ಆಪತ್ಕಾಲದ ಸಮಯದಲ್ಲಿ ಯುದ್ಧ ನಡೆಯುತ್ತಿದ್ದರೆ ಕೆಲವು ರಾಷ್ಟ್ರದ್ರೋಹಿಗಳು ಅಥವಾ ಪಾಕ್‌ಪುರಸ್ಕೃತ ಜಿಹಾದಿ ಭಯೋತ್ಪಾದನಾ ಸಂಘಟನೆಗಳು ಪರಿಸ್ಥಿತಿಯ ದುರ್ಲಾಭ ಪಡೆಯುವ ಪ್ರಯತ್ನಗಳಾಗಬಹುದು. ಇಂತಹ ಸಮಯದಲ್ಲಿ ಕೆಲವು ರಾಷ್ಟ್ರದ್ರೋಹಿಗಳು ಶತ್ರುರಾಷ್ಟ್ರಗಳ ಪರವಾಗಿ ವಿದ್ರೋಹ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಂತಹ ಸಮಯದಲ್ಲಿ ಅವರಿಂದ ಆಯೋಜನಾಬದ್ಧ ರೀತಿಯಲ್ಲಿ ಹಿಂಸಾಚಾರ, ಲೂಟಿ, ಸುಲಿಗೆ ಮತ್ತು ರಾಷ್ಟ್ರವಿರೋಧಿ ಕಾರ್ಯಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಅವರನ್ನು ಹತೋಟಿಯಲ್ಲಿ ತರಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ಪರಿಶ್ರಮ ಪಡಬೇಕಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರವಾಗಿ ರಕ್ತಪಾತವೂ ಆಗಬಹುದು. ಇಂತಹ ಸಮಯದಲ್ಲಿ ನಮ್ಮ ರಕ್ಷಣೆಯ ಜೊತೆಗೆ ದೇಶದ ರಕ್ಷಣೆಯನ್ನು ಮಾಡುವ ಜವಾಬ್ದಾರಿ ಸಮಾಜದ ಮೇಲಿರಲಿದೆ. ವಿಶೇಷವಾಗಿ ಹಿಂದೂಗಳಿಗೆ ಇದಕ್ಕಾಗಿ ನೇತೃತ್ವವನ್ನು ವಹಿಸಬೇಕಾಗುವುದು. ಈ ಕುರಿತು ಯಾವ ಎಚ್ಚರಿಕೆಗಳನ್ನು ವಹಿಸಬೇಕು?, ಪೂರ್ವನಿಯೋಜನೆ ಎಂದು ಏನು ಮಾಡಬೇಕು? ಮುಂತಾದ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಬಂಡಾಯದ ಘಟನೆಗಳು ಎಲ್ಲೆಡೆ ಆಗಬಹುದೆಂದೇನಿಲ್ಲ; ಆದರೆ ಎಲ್ಲೇ ಆದರೂ, ಆ ಕಾಲದಲ್ಲಿ ಸ್ವರಕ್ಷಣೆ ಮತ್ತು ಸಮಾಜರಕ್ಷಣೆಗಾಗಿ ಯಾವ ಕೃತಿಗಳನ್ನು ಮಾಡಬೇಕು, ಎಂಬುದಕ್ಕಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನವವನ್ನು ಪ್ರಕಟಿಸುವ ಉದ್ದೇಶ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವುದಾಗಿರದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ಉದ್ಭವಿಸುವ ಈ ಹಿಂಸಾಚಾರಕ್ಕೆ ಕಡಿವಾಣ ಹಾಕಿ ಸ್ವರಕ್ಷಣೆ ಮಾಡಿಕೊಳ್ಳುವುದಾಗಿದೆ. ಇಲ್ಲಿ ವ್ಯಕ್ತಿಗಿಂತ ಸಮಾಜ ಮತ್ತು ಸಮಾಜಕ್ಕಿಂತ ರಾಷ್ಟ್ರ ರಕ್ಷಣೆ ಹೆಚ್ಚು ಮಹತ್ವದ್ದಾಗಿದೆ.
ರಾಷ್ಟ್ರದ್ರೋಹಿಗಳ ಬಂಡಾಯ !
೯. ರಾಷ್ಟ್ರದ್ರೋಹಿಗಳ ಬಂಡಾಯಗಳು !
೯ ಅ. ಬಂಡಾಯಗಳ ಮೊದಲು ಇದನ್ನು ಮಾಡಿರಿ !
೯ ಅ ೧. ಬಂಡಾಯಗಳ ವಿಪತ್ತಿನಿಂದ ರಕ್ಷಿಸಿಕೊಳ್ಳಲು ಪೂರ್ವ ನಿಯೋಜನೆಯನ್ನು ಮಾಡಬೇಕು !: ರಾಷ್ಟ್ರದ್ರೋಹಿಗಳು ಈ ರೀತಿಯಲ್ಲಿ ಹಿಂಸಾಚಾರ ಮಾಡಿದರೆ, ರಾಷ್ಟ್ರಪ್ರೇಮಿಗಳಿಗೆ ಅದೊಂದು ಅಕಸ್ಮಾತಾಗಿ ಬಂದೆರಗುವ ಆಪತ್ತೇ ಆಗಿರುತ್ತದೆ. ಇದರಿಂದ ಬದುಕುಳಿಯಲು ಪೂರ್ವನಿಯೋಜನೆ ಮಾಡುವುದು ಅತ್ಯಾವಶ್ಯಕವಾಗಿದೆ.
೯ ಅ ೨. ಯುವಕರ ಸಂಘಟನೆ ಮತ್ತು ಮಾರ್ಗದರ್ಶನಕ್ಕಾಗಿ ಅಲ್ಲಲ್ಲಿಪ್ರಬೋಧನೆಯ ಚಳುವಳಿಯನ್ನು ಹಮ್ಮಿಕೊಳ್ಳಬೇಕು !: ಬಂಡಾಯ ಗಳಂತಹ (ದಂಗೆಗಳಂತಹ) ಪ್ರಸಂಗಗಳನ್ನು ಎದುರಿಸಲು ರಾಷ್ಟ್ರಪ್ರೇಮಿಗಳ ಸಂಪರ್ಕ ವ್ಯವಸ್ಥೆಯನ್ನು ತಯಾರಿಸುವಾಗ ನಮ್ಮ ರಕ್ಷಣೆಗಾಗಿ ಸಮಾಜ ಮನಸ್ಸನ್ನು ತಯಾರಿಸುವುದು ಮತ್ತು ದೇಶಕ್ಕಾಗಿ ಏನಾದರೂ ಮಾಡುವ ಇಚ್ಛೆಯಿರುವ ಊರೂರುಗಳಲ್ಲಿನ ಯುವಕರನ್ನು ಅವರ ಕೌಶಲ್ಯಕ್ಕನುಸಾರ ರಕ್ಷಣೆಗಾಗಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳುವುದು, ಇವೆರಡೂ ಉದ್ದೇಶಗಳನ್ನು ನಮ್ಮೆದುರಿಗೆ ಇಟ್ಟುಕೊಳ್ಳಬೇಕಾಗುತ್ತದೆ. ಈ ಉದ್ದೇಶಗಳನ್ನು ಸಾಧಿಸಲು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ವ್ಯಾಯಾಮಶಾಲೆ, ಯುವಕ ಮಂಡಳಿಗಳು, ಗಣೇಶೋತ್ಸವ ಮತ್ತು ನವರಾತ್ರೋತ್ಸವ ಮಂಡಳಿಗಳ ಕಾರ್ಯಕರ್ತರು ಇಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿ ಯಾವ ಸ್ಥಳದಲ್ಲಿ ಸೇರಬೇಕು, ಸೇರಿದ ನಂತರ ಯಾವ ಕೃತಿಗಳನ್ನು ಮಾಡಬೇಕು, ಇವುಗಳ ಬಗ್ಗೆ ಪ್ರಬೋಧನೆ ಮಾಡುವುದು ಆವಶ್ಯಕವಾಗಿದೆ. ನಮ್ಮ ಸಂಘಟನೆಯ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುವಾಗಲೂ ಈ ಉದ್ದೇಶವು ನಮ್ಮ ಕಣ್ಣುಗಳೆದುರು ಇರಬೇಕು.
