ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ 2020ರಲ್ಲಿ ನಕ್ಸಲವಾದಿಗಳ ಆಕ್ರಮಣದಲ್ಲಿ ನಗಣ್ಯ ಕಡಿತ!

ದೇಶದಲ್ಲಿ ಕಳೆದ 6 ದಶಕಗಳಿಂದ ನಡೆಯುತ್ತಿರುವ ನಕ್ಸಲವಾದವು ಇಷ್ಟರಲ್ಲಿ ಕೊನೆಗೊಳ್ಳುವುದು ಅಪೇಕ್ಷಿತವಾಗಿರುವಾಗ ಪ್ರತೀವರ್ಷ ಅದರಲ್ಲಿ ನಗಣ್ಯ ಕಡಿತವೆಂದರೆ ಅದು ಸರ್ವಪಕ್ಷೀಯ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !

ನವ ದೆಹಲಿ – ಕಳೆದ 2 ವರ್ಷಗಳಿಗೆ ಹೋಲಿಸಿದರೆ ವರ್ಷ 2020ರಲ್ಲಿ ನಕ್ಸಲ್‍ವಾದಿಗಳ ಆಕ್ರಮಣದಲ್ಲಿ ಮೃತಪಟ್ಟಿರುವವರ ಸಂಖ್ಯೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಇಳಿತವಾಗಿದೆ. ವರ್ಷ 2020 ರಲ್ಲಿ ನಕ್ಸಲವಾದಿಗಳು 665 ಸಲ, ಹಾಗೂ ವರ್ಷ 2019 ರಲ್ಲಿ 670 ಬಾರಿ ಆಕ್ರಮಣ ನಡೆಸಿದರು. ವರ್ಷ 2020ರಲ್ಲಿ ನಕ್ಸಲವಾದಿಗಳ ಆಕ್ರಮಣದಲ್ಲಿ 183 ಜನರು, ವರ್ಷ 2019 ರಲ್ಲಿ 202 ಹಾಗೂ ವರ್ಷ 2018 ರಲ್ಲಿ 240 ಜನರು ಮೃತಪಟ್ಟಿದ್ದಾರೆ. ಈ ವರ್ಷ ಅಂದರೆ ಜೂನ್ 30, 2021 ರ ತನಕ ನಕ್ಸಲವಾದಿಗಳು 24 ಬಾರಿ ಉದ್ಯೋಗದ (ಉದ್ಯಮ) ಮೇಲೆ ಆಕ್ರಮಣ ನಡೆಸಿದರು ಹಾಗೂ ಛತ್ತೀಸಗಡದಲ್ಲಿನ ಆಕ್ರಮಣದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 22 ಸೈನಿಕರು ಹುತಾತ್ಮರಾದರು. ಆಗ 5 ನಕ್ಸಲವಾದಿಗಳು ಕೊಲ್ಲಲ್ಪಟ್ಟಿದ್ದರು.