ಗುಪ್ತಾರ್ ಘಾಟ್‌ನಲ್ಲಿ ನಡೆದ ಘಟನೆಯಿಂದ ಸಂತ-ಮಹಂತರ ಆಕ್ರೋಶ : ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ದೋಣಿಯಲ್ಲಿ ಕುಳಿತು ಮಾಂಸ ಮತ್ತು ಮದ್ಯದ ಭೋಜನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಂಟ್ ಪೊಲೀಸರು ಲವಕುಶ ನಿಷಾದ್, ರಾಜಕುಮಾರ್ ನಿಷಾದ್ ಮತ್ತು ಜಿತೇಂದ್ರ ನಿಷಾದ್ ಎಂಬ ಮೂವರನ್ನು ಬಂಧಿಸಿದ್ದಾರೆ. ಈ ಭೋಜನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆದ ನಂತರ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳಿಗೆ ಬೇಡಿ ತೊಡಿಸಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಘಟನೆಯಿಂದಾಗಿ ಪವಿತ್ರ ಸರಯೂ ನದಿ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಅಯೋಧ್ಯೆಯ ಸಂತ-ಮಹಂತರು ಮತ್ತು ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗುಪ್ತಾರ್ ಘಾಟ್‌ನಲ್ಲಿ ಪ್ರಭು ಶ್ರೀರಾಮನು ತಮ್ಮ ಅವತಾರವನ್ನು ಮುಕ್ತಾಯಗೊಳಿಸಿದ್ದನು. ಆದ್ದರಿಂದ ಹಿಂದೂಗಳಿಗೆ ಇದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ಸರಯೂ ಮಾತೆಯನ್ನು ಪೂಜಿಸುತ್ತಾರೆ ಮತ್ತು ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ.
ಈ ಹಿಂದೆ ‘ರಾಮ್ ಕಿ ಪೈಡಿ’ಯಲ್ಲೂ ಅಸಭ್ಯ ಘಟನೆ ನಡೆದಿತ್ತು !
ಈ ಹಿಂದೆಯೂ ಒಂದು ಪ್ರಕರಣವು ಭಾರಿ ಚರ್ಚೆಗೆ ಬಂದಿತ್ತು. ಅಯೋಧ್ಯೆಯ ‘ರಾಮ್ ಕಿ ಪೈಡಿ’ ಪ್ರದೇಶದಲ್ಲಿಯೂ ಕಳೆದ ವರ್ಷ ಕೆಲವು ಜೋಡಿಗಳು ಅಶ್ಲೀಲವಾಗಿ ವರ್ತಿಸುತ್ತಾ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದರು. ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು ಮತ್ತು ಇಂತಹ ಕೃತ್ಯಗಳನ್ನು ನಿಷೇಧಿಸುವಂತೆ ಆದೇಶಿಸಿದ್ದರು.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News