‘ಪೊಕ್ಸೋ ಕಾಯಿದೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು !

ಈ ದೇಶದಲ್ಲಿ ಭಾರತೀಯ ಸಂವಿಧಾನ ರೂಪಿಸಿರುವ ಕಾನೂನುಗಳು ಸರ್ವಶ್ರೇಷ್ಠವಾಗಿವೆ. ದೇಶವು ಜಾತ್ಯತೀತತೆಯನ್ನು ಸ್ವೀಕರಿಸಿರುವುದರಿಂದ ಸಹಜವಾಗಿಯೇ ಧರ್ಮಕ್ಕಿಂತ ಸಂವಿಧಾನಕ್ಕೆ ಹೆಚ್ಚು ಮಹತ್ವ ಬಂದಿದೆ. ಹೀಗಿದ್ದರೂ, ಅಲ್ಪಸಂಖ್ಯಾತ ಸಮಾಜವು ಭಾರತೀಯ ಕಾನೂನುಗಳನ್ನು ಗೌರವಿಸದೇ ತಮ್ಮ ಧರ್ಮವು ವಿನಾಯಿತಿ (ಅನುಮತಿ) ನೀಡಿದೆ ಎಂದು ಹೇಳುತ್ತಾ ಅಪರಾಧಗಳ ಪ್ರಕರಣಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯವೇ. ಕರ್ನಾಟಕದ ಇಂತಹ ಒಂದು ಪ್ರಕರಣದ ಮೂಲಕ ಈ ಸಮಾಜಘಾತಕ ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಲೇಖನ !

೧. ಮತಾಂಧನು ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು

‘ಕರ್ನಾಟಕ ರಾಜ್ಯದಲ್ಲಿ ನಯಾಜ ಪಾಶಾ ಎಂಬ ವ್ಯಕ್ತಿ ಮತ್ತು ಅವನ ಪತ್ನಿಯ ವಿರುದ್ಧ ದೂರು ದಾಖಲಾಗಿದೆ. ನೊಂದ ಬಾಲಕಿಯ ತಾಯಿಯು ದೂರಿನಲ್ಲಿ ಮತಾಂಧನು ತನ್ನ ೧೫ ವರ್ಷದ ಬಾಲಕಿಯನ್ನು ೨೭ ಸಪ್ಟೆಂಬರ್ ೨೦೨೦ ರ ಮಧ್ಯರಾತ್ರಿ ಅಪಹರಿಸಿದನು. ಬಾಲಕಿಯು ಕಾಣಿಸದಿದ್ದಾಗ ನಾವು ಅವಳನ್ನು ಬಹಳ ಹುಡುಕಿದೆವು; ಆದರೆ ಅವಳು ಸಿಗಲಿಲ್ಲ. ತದನಂತರ ೧ ವಾರದ ಬಳಿಕ ಬಾಲಕಿಯು ಅಳುತ್ತಾ ಮನೆಗೆ ಬಂದಳು. ಬಾಲಕಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಬಾಲಕಿಯು, ಪಕ್ಕದ ಮನೆಯ ವಾಸಿಸುವ ನಯಾಜ ಪಾಶಾ ಅವಳನ್ನು ಅಪಹರಿಸಿಕೊಂಡು ಹೋಗಿ, ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ತಾನು ಅವನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ, ಅಲ್ಲದೇ ಏಕಾಂತದಲ್ಲಿ ಅವಳಿಂದ ಬಿಳಿ ಕಾಗದದಲ್ಲಿ ಅವಳ ಹಸ್ತಾಕ್ಷರವನ್ನು ಪಡೆದಿದ್ದಾನೆ ಎಂದೂ ಹೇಳಿದಳು. ಬಾಲಕಿಯ ಈ ಮಾತನ್ನು ಕೇಳಿದ ಬಳಿಕ ಅವಳ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಬಾಲಕಿಯನ್ನು ಅಪಹರಿಸಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ ೩೬೩, ೩೪೩, ೧೧೪ ಮತ್ತು ೫೦೬ ಈ ಕಲಂಗಳಡಿಯಲ್ಲಿ ಹಾಗೂ ‘ಪೊಕ್ಸೋ ಕಾನೂನಿನ ೪ ಮತ್ತು ೬ ಈ ಕಲಂಗಳ ಅಡಿಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿದರು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿರುವುದು

