
ಜೈಪುರ (ರಾಜಸ್ಥಾನ) – ಜೋಧ್‌ಪುರದ ಉಮ್ಮೇದ್ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ೨೪ ವರ್ಷದ ಮಹಿಳೆಯೊಬ್ಬರಿಗೆ ತಪ್ಪು ಗುಂಪಿನ ರಕ್ತ ನೀಡಿದ್ದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ. ಮಹಿಳೆಯ ಹೆಸರು ಧಾಪೂ ಭೀಲ್ ಎಂದಾಗಿದ್ದು, ಅವರು ಜೋಧ್‌ಪುರ ಜಿಲ್ಲೆಯ ದಾವ್ರಾ ಬಾವಡಿ ಗ್ರಾಮದ ನಿವಾಸಿಯಾಗಿದ್ದಾರೆ. ಈ ಘಟನೆಯ ಮರುದಿನ ಮಹಿಳೆಯ ಆರೋಗ್ಯ ಸ್ಥಿತಿ ಕ್ಷೀಣಿಸಿದ ಕಾರಣ, ಅವರನ್ನು ಜುಲೈ ೧೩ ರಂದು ಮಹಾತ್ಮ ಗಾಂಧಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಯಿತು. ‘ಎಸ್.ಎನ್. ಮೆಡಿಕಲ್ ಕಾಲೇಜ್’ ಪ್ರಾಂಶುಪಾಲರಾದ ಬಿ.ಎಸ್. ಜೋಧಾ ಅವರು ಈ ಬಗ್ಗೆ ಮಾತನಾಡಿ, ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
🚨 Wrong Blood, Life at Risk!
Medical negligence cannot be brushed aside.
In Rajasthan’s Jodhpur, a postpartum woman is battling for her life after allegedly being transfused with B+ blood instead of the required O+ blood. Authorities have ordered an inquiry.
This is not an… pic.twitter.com/gG5KsrS6wF
— Sanatan Prabhat (@SanatanPrabhat) July 18, 2026
೧. ಧಾಪೂ ಭೀಲ್ ಜುಲೈ ೧೧ ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ನಂತರ ರಕ್ತಹೀನತೆ (ಅನಿಮಿಯಾ) ಮತ್ತು ಇತರ ಸಮಸ್ಯೆಗಳಿಂದಾಗಿ ಅವರನ್ನು ಅದೇ ದಿನ ಉಮ್ಮೇದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರಿಗೆ ಅವರ ಮೂಲ ರಕ್ತದ ಗುಂಪಾದ ‘ಒ-ಪಾಸಿಟಿವ್’ ರಕ್ತವನ್ನು ನೀಡಲಾಗಿತ್ತು; ಆದರೆ ಜುಲೈ ೧೨ ರ ರಾತ್ರಿ ಮತ್ತೆ ರಕ್ತ ಏರಿಸುವಾಗ ಅವರಿಗೆ ತಪ್ಪಾಗಿ ‘ಬಿ-ಪಾಸಿಟಿವ್’ ರಕ್ತ ನೀಡಲಾಗಿದೆ.
೨. ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ರಕ್ತ ಏರಿಸಿದ ನಂತರ ಅವರಿಗೆ ತೀವ್ರ ಚಳಿ ಕಾಣಿಸಿಕೊಂಡಿತು. ನಂತರ ಅವರ ಯೂರಿನ್ ಬ್ಯಾಗ್‌ನಲ್ಲಿ ರಕ್ತ ಕಾಣಿಸಿಕೊಂಡಿತು, ಇದು ತಪ್ಪು ರಕ್ತ ನೀಡಿದ್ದರ ಲಕ್ಷಣವಾಗಿತ್ತು. ಅವರ ಆರೋಗ್ಯ ಸ್ಥಿತಿ ವೇಗವಾಗಿ ಕ್ಷೀಣಿಸಿತು, ಇದರಿಂದಾಗಿ ಕಿಡ್ನಿ ವೈಫಲ್ಯ ಉಂಟಾಯಿತು. ‘ಅವರಿಗೆ ಮೂತ್ರ ವಿಸರ್ಜನೆ ನಿಂತುಹೋಯಿತು ಮತ್ತು ರಕ್ತಸ್ರಾವವಾಯಿತು’ ಎಂದು ಅವರು ತಿಳಿಸಿದರು. ನಂತರ ಅವರನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು.
೩. ಮಹಿಳೆಯ ಪತಿ ಕಿಶನಾರಾಮ್ ಅವರು, ಧಾಪು ಅವರನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ಏಕೆ ವರ್ಗಾಯಿಸಲಾಗುತ್ತಿದೆ ಎಂಬುದಕ್ಕೆ ಆಸ್ಪತ್ರೆಯವರು ನಮಗೆ ಕಾರಣ ತಿಳಿಸಿಲ್ಲ ಎಂದು ಆರೋಪಿಸಿದ್ದಾರೆ. ಅವಳಿಗೆ ತಪ್ಪು ರಕ್ತ ನೀಡಲಾದ ಮಾಹಿತಿಯನ್ನೂ ಸಹ ಮುಚ್ಚಿಡಲಾಗಿತ್ತು.
ಎರಡು ಆಸ್ಪತ್ರೆಗಳ ಹೆಸರು ಒಂದೇ ಆಗಿದ್ದರಿಂದ ಗೊಂದಲ. ಆಸ್ಪತ್ರೆಯ ಮೂಲಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ಇಬ್ಬರು ಮಹಿಳೆಯರ ಹೆಸರುಗಳು ಒಂದೇ ಆಗಿದ್ದವು ಮತ್ತು ಅವರ ಪತಿಯರ ಹೆಸರುಗಳೂ ಸಹ ಒಂದೇ ಆಗಿದ್ದವು. ಒಬ್ಬ ಮಹಿಳೆಯ ರಕ್ತದ ಗುಂಪು ಬಿ-ಪಾಸಿಟಿವ್ ಆಗಿತ್ತು, ಇದರಿಂದಾಗಿ ರಕ್ತ ನೀಡುವಾಗ ಸಿಬ್ಬಂದಿಗಳಿಂದ ಈ ಗೊಂದಲ ಉಂಟಾಗಿರಬಹುದು.
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