‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !

(ಟಿಪ್ಪಣೆ : ಎಸ್.ಐ.ಆರ್. (ಸ್ಪೆಷಲ್ ಇನ್ವೆಸ್ಟಿಗೇಷನ್ ರಿವಿಷನ್ – ಮತದಾರರ ಪಟ್ಟಿ ಮರುಪರಿಶೀಲನೆ)

ಬೀಡ – ಪರಳಿಯ ಪೇಠ ಮೊಹಲ್ಲಾದಲ್ಲಿರುವ ಶಾದಿ ಖಾನಾ ಕ್ಯಾಂಪಿನಲ್ಲಿ ಬಿ.ಎಲ್.ಒ. (ಬೂತ್ ಲೆವೆಲ್ ಆಫೀಸರ್ – ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಮರುಪರಿಶೀಲಿಸುವ ಅಧಿಕಾರಿ) ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಮಹಫೂಜ ಜಾಕೀರ ಶೇಖ ರವರಿಗೆ ಮತದಾರರ ಪಟ್ಟಿ ಮರುಪರಿಶೀಲನೆಯ ಸ್ಥಳಕ್ಕೆ (ಕ್ಯಾಂಪ್‌ ಗೆ) ಬಂದು ಶಾಕೀರ ಅಹಮದ ಶೇಖ, ಜುನೇದ ಶೇಖ, ಶೋಯೆಬ ಶೇಖ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾರೆ. ‘ಮತದಾರರ ಪಟ್ಟಿ ಮರುಪರಿಶೀಲನೆಯ ಅರ್ಜಿಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಏಕೆ ಬರುತ್ತಿಲ್ಲ?’ ಎಂಬ ಕಾರಣಕ್ಕಾಗಿ ಅವರು ಈ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪರಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ದೂರನ್ನು ಹಿಂಪಡೆಯದಿದ್ದರೆ, ನಾವು ಹೊರಗೆ ಬಂದು ನಿನಗೆ ತಕ್ಕ ಪಾಠ ಕಲಿಸುತ್ತೇವೆ’, ಎಂದು ಈ ಮತಾಂಧರು ಸಂಬಂಧಪಟ್ಟ ಶಿಕ್ಷಕನಿಗೆ ಬೆದರಿಕೆಯನ್ನೂ ಹಾಕಿದ್ದಾರೆ.

ವರ್ಧಾದಲ್ಲಿ ಎಸ್.ಐ.ಆರ್. ನೊಂದಣಿ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಇಬ್ಬರು ಶಿಕ್ಷಕರು ಮತ್ತು ಒಬ್ಬ ನಾಲ್ಕನೇ ದರ್ಜೆಯ ನೌಕರನನ್ನು ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ಶಿಕ್ಷಕರ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದಲ್ಲಿ ಕೊರೋನಾ ಅವಧಿಯಲ್ಲಿ ತಮಗೆ ಲಭಿಸಿದ ಪ್ರಶಸ್ತಿಗಳನ್ನು ಮರಳಿ ನೀಡುವುದಾಗಿ ‘ಪ್ರಹಾರ ಶಿಕ್ಷಕ ಸಂಘಟನೆ’ಯು ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

  • ಮತಾಂಧರ ಮಾನಸಿಕತೆ ಮತ್ತು ಉದ್ಧಟತನವನ್ನು ತಿಳಿಯಿರಿ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !
  • ಹೀಗಿರುವಾಗ ಯಾವುದೇ ಅಧಿಕಾರಿ ಅಥವಾ ನೌಕರನು ಸರಕಾರಿ ಕೆಲಸಗಳಿಗಾಗಿ ಮುಸಲ್ಮಾನರ ಪ್ರದೇಶಗಳಿಗೆ ಹೋಗುವ ಧೈರ್ಯ ತೋರಿಸುವರೇ ?