ಈ ಸಮಯದಲ್ಲಿ ಮತಾಂಧನ ಪತ್ನಿಯು ತನ್ನ ಹೇಳಿಕೆಯಲ್ಲಿ, ಆರೋಪಿಯು ಮೌಲ್ವಿಯೆದುರು ಪೀಡಿತೆಯೊಂದಿಗೆ ಮದುವೆಯಾಗಿದ್ದು, ಪೀಡಿತೆಯು ಈ ಮದುವೆಗೆ ತನ್ನ ಸಮ್ಮತಿಯಿದೆ ಎಂದು ಹೇಳಿರುವ ಪ್ರಮಾಣಪತ್ರವನ್ನು ಕೂಡ ನೀಡಿದ್ದಾಳೆ. ಅದಕ್ಕೆ ಪೀಡಿತೆಯ ತಾಯಿಯು ಅವನು, ಒಂದು ಬಿಳಿ ಹಾಳೆಯ ಮೇಲೆ ಏಕಾಂತದಲ್ಲಿ ಪೀಡಿತೆಯ ಹಸ್ತಾಕ್ಷರವನ್ನು ಪಡೆದು ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದಾನೆ ಎಂದು ಹೇಳಿದಳು.

‘ಪೊಕ್ಸೋ ಕಾನೂನಿನಂತೆ ಪ್ರೌಢಳಲ್ಲದ ಬಾಲಕಿಯು ನೀಡಿದ ಸಮ್ಮತಿಗೆ ಭಾರತೀಯ ದಂಡ ಸಂಹಿತೆಯಲ್ಲಿ ಮಾನ್ಯತೆ ಇಲ್ಲ. ಆದುದರಿಂದ ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ ಆಕ್ಟ್ ಕಲಂ ೯ ಮತ್ತು ೧೦ ರ ಅನ್ವಯ ಈ ಮದುವೆ ಕಾನೂನುಬಾಹಿರವಾಗುತ್ತದೆ,  ಸಹಜವಾಗಿಯೇ ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿತು.

೩. ಆರೋಪಿಯ ಪತ್ನಿ ಮತ್ತು ಪೀಡಿತ ಬಾಲಕಿಯು ಉಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರವನ್ನು ಪ್ರಸ್ತುತ ಪಡಿಸುವುದು

ಸತ್ರ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ ಬಳಿಕ ಆರೋಪಿಯು ಉಚ್ಚ ನ್ಯಾಯಾಲಯದ ಮೊರೆ ಹೋದನು. ಉಚ್ಚ ನ್ಯಾಯಾಲಯದಲ್ಲಿ ಆರೋಪಿಯ ಪತ್ನಿ ಮತ್ತು ಪೀಡಿತೆಯು ಪ್ರಮಾಣ  ಪತ್ರವನ್ನು (ಎಪಿಡೆವಿಟ್) ಪ್ರಸ್ತುತ ಪಡಿಸಿದರು. ಅದರಲ್ಲಿ ‘ಮುಸಲ್ಮಾನ ಕಾನೂನಿನಲ್ಲಿ ಒಬ್ಬರಿಗಿಂತ ಹೆಚ್ಚು ಮದುವೆಯಾಗುವ ಅನುಮತಿ ಇದ್ದು ಈ ಮದುವೆಗೆ ನನ್ನ ಸಮ್ಮತಿಯಿದೆ ಎಂದು ಆರೋಪಿಯ ಪತ್ನಿಯು ಹೇಳಿದಳು. ಉಚ್ಚ ನ್ಯಾಯಾಲಯದಲ್ಲಿ, ಪೀಡಿತ ಬಾಲಕಿ ಮತ್ತು ಆರೋಪಿಯು ಪರಸ್ಪರ ಪ್ರೀತಿಸುತ್ತಿದ್ದು, ಅವರಿಗೆ ಮದುವೆಯಾಗುವುದಿತ್ತು. ಈ ಮದುವೆ ದೂರುದಾರಳಿಗೆ (ಬಾಲಕಿಯ ತಾಯಿಗೆ) ಒಪ್ಪಿಗೆಯಿರಲಿಲ್ಲ. ಆದುದರಿಂದ ಅವಳ ತಾಯಿಯು ದೂರು ದಾಖಲಿಸಿದ್ದಾಳೆ ಎಂಬ ಯುಕ್ತಿವಾದವನ್ನು ಮಾಡಲಾಯಿತು. ಪೀಡಿತೆಯು ತನ್ನ ಸಮ್ಮತಿಯೊಂದಿಗೆ ಮೌಲ್ವಿಯ ಎದುರಿಗೆ ಆರೋಪಿಯೊಂದಿಗೆ ಮದುವೆಯಾಗಿದ್ದು, ಅವಳು ಅವನ ಪತ್ನಿಯೆಂದು ಅವರ ಮನೆಯಲ್ಲಿಯೇ ವಾಸಿಸುತ್ತಿದ್ದಾಳೆ ಎಂದು ಹೇಳಿದಳು.