೯ ಅ ೨ ಅ. ಬಂಡಾಯಗಳ ಪೂರ್ವಕಾಲದಲ್ಲಿ ಪ್ರಬೋಧನಾತ್ಮಕ ಕಾರ್ಯಾಗಾರಗಳ ಆಯೋಜನೆಯನ್ನು ಮಾಡಬೇಕು !: ರಾಷ್ಟ್ರಪ್ರೇಮಿ ಸಂಘಟನೆಗಳು ಬಂಡಾಯಗಳ ಪೂರ್ವದಲ್ಲಿ ವಸಾಹತುಗಳು, ಕಾರ್ಯಾಲಯಗಳು ಮುಂತಾದ ಸ್ಥಳಗಳಲ್ಲಿ ಕಾರ್ಯಾಗಾರವನ್ನು ತೆಗೆದುಕೊಳ್ಳಬೇಕು. ಜನಸಾಮಾನ್ಯರಿಗಾಗಿರುವ ಈ ಕಾರ್ಯಾಗಾರದಲ್ಲಿ ಮುಂದಿನ ವಿಷಯಗಳನ್ನು ಹೇಳಬೇಕು.
೯ ಅ ೨ ಅ ೧. ‘ಬಂಡಾಯವೆಂದರೇನು ?’ ಇದನ್ನು ರಾಷ್ಟ್ರಪ್ರೇಮಿಗಳಿಗೆ ಹೇಳುವುದು : ‘ಬಂಡಾಯವೆಂದರೇನು ? ಅದು ಹೇಗಾಗಬಹುದು ? ಬಂಡಾಯವಾಗುವ ಮೊದಲು ಏನು ಮಾಡಬೇಕು ? ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡಬೇಕು.
೯ ಅ ೨ ಅ ೨. ಬಂಡಾಯಗಳನ್ನು ಎದುರಿಸುವ ಕುರಿತು ಮಾನಸಿಕ ಸಿದ್ಧತೆಗಳನ್ನು ಮಾಡಿಸಿಕೊಳ್ಳುವುದು ಮತ್ತು ಪ್ರತ್ಯಕ್ಷ ಹಿಂಸಾಚಾರದ ಸಮಯದಲ್ಲಿ ರಾಷ್ಟ್ರಪ್ರೇಮಿ ಕುಟುಂಬಗಳು ಮತ್ತು ಅವರ ಆಸ್ತಿಪಾಸ್ತಿಗಳ ರಕ್ಷಣೆಯನ್ನು ಹೇಗೆ ಮಾಡಬೇಕು, ಎಂಬುದನ್ನು ಹೇಳಬೇಕು : ರಾಷ್ಟ್ರಪ್ರೇಮಿಗಳ ಎದುರು ಬಂಡಾಯದ ಕಾರಣಗಳ ಕಾಲ್ಪನಿಕ ಚಿತ್ರಣವನ್ನು ನಿರ್ಮಿಸಿ ‘ಎದುರಿನ ವ್ಯಕ್ತಿಯು ಯಾವ ವಿಚಾರವನ್ನು ಮಾಡುತ್ತಿದ್ದಾನೆ ಮತ್ತು ಯಾವ ಸ್ಥಿತಿ ನಿರ್ಮಾಣವಾಗಲಿದೆ’, ಎಂಬುದನ್ನು ಕಲಿಸಬೇಕು. ಮಕ್ಕಳಿಗೆ ಇದನ್ನು ಕಲಿಸಬೇಕು, ಹಾಗೆಯೇ ವಸಾಹತುಗಳು ಮತ್ತು ಕಾರ್ಯಾಲಯಗಳಲ್ಲಿ ಈ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಬೇಕು.
೯ ಅ ೨ ಅ ೩. ಬಂಡಾಯಗಳನ್ನು ಎದುರಿಸಲು ಮಾನಸಿಕ ದೃಷ್ಟಿಯಿಂದ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ !: ಗಲಾಟೆ, ದಂಗೆ, ಪ್ರತಿಭಟನೆಗಳನ್ನು ಎದುರಿಸಲು ಮಾನಸಿಕ ದೃಷ್ಟಿಯಿಂದ ಸಿದ್ಧತೆಯನ್ನು ಮಾಡಿಕೊಳ್ಳುವುದು ಒಂದು ದೊಡ್ಡ ಭಾಗವಾಗಿದೆ. ಬಂಡಾಯದಂತಹ ಪ್ರಸಂಗಗಳಲ್ಲಿ, ಉದಾ. ಮಾರುಕಟ್ಟೆಗೆ ಹೋಗುವಾಗ ಇದ್ದಕ್ಕಿದ್ದಂತೆಯೇ ಹಿಂಸಾಚಾರ ಪರಿಸ್ಥಿತಿಯು ಉದ್ಭವಿಸಿದರೆ, ಆ ಸಮಯದಲ್ಲಿ ಸ್ವಂತದ ಮತ್ತು ಇತರರ ರಕ್ಷಣೆಯನ್ನು ಹೇಗೆ ಮಾಡಬೇಕು, ಎಂಬುದನ್ನು ಅಭ್ಯಾಸವರ್ಗವನ್ನು ತೆಗೆದುಕೊಂಡು ಹೇಳಬೇಕು.
೯ ಅ ೨ ಅ ೪. ಮನೆ ಮತ್ತು ಕಾರ್ಯಾಲಯಗಳಲ್ಲಿ ಸ್ವರಕ್ಷಣೆಯ ಸಿದ್ಧತೆಯನ್ನು ಮಾಡುವುದು ! : ರಾಷ್ಟ್ರಪ್ರೇಮಿಗಳು ಮನೆಯಲ್ಲಿ ಮತ್ತು ಮನೆಯ ಹೊರಗೆ, ಹೀಗೆ ಎರಡೂ ಸ್ಥಳಗಳಲ್ಲಿ ನಿಶಸ್ತ್ರ ಮತ್ತು ಅಜಾಗರೂಕರಾಗಿರುತ್ತಾರೆ. ಬಂಡಾಯಕೋರರು ಶಸ್ತ್ರಸಜ್ಜಿತರಾಗಿರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ಕಾನೂನು ನೀಡಿದ ಅಧಿಕಾರಕ್ಕನುಸಾರ ಸ್ವರಕ್ಷಣೆಗಾಗಿ ಪ್ರಯತ್ನಿಸಬೇಕು.
