೆ. ಇತಿಹಾಸದ ಅನೇಕ ಭಾಗಗಳನ್ನು ಮುಚ್ಚಿಡಲಾಗುತ್ತದೆ. ಅವುಗಳನ್ನು ಮತ್ತೆ ಹೊರಗೆ ತೆಗೆಯುವ ಅವಶ್ಯಕತೆ ಇದೆ. ಸ್ವಾತಂತ್ರ್ಯೋತ್ತರ ಆಡಳಿತಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬರೆಸಿಕೊಂಡರು.