ಮಿಜೋರಾಮ್ ಪೊಲೀಸರ ಗುಂಡು ಹಾರಾಟದಲ್ಲಿ ಅಸ್ಸಾಂನ 6 ಪೊಲೀಸರ ಸಾವು, 50 ಕ್ಕೂ ಹೆಚ್ಚು ಗಾಯಾಳುಗಳು !

ಮಿಜೋರಾಮ್ ಮತ್ತು ಅಸ್ಸಾಂ ನಡುವಿನ ಗಡಿ ವಿವಾದ ಪ್ರಕರಣ

* ದೇಶವು ಸ್ವತಂತ್ರವಾಗಿ 75 ವರ್ಷ ಪೂರ್ಣವಾದರೂ ಭಾರತದಲ್ಲಿ ಇನ್ನೂ ರಾಜ್ಯಗಳ ನಡುವೆ ಗಡಿವಿವಾದ ನಡೆಯುತ್ತಿದ್ದು ಅದರಲ್ಲಿ ಪೊಲೀಸರು ಬಲಿಯಾಗುವುದು, ಇದು ಭಾರತಕ್ಕೆ ನಾಚಿಕೆಯ ಸಂಗತಿ ! ಇದಕ್ಕೆ ಇಲ್ಲಿಯವರೆಗಿನ ಆಡಳಿತಗಾರರು ಕಾರಣಕರ್ತರಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಸಮಸ್ಯೆಗೆ ತಕ್ಷಣ, ಪರಿಣಾಮಕಾರಿ ಹಾಗೂ ಯೋಗ್ಯ ಪರಿಹಾರ ನೀಡಲಾಗುವುದು !

ಆಯಿಜೊಲ್ – ಅಸ್ಸಾಂ ಮತ್ತು ಮಿಜೋರಾಮ್ ನಡುವಿನ ಗಡಿ ವಿವಾದವು ಮತ್ತೊಮ್ಮೆ ಭುಗಿಲೆದ್ದಿದ್ದು ಇದರ ಪರಿಣಾಮವಾಗಿ ಜುಲೈ 26 ರಂದು ರಾತ್ರಿ ಅಸ್ಸಾಂನ ಕಛಾರ ಪ್ರದೇಶದಲ್ಲಿ ನಡೆದ ಗುಂಡು ಹಾರಾಟದಲ್ಲಿ ಅಸ್ಸಾಂನ 6 ಪೊಲೀಸರು ಸಾವನ್ನಪ್ಪಿದ್ದಾರೆ ಹಾಗೂ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧೀಕ್ಷಕ ವೈಭವ ನಿಂಬಾಳಕರ ಇವರೂ ಕೂಡ ಸೇರಿದ್ದಾರೆ.

ಹಿಂಸಾಚಾರದ ಘಟನೆಯಿಂದ ಅಸ್ಸಾಂ ಹಾಗೂ ಮಿಜೋರಾಮ್ ರಾಜ್ಯದ ಮುಖ್ಯಮಂತ್ರಿಗಳು ಸಾಮಾಜಿಕ ಮಾಧ್ಯಮದಿಂದ ಪರಸ್ಪರರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಎರಡೂ ರಾಜ್ಯಗಳ ಪೊಲೀಸರು ಇನ್ನೊಂದು ರಾಜ್ಯಕ್ಕೆ ಹೋಗಿ ಹಿಂಸಾಚಾರ ಮಾಡುತ್ತಿದ್ದಾರೆ, ಎಂದು ಎರಡೂ ರಾಜ್ಯದ ಮುಖ್ಯಮಂತ್ರಿಗಳಿಂದ ವಿವಿಧ ವಿಡಿಯೋಗಳನ್ನು ಟ್ವೀಟ್ ಮಾಡಿ ಹೇಳಲಾಗುತ್ತಿದೆ.

1. ಕೇಂದ್ರಿಯ ಗೃಹ ಸಚಿವ ಅಮಿತ್ ಶಾಹ್ ಇವರು ಈ ಎರಡೂ ರಾಜ್ಯದ ನಾಯಕರೊಂದಿಗೆ ಚರ್ಚೆ ಮಾಡಿದ್ದು ಗಡಿ ವಿವಾದದ ಮೇಲೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಇಬ್ಬರೂ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

2. ಮುಖ್ಯಮಂತ್ರಿಗಳಿಬ್ಬರೂ ಈ ಬಗ್ಗೆ ಭರವಸೆ ನೀಡಿದ್ದರೂ, ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾ ಇವರು ಟ್ವೀಟ್ ಮಾಡುತ್ತಾ, ಅಸ್ಸಾಂ ರಾಜ್ಯದ ಪೊಲೀಸರ ಮೇಲೆ ಗುಂಡು ಹಾರಾಟ ಮಾಡಿದ ನಂತರ ಮಿಜೋರಾಮ್ ಪೊಲೀಸರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