೯ ಅ ೩. ಸ್ವರಕ್ಷಣೆಗಾಗಿ ಮನೆಯಲ್ಲಿನ ವಸ್ತುಗಳ ಬಳಕೆಯನ್ನು ಮಾಡಬಹುದು : ದೇಶದ್ರೋಹಿಗಳ ದಂಗೆಗಳ ಸಮಯದಲ್ಲಿ ಸ್ವರಕ್ಷಣೆಗಾಗಿ ಮನೆಯಲ್ಲಿ ಲಭ್ಯವಿರುವ ವಸ್ತುಗಳ ಬಳಕೆಯನ್ನು ಮಾಡಿಕೊಳ್ಳಬಹುದು, ಉದಾ. ಬಟ್ಟೆಗಳನ್ನು ಒಣ ಹಾಕಲು ಉಪಯೋಗಿಸುವ ಕೋಲು, ಸ್ನಾನಗೃಹದ ಪೈಪ್ ಇತ್ಯಾದಿ.
೯ ಅ ೪. ಶಾಂತಿಯ ಕಾಲದಲ್ಲಿ ಆಪತ್ಕಾಲಕ್ಕಾಗಿ ರಾಷ್ಟ್ರಪ್ರೇಮಿಗಳ ವಿವಿಧ ಗುಂಪುಗಳನ್ನು ಸಿದ್ಧಪಡಿಸಬಹುದು : ಬಂಡಾಯಗಳಾಗುವ ಮೊದಲೇ ಅದರಿಂದ ರಕ್ಷಣೆ ಪಡೆಯಲು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವುದೇ ಉತ್ತಮ ಪರ್ಯಾಯವಾಗಿದೆ. ಈ ಪೂರ್ವ ಸಿದ್ಧತೆಯಲ್ಲಿ ಸಮಾಜದಲ್ಲಿನ ಎಲ್ಲರೂ ಪಾಲ್ಗೊಂಡರೆ ಮಾತ್ರ ನಾವು ಈ ಸಂಕಟಗಳನ್ನು ಹಿಮ್ಮೆಟ್ಟಿಸಬಹುದು. ಅದಕ್ಕಾಗಿ ವಾಹನಗಳಿರುವವರು, ವಾಹನಗಳನ್ನು ನಡೆಸುವವರು (ವಾಹನಚಾಲಕರು), ರಕ್ಷಣೆಯನ್ನು ಮಾಡುವವರ ಒಂದು ಗುಂಪು, ಪ್ರಥಮೋಪಚಾರ ಮತ್ತು ವೈದ್ಯಕೀಯ ಉಪಚಾರದ ಗುಂಪು, ತೊಂದರೆಗೀಡಾದ (ಸಂತ್ರಸ್ತ) ರಾಷ್ಟ್ರಪ್ರೇಮಿಗಳ ಆಹಾರ, ವಸ್ತ್ರ ಮತ್ತು ಆಶ್ರಯ ಇವುಗಳ ಆವಶ್ಯಕತೆಯನ್ನು ಪೂರೈಸಲು ದಾನಿಗಳು, ನ್ಯಾಯವಾದಿಗಳು, ರಾಷ್ಟ್ರನಿಷ್ಠ ವಿಚಾರವಂತರು ಮುಂತಾದ ವಿವಿಧ ವ್ಯಕ್ತಿಗಳ ಗುಂಪುಗಳನ್ನು ಸಿದ್ಧಪಡಿಸುವುದು. ಈ ಗುಂಪುಗಳ ಮುಖಂಡರ ಆಯ್ಕೆ, ಅವರ ಸಂಪರ್ಕವ್ಯವಸ್ಥೆ ಇವುಗಳಂತಹ ವಿಷಯಗಳ ಕುರಿತು ಶಾಂತಿಯ ಕಾಲದಲ್ಲಿ ವಿಚಾರವಿನಿಮಯ ಮಾಡಿಕೊಂಡು ನಿಲುವನ್ನು ನಿಶ್ಚಿತಪಡಿಸುವುದು ಆವಶ್ಯಕವಾಗಿದೆ.
ಈ ಗುಂಪುಗಳ ಪೈಕಿ ರಕ್ಷಣೆಯ ಗುಂಪಿನ ಕೆಲಸವು ಹೆಚ್ಚು ಜವಾಬ್ದಾರಿಯುತವಾಗಿದ್ದರಿಂದ ಇದರಲ್ಲಿನ ಕಾರ್ಯಕರ್ತರು ಶಾರೀರಿಕ ದೃಷ್ಟಿಯಿಂದ ಸದೃಢ (ಸಕ್ಷಮ), ಪ್ರತಿಕಾರವನ್ನು ಮಾಡುವಂತಹ ಮತ್ತು ಮಾನಸಿಕದೃಷ್ಟಿಯಿಂದ ಗಟ್ಟಿಯಾಗಿರಬೇಕು, ಎಂಬುದರ ಕಾಳಜಿ ವಹಿಸಬೇಕು. ಇವೇ ಗುಂಪುಗಳು ಇತರ ಆಪತ್ತುಗಳ ಪ್ರಸಂಗಗಳಲ್ಲಿಯೂ ಉಪಯೋಗವಾಗುವವು.
೯ ಅ ೫. ಮಹಿಳೆಯರ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ! : ಬಂಡಾಯಗಳು (ದಂಗೆಗಳು, ಗಲಾಟೆ, ಅತ್ಯಾಚಾರ) ಪ್ರಾರಂಭವಾದರೆ ರಾಷ್ಟ್ರಪ್ರೇಮಿ ಮಹಿಳೆಯರು ಏನು ಮಾಡಬೇಕು, ಎಂಬುದರ ಪೂರ್ವಸಿದ್ಧತೆಯನ್ನು ಮಾಡಿ ಮತ್ತು ಅದರ ಪ್ರಶಿಕ್ಷಣವನ್ನು ಶಾಂತಿ ಕಾಲದಲ್ಲಿಯೇ ಮಾಡಿಟ್ಟುಕೊಳ್ಳಬೇಕು. ಮಹಿಳೆಯರ ಮೇಲೆ ಆಕ್ರಮಣವಾಗುವ ಸಾಧ್ಯತೆಯನ್ನು ಗಮನದಲ್ಲಿರಿಸಿ ಅವರ ಬಳಿ ಸಹಾಯವನ್ನು ಪಡೆಯಲು ಸೀಟಿ, ಹಾಗೆಯೇ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಅಥವಾ ಖಾರದ ಪುಡಿಯನ್ನು ಜೊತೆಗಿಟ್ಟುಕೊಳ್ಳುವುದು ಆವಶ್ಯಕವಾಗಿದೆ.
೯ ಅ ೬. ಸಾರ್ವಜನಿಕ ಸ್ಥಳಗಳ ರಕ್ಷಣೆಯ ಆಯೋಜನೆಯನ್ನು ಮಾಡಬೇಕು !
೯ ಅ ೬ ಅ. ದೇವಸ್ಥಾನಗಳ ರಕ್ಷಣೆ : ದಂಗೆಗಳ ಸಮಯದಲ್ಲಿ ರಾಷ್ಟ್ರದ್ರೋಹಿಗಳಿಂದ ದೇವಸ್ಥಾನಗಳ ಮೇಲೆ ಕಲ್ಲೆಸೆತ, ದೇವಸ್ಥಾನಗಳಲ್ಲಿ ಗೋಮಾಂಸ / ಮಲವನ್ನು ಎಸೆಯುವುದು, ದೇವಸ್ಥಾನಗಳನ್ನು ಧ್ವಂಸ ಮಾಡುವುದು, ಮೂರ್ತಿಗಳನ್ನು ಒಡೆಯುವುದು, ಹೀಗೆ ಅನೇಕ ರೀತಿಯಲ್ಲಾಗಬಹುದು. ಆದುದರಿಂದ ದೇವಸ್ಥಾನ ಗಳ ರಕ್ಷಣೆಗಾಗಿ ಮುಂದಿನ ಕೃತಿಗಳನ್ನು ಪ್ರಯತ್ನಪೂರ್ವಕ ಮಾಡಬೇಕು.
೯ ಅ ೬ ಅ ೧. ದೇವಸ್ಥಾನಗಳ ಸುತ್ತಲೂ ಭದ್ರವಾದ ಗೋಡೆ ಅಥವಾ ಸಂರಕ್ಷಣೆಯ ಇನ್ನಿತರ ವ್ಯವಸ್ಥೆಯನ್ನು ಮಾಡಬೇಕು !:
ದೇವಸ್ಥಾನಗಳ ಅಲಂಕಾರಕ್ಕೆ ಮಹತ್ವ ನೀಡುವುದಕ್ಕಿಂತ ಅವುಗಳ ರಕ್ಷಣೆಯ ದೃಷ್ಟಿಯಿಂದ ದೇವಸ್ಥಾನಗಳ ಸುತ್ತಲೂ ಭದ್ರವಾದ ಗೋಡೆ ಅಥವಾ ರಕ್ಷಣೆಯ ಬೇರೆ ಏನಾದರೂ ವ್ಯವಸ್ಥೆಯನ್ನು ಮಾಡಲು ಪ್ರಾಧಾನ್ಯತೆಯನ್ನು ನೀಡಬೇಕು. ಈ ಸಂರಕ್ಷಣೆಯ ಮಹತ್ವದ ಬಗ್ಗೆ ವಿಶ್ವಸ್ಥರಿಗೆ ಮನವರಿಕೆ ಮಾಡಿಕೊಡಬೇಕು, ಹಾಗೆಯೇ ಆರ್ಥಿಕ ಆದಾಯ ಕಡಿಮೆಯಿರುವ ದೇವಸ್ಥಾನಗಳ ಸುತ್ತಲೂ ಭದ್ರವಾದ ಗೋಡೆಗಳನ್ನು ಕಟ್ಟಲು ಅಥವಾ ಇನ್ನೇನಾದರೂ ವ್ಯವಸ್ಥೆ ಮಾಡಲು ಜನರಿಗೆ ಪ್ರಬೋಧನೆ ಮಾಡಿ ಜನರ ಚಂದಾ ಹಣ (ದಾನ)ದಿಂದ ಅಥವಾ ಆದಾಯ ಚೆನ್ನಾಗಿರುವ ದೇವಸ್ಥಾನಗಳ ಸಹಾಯದಿಂದ ಈ ಕಾರ್ಯವನ್ನು ಮಾಡಬೇಕು.
೯ ಅ ೬ ಅ ೨. ದೇವಸ್ಥಾನಗಳ ರಕ್ಷಣೆಗಾಗಿ ಯುವಕರ ಗಸ್ತುಪಡೆಗಳನ್ನು ತಯಾರಿಸಬೇಕು ! : ಬಂಡಾಯದ (ದಂಗೆಗಳ) ಕಾಲಾವಧಿಯಲ್ಲಿ ಯುವಕರ ಗುಂಪುಗಳನ್ನು ತಯಾರಿಸಿ ಅವರಿಗೆ ಸರತಿಯಿಂದ ಹಗಲು–ರಾತ್ರಿ ದೇವಸ್ಥಾನಗಳ ರಕ್ಷಣೆಗಾಗಿ ಗಸ್ತು ಹಾಕುವ ಜವಾಬ್ದಾರಿಯನ್ನು ನೀಡುವುದು ಆವಶ್ಯಕವಾಗಿದೆ. ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ, ಮೂರ್ತಿಭಂಜನ ಮುಂತಾದ ಘಟನೆಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ, ದೇವಸ್ಥಾನಗಳ ರಕ್ಷಣೆಗಾಗಿ ಹಿಂದೂಗಳು ಈಗ ಪ್ರತಿದಿನ ದೇವಸ್ಥಾನಗಳಿಗೆ ಪಹರೆ ನೀಡುವ ಆವಶ್ಯಕತೆ ನಿರ್ಮಾಣವಾಗಿದೆ.
೯ ಅ ೬ ಅ ೩. ಹಿಂದೂ ಸಮಾಜಕ್ಕೆ ವಾರದಲ್ಲಿ ಒಂದು ದಿನ ದೇವಸ್ಥಾನಗಳಲ್ಲಿ ಒಟ್ಟಿಗೆ ಸೇರುವ ರೂಢಿಯನ್ನು ಮಾಡಬೇಕು !: ವಾರದಲ್ಲಿ ಕನಿಷ್ಠ ಪಕ್ಷ ಒಂದು ಬಾರಿಯಾದರೂ ನಾಮಜಪ, ಸಾಮೂಹಿಕ ಆರತಿ, ಕೀರ್ತನೆ, ಭಜನೆ ಇವುಗಳಂತಹ ಧಾರ್ಮಿಕ ಉದ್ದೇಶಗಳಿಂದ ಹತ್ತಿರದ ದೇವಸ್ಥಾನದಲ್ಲಿ ಒಟ್ಟಿಗೆ ಸೇರುವ ರೂಢಿಯನ್ನು ಹಿಂದೂ ಸಮಾಜಕ್ಕೆ ಮಾಡಿಸಬೇಕು. ಇದರ ಲಾಭವು ರಾಷ್ಟ್ರದ್ರೋಹಿಗಳ ಬಂಡಾಯಗಳ (ದಂಗೆಗಳ) ಕಾಲದಲ್ಲಿ ಒಟ್ಟಾಗಲು ಉಪಯೋಗವಾಗುವುದು.
೯ ಅ ೭. ರಾಷ್ಟ್ರನಿಷ್ಠ ನ್ಯಾಯವಾದಿಗಳು ಮತ್ತು ಡಾಕ್ಟರರ ಪ್ರಭಾವಿ ಸಂಘಟನೆಯನ್ನು ಮಾಡಬೇಕು ! : ಆಪತ್ಕಾಲದಲ್ಲಿ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳು ಮುಚ್ಚಿರುವುದರ ಸಾಧ್ಯತೆಯಿರುತ್ತದೆ. ಇಂತಹ ಸಮಯದಲ್ಲಿ ಉಪಚಾರದ ಎಲ್ಲ ಭಾರವು ಸರಕಾರಿ ಆಸ್ಪತ್ರೆಗಳ ಮೇಲೆ ಬೀಳುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಬೇಗನೇ ಉಪಚಾರವು ಸಿಗದಿದ್ದರೆ ರೋಗಿಗಳ ಮೇಲೆ ಅದರಿಂದ ಪರಿಣಾಮವಾಗುವ ಸಾಧ್ಯತೆಯಿದೆ. ಇದನ್ನು ತಡೆಯಲು ಶಾಂತಿಯ ಕಾಲದಲ್ಲಿ ಡಾಕ್ಟರರ ವಿಳಾಸ ಮತ್ತು ದೂರವಾಣಿ ಕ್ರಮಾಂಕಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಮತ್ತು ಅವರ ಪ್ರಬೋಧನೆಯನ್ನು ಮಾಡುವುದೂ ಆವಶ್ಯಕವಾಗಿದೆ. ರೋಗಿಗಳಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲೂ ಈ ಡಾಕ್ಟರರ ಸಹಾಯವಾಗಬಹುದು.