೪. ಪೀಡಿತೆಯು ಆಧುನಿಕ ವೈದ್ಯರಿಗೆ ತನ್ನ ಗುಪ್ತಾಂಗವನ್ನು ತಪಾಸಣೆ ಮಾಡಲು ನಿರಾಕರಿಸುವುದು

ಆರೋಪಿಯ ಪರವಾಗಿ ನೀಡಿದ ಯುಕ್ತಿವಾದದಲ್ಲಿ, ಆಧುನಿಕ ವೈದ್ಯರು ಪೀಡಿತೆಯ ವೈದ್ಯಕೀಯ ತಪಾಸಣೆಯನ್ನು ಮಾಡಿದ್ದಾರೆ ಮತ್ತು ಅವರ ಪ್ರಮಾಣಪತ್ರದಂತೆ ಪೀಡಿತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಕಂಡು ಬಂದಿಲ್ಲ. ಆಧುನಿಕ ವೈದ್ಯರು ತಮ್ಮ ಹೇಳಿಕೆಯಲ್ಲಿ ಪೀಡಿತ ಬಾಲಕಿಯು ಅವಳ ಗುಪ್ತಾಂಗದ ತಪಾಸಣೆಯನ್ನು ಮಾಡಲು ಅನುಮತಿಯನ್ನು ನೀಡಲಿಲ್ಲ. ಲೈಂಗಿಕ ದೌರ್ಜನ್ಯವಾಗಿರುವುದನ್ನು ಪರಿಶೀಲಿಸಲು ಆವಶ್ಯಕವಿರುವ ತಪಾಸಣೆಯನ್ನು ಮಾಡಲು ಪೀಡಿತೆಯು ವಿರೋಧಿಸಿದಳು. ಆದುದರಿಂದ ಅವಳ ಮೇಲೆ ಲೈಂಗಿಕ ಅತ್ಯಾಚಾರವಾಗಿದೆ ಎಂಬುದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ ಎಂದು ಹೇಳಿದರು.

೫. ಅಪ್ರಾಪ್ತ ಪೀಡಿತೆಯು ಪ್ರೌಢಳಲ್ಲದ್ದರಿಂದ ಅವಳ ಸಮ್ಮತಿಗೆ ಕಾನೂನಿನ ಪರಿಭಾಷೆಯಲ್ಲಿ ಅರ್ಥವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸುವುದು

ಅ. ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ಗಮನಕ್ಕೆ ಬಂದ ವಿಷಯವೆಂದರೆ ಪೀಡಿತೆ ಮತ್ತು ಅವಳ ಕುಟುಂಬದವರ ಮೇಲೆ ಆರೋಪಿಯ ಸಂಬಂಧಿಕರಿಂದ ತೀವ್ರ ಒತ್ತಡವಿದೆ. ಈ ಒತ್ತಡದಿಂದ ಪೀಡಿತೆಯು ಹಸ್ತಾಕ್ಷರವನ್ನು ಮಾಡಿದ್ದು, ಅವಳು ಮದುವೆಯಾಗಿರುವುದನ್ನು ಒಪ್ಪಿಕೊಳ್ಳುತ್ತಿದ್ದಾಳೆ. ಅಜ್ಞಾನಿ ಬಾಲಕರ ಸಮ್ಮತಿಗೆ ಕಾನೂನಿನ ಪರಿಭಾಷೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹಲವುಬಾರಿ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಆ. ಉಚ್ಚ ನ್ಯಾಯಾಲಯದ ಗಮನಕ್ಕೆ ಬಂದ ವಿಷಯವೆಂದರೆ, ಪೀಡಿತೆಯು ಪೊಲೀಸ್ ಠಾಣೆಯಲ್ಲಿ ನೀಡಿದ ಹೇಳಿಕೆ ಮತ್ತು ‘ಮ್ಯಾಜಿಸ್ಟ್ರೇಟರ ಎದುರಿಗೆ ನೀಡಿದ ಹೇಳಿಕೆಯಲ್ಲಿ ತುಂಬಾ ವ್ಯತ್ಯಾಸವಿದೆ. ಹೀಗಿದ್ದರೂ, ಈ ವ್ಯತ್ಯಾಸದ ಲಾಭ ಆರೋಪಿಗೆ ಜಾಮೀನು ದೊರಕಿಸುವಲ್ಲಿ ಪೂರಕವಾಗಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು. ನ್ಯಾಯಾಲಯದ ಹೇಳಿಕೆಯಂತೆ ಎಲ್ಲಕ್ಕಿಂತ ಮಹತ್ವದ ಅಂಶವೆಂದರೆ, ಪೀಡಿತೆಯು ಅಪ್ರಾಪ್ತ ಮತ್ತು ಅಜ್ಞಾನಿಯಾಗಿರುವುದರಿಂದ ಅವಳ ತಿಳುವಳಿಕೆಗೆ ಬುದ್ಧಿಯ ಮಿತಿ ಇದೆ. ಅವಳನ್ನು ತಿಳುವಳಿಕೆಯುಳ್ಳ ಸಜ್ಞಾನ ವ್ಯಕ್ತಿಯಂತೆ ಅವಳು ಹೇಳಿಕೆಯನ್ನು ಅಥವಾ ‘ಮ್ಯಾಜಿಸ್ಟ್ರೇಟರ ಎದುರಿಗೆ ಹೇಳಿಕೆಯನ್ನು ಮಂಡಿಸಲು ಆಗುವು ದಿಲ್ಲ. ಮ್ಯಾಜಿಸ್ಟ್ರೇಟರ ಎದುರಿಗೆ ನೊಂದಾಯಿಸಲ್ಪಟ್ಟ ಹೇಳಿಕೆಯಲ್ಲಿ ಅವಳು ಸ್ಪಷ್ಟವಾಗಿ ‘ನನ್ನ ಮೇಲೆ ತೀವ್ರ ಒತ್ತಡವಿತ್ತು ಈ ಒತ್ತಡದಿಂದ ಏಕಾಂತದಲ್ಲಿ ತನ್ನಿಂದ ಹಸ್ತಾಕ್ಷರವನ್ನು ಪಡೆಯಲಾಯಿತು ಅಥವಾ ತನ್ನ ಮದುವೆಯಾಯಿತು, ಎಂದಿದ್ದಾಳೆ. ಇವೆಲ್ಲ ಹಿನ್ನೆಲೆಯಲ್ಲಿ ‘ಅವಳಿಗೆ ಆರೋಪಿಯ ಮೇಲೆ ಪ್ರೇಮವಿತ್ತು ಅಥವಾ ಅವಳು ಅವಳ ಇಚ್ಛೆಯಿಂದ ಅವನೊಂದಿಗೆ ಹೋದಳು. ಹಾಗೆಯೇ ಅವಳ ಇಚ್ಛೆಯಿಂದ ಲೈಂಗಿಕ ಕೃತ್ಯ ಜರುಗಿತು ಇವೆಲ್ಲವನ್ನು ಉಚ್ಚ ನ್ಯಾಯಾಲಯವು ನಿರಾಕರಿಸಿತು; ಏಕೆಂದರೆ ಅಪ್ರಾಪ್ತ ಪೀಡಿತೆಯ ಅಜ್ಞಾನಿ ಸಮ್ಮತಿಗೆ ಯಾವುದೇ ಅರ್ಥವಿರುವುದಿಲ್ಲ.

೬. ಮುಸಲ್ಮಾನರ ಕಾಯಿದೆಗಳು ವಿಶೇಷ ಕಾನೂನಿನ

ವಿರುದ್ಧ ಇರುವುದರಿಂದ ಅವುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಟಿಪ್ಪಣಿಯನ್ನು ಮಾಡುವುದು ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ್ ಆಕ್ಟ್ನ ಕಲಂ ೯ ಮತ್ತು ೧೦ ರ ಅನ್ವಯ ಬಾಲಕಿಯರ ಮದುವೆಯು ಅಮಾನ್ಯವಾಗಿದೆ. ಈ ಮದುವೆಯು ಮುಸಲ್ಮಾನರ ಕಾನೂನಿನಗನುಸಾರ ಸರಿಯಾಗಿದೆ ಎಂದು ಮತಾಂಧರ ಯುಕ್ತಿವಾದವಾಗಿದೆ. ಈ ಬಗ್ಗೆ ನ್ಯಾಯಾಲಯವು ತನ್ನ ಟಿಪ್ಪಣಿಯಲ್ಲಿ ಮುಸಲ್ಮಾನರ ಕಾನೂನನ್ನು ಪೋಕ್ಸೊ, ಚೈಲ್ಡ್ ಮ್ಯಾರೇಜ್ ರಿಸ್ಟ್ರೆಂಟ್ ಆಕ್ಟ್ ಮತ್ತು ಭಾರತೀಯ ಸಂವಿಧಾನದ ವಿಶೇಷ ಕಾನೂನುಗಳ ವಿರುದ್ಧ ಸ್ವೀಕರಿಸಲು ಸಾಧ್ಯವಿಲ್ಲವೆಂದು ನಮೂದಿಸಿದೆ. ವಿಶೇಷ ಕಾನೂನುಗಳನ್ನು ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ರಚಿಸಲಾಗಿರುತ್ತದೆ. ಹಾಗಾಗಿ ಅವುಗಳನ್ನು ಮುಸಲ್ಮಾನರ ಕಾನೂನು, ಅಂದರೆ ವೈಯಕ್ತಿಕ ಕಾನೂನಿಗಳಿಗಿಂತ ಮೇಲೆಂದು ತಿಳಿಯಲಾಗುವುದು.

೭. ಆರೋಪಿಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ತಲುಪಿ, ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯಗಳಾಗುವ ಸಾಧ್ಯತೆಯು ಹೆಚ್ಚಾಗಬಹುದು ಎಂದು ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದು

ಈ ಸಮಯದಲ್ಲಿ, ಆರೋಪಿಗೆ ಜಾಮೀನನ್ನು ನಿರಾಕರಿಸುವಾಗ ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪಿನ ಉದಾಹರಣೆಯನ್ನು ನೀಡಿ ತನ್ನ ಟಿಪ್ಪಣಿಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಅವರನ್ನು ಅಪಹರಿಸುವುದು, ಅವರಿಂದ ಕಾನೂನಿಗೆ ಮಾನ್ಯತೆಯಿಲ್ಲದ ಸಮ್ಮತಿ ಯನ್ನು ಪಡೆದುಕೊಳ್ಳುವುದು, ಇಂತಹ ಎಲ್ಲ ವಿಷಯಗಳು ಕಾನೂನಿನ ವಿರುದ್ಧವಾಗಿವೆ. ಆದುದರಿಂದ ಆರೋಪಿಗೆ ಜಾಮೀನು ನೀಡಿದರೆ, ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ತಲುಪಿ, ಬಾಲಕಿಯರ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚಾಗಬಹುದು, ಎಂದಿತು.