3. ಕೇಂದ್ರ ಮೀಸಲು ಭದ್ರತಾ ಪಡೆಗಳು, ತಮ್ಮ ಪಡೆಗಳು ಎರಡೂ ರಾಜ್ಯಗಳ ಪೊಲೀಸರೊಂದಿಗೆ ಇದ್ದು, ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿವೆ, ಆದರೆ ಪೊಲೀಸರು ಮಾತ್ರ ಪರಸ್ಪರರ ಮೇಲೆ ಗುಂಡುಹಾರಾಟ ನಡೆಸುತ್ತಿದ್ದಾರೆ ಎಂದು ಸಹ ಹೇಳಿದೆ.

ಏನಿದು ಅಸ್ಸಾಂ-ಮಿಜೋರಾಮ್ ಗಡಿವಿವಾದ ?

ಅಸ್ಸಾಂ-ಮಿಜೋರಾಮ್ ಗಡಿ ವಿವಾದವು ಬ್ರಿಟಿಷರ ಕಾಲದಿಂದಲೂ ನಡೆಯುತ್ತಿದ್ದು ಇದು 100 ವರ್ಷ ಹಳೆಯದಾಗಿದೆ. ಎರಡೂ ರಾಜ್ಯಕ್ಕೆ ನೀಖರವಾದ ಗಡಿ ಇಲ್ಲ, ಇದು ಮುಖ್ಯ ಸಮಸ್ಯೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇದು ಗಡಿ ವಿವಾದವಾಗಿ ಉಳಿಯದೇ ‘ಹಿಂದು-ಮುಸಲ್ಮಾನರ ನಡುವಿನ ವಿವಾದ’ವಾಗಿ ಪರಿಣಮಿಸಿದೆ. ಅಸ್ಸಾಂನ ಗಡಿ ಪ್ರದೇಶದಲ್ಲಿರುವ ಜನರು ಮುಖ್ಯವಾಗಿ ಮುಸಲ್ಮಾನರು ಬಾಂಗ್ಲಾದೇಶೀ ನುಸುಳುಕೋರರಾಗಿದ್ದಾರೆ ಎಂದು ಮಿಜೋರಾಮ್ ಜನರ ಆರೋಪವಿದೆ. ಈ ನುಸುಳುಕೋರರು ಮಿಜೋರಾಮನ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿದ್ದಾರೆ, ಎಂದು ಮಿಜೋರಾಮನ ಗಡಿಯಲ್ಲಿನ ಹಿಂದೂಗಳಲ್ಲಿ ಆತಂಕವಿದೆ.

ಅಸ್ಸಾಂನ ಕಛಾರ, ಕರಿಮಗಂಜ ಹಾಗೂ ಹೈಲಾಕಾಂಡಿ ಈ ಜಿಲ್ಲೆಗಳು ಮಿಜೋರಾಮನ ಆಯಿಜೊಲ, ಕೊಲಾಸಿಬ ಹಾಗೂ ಮಮಿತ ಇವುಗಳ ನಡುವೆ 164 ಕಿಲೋಮೀಟರ ಉದ್ದದ ಗಡಿ ಇದೆ. ಪ್ರದೇಶದ ವಿವಾದದಿಂದ ಆಗಸ್ಟ 2020 ಹಾಗೂ ಫೆಬ್ರವರಿ 2021 ರಲ್ಲಿ ಗಡಿ ಪ್ರದೇಶದ ಜನರಲ್ಲಿ ಹಿಂಸಾಚಾರವು ಭುಗಿಲೆದ್ದಿತು. ಅಸ್ಸಾಂ ಪೊಲೀಸರು ತಮ್ಮ ಭೂಮಿಯನ್ನು ಅತಿಕ್ರಮಿಸಿದವರನ್ನೆಲ್ಲ ಗಡಿಪಾರು ಮಾಡಲು ಅಭಿಯಾನವನ್ನು ನಡೆಸಿದ್ದರು. ಆಗ ಎರಡೂ ರಾಜ್ಯದಲ್ಲಿನ ಗಡಿ ವಿವಾದವು ಮತ್ತೊಮ್ಮೆ ಭುಗಿಲೆದ್ದಿದ್ದು ಜುಲೈ 10 ರಿಂದ ಈ ಪ್ರಕರಣ ಮತ್ತೊಮ್ಮೆ ಕೆರಳಿದೆ.