೯ ಆ. ಬಂಡಾಯದ ಸಮಯದಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಇದನ್ನು ಮಾಡಿರಿ !
೯ ಆ ೧. ಪ್ರತ್ಯಕ್ಷ ಹಿಂಸಾಚಾರದ ಸ್ಥಳದಲ್ಲಿ ಒಬ್ಬಿಬ್ಬರಿದ್ದರೆ, ಇದನ್ನು ಮಾಡಿರಿ !
೯ ಆ ೧ ಅ. ಹಿಂಸಾಚಾರದ ಸಮಯದಲ್ಲಿ ರಸ್ತೆಯಲ್ಲಿ ಓಡುವಾಗ ಅಕ್ಕಪಕ್ಕದಲ್ಲಿ ದ್ವಿಚಕ್ರವಾಹನಗಳಿದ್ದರೆ (ಸ್ಕೂಟರ್, ಮೋಟರಸೈಕಲ್) ಮತ್ತು ಶಿರಸ್ತ್ರಾಣಗಳನ್ನು ಹಾಕಿಕೊಳ್ಳಿರಿ. ಇದರಿಂದ ನಮ್ಮ ತಲೆ ಸುರಕ್ಷಿತವಾಗಿರುವುದು.
೯ ಆ ೧ ಆ. ಬೆಂಕಿ, ಕಲ್ಲೆಸೆತ, ಗುಂಡುಗಳನ್ನು ಹಾರಿಸುವುದು, ಪೋಲಿಸರಿಂದ ಲಾಠಿಚಾರ್ಜ ಮುಂತಾದವುಗಳು ನಡೆಯುತ್ತಿದ್ದರೆ, ಆ ಸ್ಥಳದಿಂದ ಆದಷ್ಟು ಬೇಗನೆ ಹೊರಬರಲು ಪ್ರಯತ್ನಿಸಬೇಕು.
೯ ಆ ೧ ಇ. ರಸ್ತೆಯ ಮಧ್ಯದಲ್ಲಿ ಜನರ ಗುಂಪು ಓಡುತ್ತಿದ್ದರೆ, ಅವರ ವಿರುದ್ಧ ದಿಕ್ಕಿಗೆ ಓಡದೇ ಅವರೊಂದಿಗೆ ಓಡಬೇಕು ಮತ್ತು ನಿಧಾನವಾಗಿ ಒಂದು ಬದಿಯಿಂದ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನವನ್ನು ಮಾಡಬೇಕು; ಏಕೆಂದರೆ ಜನಸಮೂಹದ ವಿರುದ್ಧ ದಿಕ್ಕಿನಲ್ಲಿ ಓಡಿದರೆ ಕೆಳಗೆ ಬೀಳುವ ಭಯವಿರುತ್ತದೆ.
೯ ಆ ೧ ಈ. ಪ್ರವಾಸದಲ್ಲಿ ೨ ಸಂಚಾರವಾಣಿಗಳನ್ನು ಇಟ್ಟುಕೊಳ್ಳಬೇಕು ! : ಪ್ರವಾಸ ಮಾಡುವಾಗ ತಮ್ಮ ಬಳಿ ೨ ಸಂಚಾರವಾಣಿ (ಮೊಬೈಲ್)ಗಳನ್ನು ಇಟ್ಟುಕೊಂಡರೆ ನಮಗೆ ಉಪಯೋಗವಾಗುವುದು. ನಾವು ಪ್ರವಾಸ ಮಾಡುವಾಗ ಹಿಂಸಾಚಾರ ಪ್ರಾರಂಭವಾದರೆ ಒಂದು ಸಂಚಾರವಾಣಿಯನ್ನು (ಮೊಬೈಲ್‌ಅನ್ನು) ತಮ್ಮ ಕಿಸೆಯಲ್ಲಿಟ್ಟುಕೊಳ್ಳಬೇಕು ಮತ್ತು ಇನ್ನೊಂದನ್ನು ಕಂಪನ ಸ್ಥಿತಿಯಲ್ಲಿ ತಮ್ಮ ಚೀಲದಲ್ಲಿಡಬೇಕು. ಹಿಂಸಾಚಾರದ ಸಮಯದಲ್ಲಿ ನಮ್ಮ ಸಾಮಾನು ಅಥವಾ ವಸ್ತುಗಳನ್ನು ಯಾರಾದರೂ ಬಲವಂತವಾಗಿ ಕಿತ್ತುಕೊಳ್ಳಲು ಬಂದರೆ, ಕಿಸೆಯಲ್ಲಿನ ಸಂಚಾರವಾಣಿಯನ್ನು ಅವರಿಗೆ ಕೊಡಬೇಕು. ಇದರಿಂದ ನಮ್ಮ ಜೀವ ಉಳಿಯುವುದು. ನಂತರ ಸಂಪರ್ಕಕ್ಕಾಗಿ ನಮ್ಮ ಬಳಿಯಿರುವ ಇನ್ನೊಂದು ಸಂಚಾರವಾಣಿಯನ್ನು ಉಪಯೋಗಿಸಬಹುದು.
೯ ಆ ೧ ಉ. ಯಾವಾಗಲೂ ಜೊತೆಗೆ ಚಿಲ್ಲರೆ ಹಣವನ್ನು ಇಟ್ಟು ಕೊಳ್ಳಬೇಕು ! : ಹಿಂಸಾಚಾರದ ಪ್ರದೇಶದಲ್ಲಿ ಒಮ್ಮೆಲೆ ಒತ್ತಡ ನಿರ್ಮಾಣವಾಗಿ ಪರಿಸ್ಥಿತಿ ಕೆಡಬಹುದು, ಇದು ನಮಗೆ ಗೊತ್ತಿದೆ. ಆ ಭಾಗದಲ್ಲಿ ನಾವು ಹೋಗುವವರಿದ್ದರೆ, ಚಿಲ್ಲರೆ ಹಣವನ್ನು ಕಿಸೆಯಲ್ಲಿಟ್ಟುಕೊಳ್ಳಬೇಕು. ದೊಡ್ಡ ಮೊತ್ತದ ನೋಟುಗಳನ್ನು ಕಿಸೆಯಲ್ಲಿಟ್ಟುಕೊಳ್ಳಬಾರದು. ಹಿಂಸಾಚಾರದ ಕಾಲದಲ್ಲಿ ಲೂಟಿ, ಸುಲಿಗೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇಂತಹ ಸಮಯದಲ್ಲಿ ನಮ್ಮನ್ನು ಯಾರಾದರೂ ಲೂಟಿ ಮಾಡಲು ಬಂದರೆ, ಅವರಿಗೆ ತಕ್ಷಣ ಚಿಕ್ಕ ಮೊತ್ತದ ನೋಟುಗಳನ್ನು ನೀಡಿ ನಾವು ಸುರಕ್ಷಿತರಾಗಿರಬಹುದು.