೮. ಆರೋಪಿಗೆ ಜಾಮೀನು ನೀಡಿದರೆ ಅವನಿಂದ ಪುನಃ ಪುನಃ ಇಂತಹ ಅಪರಾಧಗಳಾಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸುವುದು

ಈ ಪ್ರಕರಣದಲ್ಲಿ ಮತಾಂಧ ಆರೋಪಿಯ ಪತ್ನಿಯೂ ಪತಿಗೆ ಅಪರಾಧವನ್ನು ಮಾಡಲು ಪ್ರಚೋದಿಸಿ ಸಹಾಯ ಮಾಡಿದ್ದಾಳೆ. ಆದುದರಿಂದ ಅವಳ ಪತಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಮುಸಲ್ಮಾನ ಕಾನೂನಿನಲ್ಲಿ ಎರಡನೇಯ ಮದುವೆಗೆ ಮಾನ್ಯತೆ ಇದೆ, ಅದರರ್ಥ, ಅಪ್ರಾಪ್ತ ಬಾಲಕಿಯನ್ನು ಅಪಹರಿಸುವುದು ಮತ್ತು ಅವಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸುವುದು ಹಾಗೆಯೇ ಏಕಾಂತದಲ್ಲಿ ಅವಳಿಂದ ಹಸ್ತಾಕ್ಷರವನ್ನು (ಸಹಿಯನ್ನು) ಪಡೆದು ಕೊಳ್ಳುವುದು ಎಂದಾಗುವುದಿಲ್ಲ ! ಈ ಕುಕೃತ್ಯದಲ್ಲಿ ಆರೋಪಿಯ ಪತ್ನಿಯ ಒಪ್ಪಿಗೆಯಿರುವುದನ್ನು ಸ್ವೀಕರಿಸಿ ಜಾಮೀನು ನೀಡಿದರೆ, ಇಂತಹ ಅಪರಾಧಗಳಲ್ಲಿ ಹೆಚ್ಚಳವೇ ಆಗಲಿದೆ. ಈ ಆರೋಪಿಯನ್ನು ಬಿಡುಗಡೆ ಮಾಡಿದರೆ ಅವನು ಪುನಃ ಪುನಃ ಇಂತಹ ಅಪರಾಧಗಳನ್ನು ಮಾಡಬಹುದು. ಆದುದರಿಂದ ಆರೋಪಿಗೆ ಜಾಮೀನನ್ನು ನೀಡಲಾಗುವುದಿಲ್ಲ. ಇವೆಲ್ಲ ಕಾರಣಗಳಿಂದ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

೯. ಪೀಡಿತ ಬಾಲಕಿಯು ಮುಸಲ್ಮಾನಳಾಗಿದ್ದರೂ, ಬಾಲಕಿಯ ತಾಯಿಯು ದಿಟ್ಟತನದಿಂದ ಹೋರಾಡಿ ಆರೋಪಿಯ ಮೇಲೆ ಕ್ರಮ ಕೈಕೊಳ್ಳಲು ಪ್ರಯತ್ನಿಸುವುದು

ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಂಶವೆಂದರೆ, ಭಾರತದಲ್ಲಿ ‘ಲವ್ ಜಿಹಾದ್ನ  ಘಟನೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮತಾಂಧರು ಹಿಂದೂ ಹೆಸರು ಹೇಳಿ ಹಿಂದೂ ಯುವತಿಯರನ್ನು ಅಪಹರಿಸುವಂತಹ ಪ್ರಸಂಗಗಳು ಹಲವು ಬಾರಿ ಕಂಡು ಬಂದಿದೆ. ಮತಾಂಧರು ಪೀಡಿತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವಳನ್ನು ಬಿಟ್ಟ ಮೇಲೆ, ಅವಳ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆಗ ಪೊಲೀಸರು, ಮತಾಂಧರು ಮತ್ತು ತಥಾಕಥಿತ ಸಮಾಜಸೇವಕರು ಅವಳ ಮೇಲೆ ಒತ್ತಡವನ್ನು ಹಾಕುತ್ತಾರೆ. ಈ ಪ್ರಕರಣದಲ್ಲಿ ಪೀಡಿತ ಬಾಲಕಿಯು ಮುಸಲ್ಮಾನಳಾಗಿದ್ದರೂ ಒತ್ತಡವಿತ್ತು. ಅವಳ ತಾಯಿಯು ಇಂತಹ ಒತ್ತಡಕ್ಕೆ  ಮಣಿಯದೇ ಮತಾಂಧ ಮತ್ತು ಅವನ ಪತ್ನಿ ಇಬ್ಬರ ಮೇಲೆಯೂ ದೂರು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದಳು. ಇಷ್ಟೇ ಅಲ್ಲದೇ ಅವನಿಗೆ ಜಾಮೀನು ದೊರೆಯಬಾರದೆಂದು ಅವಳು ಉಚ್ಚ ನ್ಯಾಯಾಲಯದ ಮೊರೆ ಹೋದಳು.

೧೦. ‘ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂಗಳು ಯಾವುದೇ ಒತ್ತಡಕ್ಕೆ ಮಣಿಯದೇ ಆರೋಪಿಯ ಮೇಲೆ ದೂರು ದಾಖಲಿಸಬೇಕು

ಹಿಂದೂಗಳ ಸಂದರ್ಭದಲ್ಲಿ ಈ ರೀತಿ ಘಟಿಸಿದರೆ, ಅವರು ಯಾವುದೇ ಒತ್ತಡಕ್ಕೆ ಮಣಿಯದೇ ದೂರು ದಾಖಲಿಸಬೇಕು. ಅಪ್ರಾಪ್ತ ಪೀಡಿತರ ಸಂದರ್ಭದಲ್ಲಿ ಸಮ್ಮತಿಯೊಂದಿಗೆ ಜರುಗಿದ ಮದುವೆಯನ್ನು ಕಾನೂನು ಸ್ವೀಕರಿಸುವುದಿಲ್ಲ, ಎನ್ನುವುದನ್ನು ಗಮನದಲ್ಲಿಡಬೇಕು. ಇಂತಹ ಪ್ರಸಂಗಗಳಲ್ಲಿ ಹಿಂದೂ ನ್ಯಾಯವಾದಿಗಳು, ಇದು ಅವರ ಧರ್ಮಕಾರ್ಯವಾಗಿದೆ ಎಂದು ತಿಳಿದುಕೊಂಡು ಸಾಧ್ಯವಿರುವಷ್ಟು ಕಾನೂನಿನ ವಿಷಯದಲ್ಲಿ ಸಹಾಯ ಮಾಡಬೇಕು. ಇಲ್ಲದಿದ್ದರೆ ಹಿಂದೂಗಳು ಇಂತಹ ಪ್ರಕರಣಗಳನ್ನು ನಿರಂತರವಾಗಿ ಎದುರಿಸಬೇಕಾಗಬಹುದು. ಅದಕ್ಕಾಗಿ ಜನಜಾಗೃತಿ, ಹಿಂದೂಗಳ ಪ್ರಭಾವಿ ಸಂಘಟನೆ, ಧರ್ಮಪ್ರೇಮಿ ನ್ಯಾಯವಾದಿಗಳ ಸಂಘಟನೆ ಮತ್ತು ಒಗ್ಗಟ್ಟಿನಿಂದ ಕಾರ್ಯ ಮಾಡುವುದು ಆವಶ್ಯಕವಾಗಿದೆ.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷದ್ ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೨೧.೬.೨೦೨೧)