೯ ಆ ೧ ಊ. ನಮ್ಮ ವಾಹನ ಹಿಂಸಾಚಾರ ನಡೆದ ಸ್ಥಳಕ್ಕೆ ಬಂದರೆ ಅಲ್ಲಿಂದ ಹೊರಟು ಹೋಗುವುದು : ಚತುಷ್ಚಕ್ರ ವಾಹನದಿಂದ ಹೋಗುವಾಗ ಇದ್ದಕ್ಕಿದ್ದಂತೆ ನಮ್ಮ ವಾಹನ ಹಿಂಸಾಚಾರ ನಡೆದಿರುವ ಮಾರ್ಗಕ್ಕೆ ಬಂದರೆ, ಶಾಂತರಾಗಿದ್ದು ನಿಧಾನವಾಗಿ ವಾಹನವನ್ನು ಮುಂದೆ ಕೊಂಡೊಯ್ದು ಆ ಮಾರ್ಗವನ್ನು ಬದಲಾಯಿಸಬೇಕು.
೯ ಇ. ಹಿಂಸಾಚಾರದ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಪತ್ರಿಕೋದ್ಯಮದ ಮಹತ್ವದ್ದಾಗಿದೆ ! : ನಾವು ಮನೆಯಲ್ಲಿರುವಾಗ ಹೊರಗಡೆ ಹಿಂಸಾಚಾರವಾಗುತ್ತಿದ್ದರೆ, ಸಾಮಾಜಿಕ ಪತ್ರಿಕೋದ್ಯಮದ ಉಪಯೋಗವನ್ನು ಮಾಡಬೇಕು. ನಾವೆಲ್ಲಿದ್ದೇವೆ, ಹಿಂಸಾಚಾರದ ಸ್ಥಳದಲ್ಲಿ ಏನು ನಡೆದಿದೆ, ಎಂದು ಸ್ವಲ್ಪ ಸ್ವಲ್ಪ ಸಮಯದ ನಂತರ ಇತರ ಕಡೆಗಿನ ಜನರಿಗೆ ಹೇಳುತ್ತಿರಬೇಕು. ಗಾಳಿ ಸುದ್ದಿಯನ್ನು ಹರಡಬಾರದು. ನಮ್ಮ ಭಾಗದಲ್ಲಿನ ಹೆಚ್ಚೆಚ್ಚು ಪತ್ರಕರ್ತರ ಸಂಪರ್ಕ ಕ್ರಮಾಂಕಗಳನ್ನು ನಮ್ಮ ಸಂಚಾರವಾಣಿಯಲ್ಲಿ ನೋಂದಣಿ ಮಾಡಿಡಬೇಕು.
೯ ಈ. ಹಿಂಸಾಚಾರದ ಕಾಲದಲ್ಲಿ ರಾಷ್ಟ್ರಪ್ರೇಮಿಗಳ ಪ್ರಭಾವಿ ಸಂಪರ್ಕವ್ಯವಸ್ಥೆ ಇರುವುದು ಅತ್ಯಾವಶ್ಯಕ ! : ದೇಶದಲ್ಲಿ ಎಲ್ಲಿಯೂ ಬಂಡಾಯದಿಂದ ಹಿಂಸಾಚಾರವಾದರೆ, ಅದರ ಬಗ್ಗೆ ದೇಶದಾದ್ಯಂತದ ರಾಷ್ಟ್ರಪ್ರೇಮಿಗಳನ್ನು ಎಚ್ಚರಿಸುವುದು ಆವಶ್ಯಕವಾಗಿದೆ, ಉದಾ. ಚೆನ್ನೈಯಲ್ಲಿ ಹಿಂಸಾಚಾರವಾದರೆ ಜಮ್ಮು ಮತ್ತು ದೆಹಲಿ ಈ ಸ್ಥಳಗಳಿಗೂ ತಕ್ಷಣ ಮಾಹಿತಿಯನ್ನು ನೀಡಬೇಕು. ಇದಕ್ಕಾಗಿ ಈಗಿನಿಂದಲೇ ನಾವೆಲ್ಲರೂ ಪ್ರಭಾವಿ ಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸುವುದು ಆವಶ್ಯಕವಾಗಿದೆ. ಕಿರುಸಂದೇಶ (ಎಸ್.ಎಮ್.ಎಸ್) ಮತ್ತು ವಿ-ಅಂಚೆ (ಇ-ಮೇಲೆ) ಇವುಗಳ ಮೂಲಕ ಎಲ್ಲರೊಂದಿಗೆ ಸಂಪರ್ಕವನ್ನು ಸಾಧಿಸಬಹುದು. ಇಂತಹ ಒಂದು ವ್ಯವಸ್ಥೆಯನ್ನು ಮೊದಲೇ ತಯಾರಿಸಿಡಬೇಕು.
೯ ಉ. ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಆಯೋಜನೆಯನ್ನು ಮಾಡಬೇಕು : ಹಿಂಸಾಚಾರದ ಆರಂಭದಲ್ಲಿ ಸಂಚಾರಸಾರಿಗೆಯ ಸಾಧನ ಸೌಲಭ್ಯಗಳ ಅಭಾವ, ಅಸುರಕ್ಷಿತತೆ ಮುಂತಾದ ಕಾರಣಗಳಿಂದಾಗಿ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣಗಳಂತಹ ಸ್ಥಳಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸಿಲುಕುತ್ತಾರೆ. ಇಂತಹವರನ್ನು ಅವರ ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಾವು ವಹಿಸಬೇಕು. ಜನರು ಒಟ್ಟಿಗೆ ಬರುವ ನಿಷೇಧಾಜ್ಞೆ ಅಥವಾ ಇತರ ಕಾರಣ ಗಳಿಂದಾಗಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು ಸಾಧ್ಯವಿಲ್ಲದಿದ್ದರೆ ಅವರ ಊಟ-ತಿಂಡಿ-ನೀರಿನ ವ್ಯವಸ್ಥೆಯನ್ನು ಮಾಡಬೇಕು.
೯ ಊ. ಸಂಖ್ಯೆಯಲ್ಲಿ ಕಡಿಮೆಯಿರುವ ಭಾಗಗಳಲ್ಲಿನ ರಾಷ್ಟ್ರಪ್ರೇಮಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಆಯೋಜನೆಯನ್ನು ಮಾಡಬೇಕು !:
ಹಿಂಸಾಚಾರ ಆರಂಭವಾದ ನಂತರ ಯಾವ ಭಾಗದಲ್ಲಿ ರಾಷ್ಟ್ರ ಪ್ರೇಮಿಗಳ ಸಂಖ್ಯೆ ಕಡಿಮೆಯಿದೆ ಎಂದು ಅನಿಸುತ್ತದೆಯೋ, ಆ ಭಾಗದಲ್ಲಿ ರಾಷ್ಟ್ರಪ್ರೇಮಿಗಳ ರಕ್ಷಣೆಗೆ ಪ್ರಾಧಾನ್ಯತೆಯನ್ನು ನೀಡಬೇಕು. ಇಂತಹ ಸಮಯದಲ್ಲಿ ಇತರ ಕಡೆಗಳಲ್ಲಿನ ರಾಷ್ಟ್ರಪ್ರೇಮಿಗಳು ಆ ರಾಷ್ಟ್ರಪ್ರೇಮಿಗಳ ರಕ್ಷಣೆಯನ್ನು ಮಾಡಲು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತರಬೇಕು.
೯ ಎ. ಮಹಿಳೆಯರ ಮತ್ತು ರಾಷ್ಟ್ರನಿಷ್ಠರ ಸಹಾಯ ಪಡೆದು ಪೊಲೀಸರಲ್ಲಿ ತಮ್ಮ ಪಕ್ಷವನ್ನು ಮಂಡಿಸಬೇಕು ! : ಹಿಂಸಾಚಾರದ ಕಾಲಾವಧಿಯಲ್ಲಿ ಅದರಲ್ಲಿ ಸಿಲುಕದಿರುವ (ಉದಾ. ವಯೋವೃದ್ಧರು, ಮಹಿಳೆಯರು ಮುಂತಾದವರು) ರಾಷ್ಟ್ರನಿಷ್ಠರ ನಿಲುವು ಪರಣಾಮಕಾರಿಯಾಗ ಬಹುದು. ಇವರ ಪೈಕಿ ಕೆಲವು ಜನರು ಮಹಿಳೆಯರನ್ನು ಜೊತೆಗೆ ಕರೆದುಕೊಂಡು ಪೊಲೀಸ್ ಠಾಣೆಗೆ ಸಂಬಂಧಿತ ಅಧಿಕಾರಿಗಳ ಬಳಿ ಹೋಗಬೇಕು. ಅಲ್ಲಿ ಶಾಂತವಾಗಿ ರಾಷ್ಟ್ರಪ್ರೇಮಿಗಳ ಮೇಲಾಗುವ ಅತ್ಯಾಚಾರಗಳ ಕುರಿತು (ಆಗುತ್ತಿದ್ದಲ್ಲಿ) ಪೊಲೀಸರಿಗೆ ಹೇಳಬೇಕು. ಇದರಿಂದ ರಾಷ್ಟ್ರಪ್ರೇಮಿಗಳು ಶಾಂತಿಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವಾತಾವರಣ ಸೃಷ್ಟಿಸಲು ಸಹಾಯವಾಗುತ್ತದೆ.
೯ ಏ. ಇತರ ಕಡೆಯ ರಾಷ್ಟ್ರಪ್ರೇಮಿಗಳು ಮಾಡಬೇಕಾದ ಪ್ರಯತ್ನ : ಯಾವುದಾದರೊಂದು ಭಾಗದಲ್ಲಿ ಹಿಂಸಾಚಾರ ಆರಂಭವಾಗಿದ್ದರೆ, ಅಲ್ಲಿನ ಜನರಿಗೆ ಪೊಲೀಸ್ ಖಾತೆಯಲ್ಲಿನ ಹಿರಿಯ ಅಧಿಕಾರಿಗಳು ಭೇಟಿಯಾಗುವುದಿಲ್ಲ. ಆದುದರಿಂದ ಯಾವ ಭಾಗದಲ್ಲಿ ಹಿಂಸಾಚಾರದ ಸ್ಥಿತಿ ಇಲ್ಲವೋ, ಅಂತಹ ಭಾಗಗಳಲ್ಲಿನ, ಪ್ರತಿಷ್ಠಿತ ರಾಷ್ಟ್ರಪ್ರೇಮಿಗಳು ಪೊಲೀಸ್ ಖಾತೆಯಲ್ಲಿನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ರಾಷ್ಟ್ರಪ್ರೇಮಿಗಳ ಮೇಲಿನ ಅತ್ಯಾಚಾರ ಮತ್ತು ತತ್ಕಾಲಿನ ಪರಿಸ್ಥಿತಿಯ ಬಗ್ಗೆ ಹೇಳಬೇಕು.
೯ ಐ. ಪೊಲೀಸರಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು : ಹಿಂಸಾಚಾರದ ಕಾಲಾವಧಿಯಲ್ಲಿ ಶಾಂತಿಯನ್ನು ಸೃಷ್ಟಿಸಲು ಸರಕಾರವು ಕೇಂದ್ರೀಯ ಮೀಸಲು ಪೊಲೀಸ್ ಪಡೆ, ರಾಜ್ಯ ಮೀಸಲು ಪೊಲೀಸ್ ಪಡೆಗಳಂತಹ ಸಶಸ್ತ್ರ ಪೊಲೀಸ್ ದಳದವರನ್ನು ಕರೆಯುತ್ತದೆ. ರಾಷ್ಟ್ರಪ್ರೇಮಿಗಳು ಸ್ವಯಂಸೇವಕರಾಗಿ ಈ ಪೊಲೀಸರಿಗೆ ಸಾಧ್ಯವಾದ ಸಹಾಯ (ಉದಾ. ನೀರು ಕೊಡುವುದು, ಕುಳಿತುಕೊಳ್ಳಲು ಕುರ್ಚಿ ಕೊಡುವುದು ಇತ್ಯಾದಿ) ಮಾಡಬೇಕು.
೯ ಒ. ಮಾಹಿತಿ ತಂತ್ರಜ್ಞಾನದ ಪ್ರಭಾವಿ ಉಪಯೋಗವನ್ನು ಮಾಡಬೇಕು ! : ಹಿಂಸಾಚಾರದ ಕಾಲಾವಧಿಯಲ್ಲಿ ರಾಷ್ಟ್ರಪ್ರೇಮಿಗಳ ಮೇಲಾಗುವ ಅನ್ಯಾಯವನ್ನು ತೋರಿಸುವ ವಿವಿಧ ಛಾಯಾಚಿತ್ರ ಮತ್ತು ಚಿತ್ರೀಕರಣಗಳನ್ನು (ವೀಡಿಯೋಗಳನ್ನು), ‘ಟ್ವಿಟರ್’, ‘ಫೇಸಬುಕ್’, ‘ಯು ಟ್ಯೂಬ್’ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಟ್ಟು ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಬೇಕು. ಹಾಗೆಯೇ ಕೆಲವು ವೈಶಿಷ್ಟ್ಯಪೂರ್ಣ ಛಾಯಾಚಿತ್ರಗಳನ್ನು ನಿಯತಕಾಲಿಕೆಗಳಿಗೂ ಕಳುಹಿಸಬೇಕು. ಹಿಂಸಾಚಾರದ ಸಂದರ್ಭದಲ್ಲಿ ಪ್ರಸಾರಮಾಧ್ಯಮಗಳಿಗೆ ಮಾಹಿತಿಯನ್ನು ನೀಡುವ ಪ್ರಸಂಗ ಬಂದರೆ ಮನಸ್ಸಿಗೆ ಮುಟ್ಟುವ ವಿಷಯಗಳನ್ನು ಅವರು ಸ್ಪಷ್ಟವಾಗಿ ಮಂಡಿಸಬೇಕು. ತಕ್ಷಣವೇ ಟ್ವಿಟ್ ಮಾಡಿ ಅದರಲ್ಲಿ ಸ್ಥಳೀಯ ಪೊಲೀಸ್ ಠಾಣೆ, ಹಿರಿಯ ಪೊಲೀಸ್ ಅಧಿಕಾರಿ, ಗೃಹಸಚಿವರು, ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಬೇಕು.
೯ ಓ. ಹಿಂಸಾಚಾರದ ನಂತರ ಇದನ್ನು ಮಾಡಿರಿ !
೯ ಓ ೧. ಹಿಂಸಾಚಾರಗಳಲ್ಲಿ (ದಂಗೆಗಳಲ್ಲಿ) ಸಿಲುಕಿಕೊಂಡ ನಿರಾಶ್ರಿತ ರಾಷ್ಟ್ರಪ್ರೇಮಿಗಳ ರಕ್ಷಣೆ ಮತ್ತು ಪುನರ್ವಸತಿ : ಬಂಡಾಯಗಳ ಸಮಯದಲ್ಲಿ ರಾಷ್ಟ್ರದ್ರೋಹಿಗಳ ಹಿಂಸಾಚಾರದಿಂದ ರಾಷ್ಟ್ರಪ್ರೇಮಿಗಳ ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ಹಾನಿಯಾಗಿರುತ್ತದೆ, ಇಂತಹವರ ಸ್ಥಿತಿ ಬಹಳ ನಾಜೂಕಾಗಿರುತ್ತದೆ. ಇಂತಹವರಿಗೆ ಸರಕಾರವು ಸಹಾಯ ಮಾಡದಿದ್ದರೆ ಇತರ ರಾಷ್ಟ್ರಪ್ರೇಮಿಗಳು ಆಧಾರ ನೀಡಬೇಕು. ಇದಕ್ಕಾಗಿ ‘ಆನ್‌ಲೈನ್’ ಅರ್ಪಣೆಯನ್ನು ಸಂಗ್ರಹಿಸಬಹುದು.
೯ ಓ ೨. ನಿರಾಶ್ರಿತ ರಾಷ್ಟ್ರಪ್ರೇಮಿಗಳ ತಾತ್ಕಾಲಿಕ ನಿವಾಸದ ವ್ಯವಸ್ಥೆ ಮಾಡುವುದು : ರಾಷ್ಟ್ರಪ್ರೇಮಿಗಳ ಮನೆಗಳು ನಾಶವಾಗಿದ್ದರೆ, ಸುಟ್ಟು ಹೋಗಿದ್ದರೆ ಅವರು ದೊಡ್ಡ ಪ್ರಮಾಣದಲ್ಲಿ ತೊಂದರೆಗೀಡಾಗುತ್ತಾರೆ. ಇಂತಹವರ ತಾತ್ಕಾಲಿಕ ನಿವಾಸದ ವ್ಯವಸ್ಥೆಯನ್ನು ಶಾಂತಿಯ ಕಾಲದಲ್ಲಿಯೇ ಮಾಡಿಡುವುದು ಆವಶ್ಯಕವಾಗಿದೆ. ದೊಡ್ಡ ಸಭಾಗೃಹಗಳು ಮತ್ತು ದೇವಸ್ಥಾನಗಳ ಜಾಗಗಳ ಬಳಕೆಯನ್ನು ಈ ಕಾರಣಗಳಿಗಾಗಿ ಮಾಡಬಹುದು. ನಿರಾಶ್ರಿತ ರಾಷ್ಟ್ರಪ್ರೇಮಿಗಳಿಗೆ ಹಾಸಿಗೆ, ಬಟ್ಟೆಗಳ ಆವಶ್ಯಕತೆಯೂ ಇರುತ್ತದೆ. ಹಿಂಸಾಚಾರದ ಬಿಸಿ ತಟ್ಟದಿರುವ ಭಾಗಗಳಲ್ಲಿ ಸಹಾಯ ಮೆರವಣಿಗೆ ತೆಗೆದು ಹಾಸಿಗೆಗಳನ್ನು, ಬಟ್ಟೆಗಳನ್ನು ಸಂಗ್ರಹಿಸಿ ಅವುಗಳಿಂದ ನಿರಾಶ್ರಿತ ರಾಷ್ಟ್ರಪ್ರೇಮಿಗಳ ತಾತ್ಕಾಲಿಕ ಅನುಕೂಲತೆ ಮಾಡಿಕೊಡಲು ಸಾಧ್ಯವಾಗುವುದು.
೯ ಓ ೩. ನಿರಾಶ್ರಿತರ ಉದರನಿರ್ವಹಣೆಯ ವ್ಯವಸ್ಥೆ : ನಿರಾಶ್ರಿತ ರಾಷ್ಟ್ರಪ್ರೇಮಿಗಳ ಉದರನಿವರ್ಹಣೆಯ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ಪ್ರಯತ್ನಗಳಾಗಬೇಕು. ಇದಕ್ಕಾಗಿ ಸಮಾಜದಲ್ಲಿನ ದಾನಿ ವ್ಯಕ್ತಿಗಳು, ವ್ಯಾಪಾರಿಗಳು, ಉದ್ಯಮಿಗಳ ಸಹಾಯವನ್ನೂ ಪಡೆಯಬಹುದು. ಇದಕ್ಕಾಗಿ ಬೇಕಾಗುವ ನಿಧಿ ಮತ್ತು ಆಹಾರಧಾನ್ಯಗಳ ಜವಾಬ್ದಾರಿಯನ್ನು ಅವರಿಗೆ ವಹಿಸಬಹುದು.
೯ ಓ ೪. ನಿರಾಶ್ರಿತರಿಗೆ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುವ ಆಯೋಜನೆಯನ್ನು ಮಾಡುವುದು : ಡಾಕ್ಟರರಿಗೆ ಪ್ರಬೋಧನೆಯನ್ನು ಮಾಡಿ ನಿರಾಶ್ರಿತರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುವುದು ಸಾಧ್ಯವಿದೆ. ಅವರ ಕಡೆಗಿನ ‘ಸ್ಯಾಂಪಲ್’ ಔಷಧಗಳನ್ನು ಉಚಿತವಾಗಿ ಕೊಡುವುದು ಅವರಿಗೆ ಸಾಧ್ಯವಿದೆ.
೯ ಓ ೫. ಗಲಭೆಪೀಡಿತರಿಗಾಗಿ ಇರುವ ಸೌಲಭ್ಯಗಳ ಲಾಭವನ್ನು ಮಾಡಿ ಕೂಡುವುದು : ಗಲಭೆ ಹಿಡಿತಕ್ಕೆ ಬಂದ ನಂತರ ನಿರಾಶ್ರಿತ ಹಿಂದೂಗಳ ಶಾಶ್ವತರೂಪಿ ಪುನರ್ವಸತಿಗಾಗಿ ರಾಷ್ಟ್ರಪ್ರೇಮಿಗಳು ಪ್ರಯತ್ನಿಸಬೇಕು. ಅದಕ್ಕಾಗಿ ಅವರಿಗೆ ನಷ್ಟಪರಿಹಾರವನ್ನು ಕೊಡಿಸುವುದು, ಗಲಭೆಪೀಡಿತರಿಗಾಗಿರುವ ಸೌಲಭ್ಯಗಳ ಲಾಭವನ್ನು ದೊರಕಿಸಿಕೊಡುವುದು ಈ ದೃಷ್ಟಿಯಿಂದ ಸಹಾಯ ಮಾಡಬೇಕು. ( ಮುಕ್ತಾಯ)