ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಯಕರ ಬಂಧನ ಮತ್ತು ಇಂಟರ್ ನೆಟ್ ನಿಷೇಧದ ಕುರಿತು ಪ್ರಶ್ನೆ

ಜಿನೇವಾ (ಸ್ವಿಟ್ಜರ್ ಲ್ಯಾಂಡ್) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯರಿಂದ ನಡೆಯುತ್ತಿರುವ ಪ್ರತಿಭಟನೆಯ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಾರ್ಯಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಅವರು ಈ ಭಾಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಕರೆ ನೀಡಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ಸಾವಿನ ಕುರಿತು ನಿಷ್ಪಕ್ಷಪಾತ, ತ್ವರಿತ ಮತ್ತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇದರೊಂದಿಗೆ ಇಡೀ ಪ್ರದೇಶದಲ್ಲಿ ಇಂಟರ್ ನೆಟ್ ಸೇವೆಯನ್ನು ಯಥಾಸ್ಥಿತಿಗೆ ತರಲು ಕರೆ ನೀಡಿದ್ದಾರೆ.
ಟರ್ಕ್ ಅವರು ಮಾತನಾಡಿ, ಈ ಘಟನೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳೆರಡೂ ಕಡೆಯ ಸಾವಿನ ಘಟನೆಗಳ ಪಾರದರ್ಶಕ ತನಿಖೆಯಾಗಬೇಕು. ಬಂಧನಕ್ಕೊಳಗಾಗಿರುವ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ಯ ನಾಯಕರಿಗೆ ಕಾನೂನು ನೆರವು ಒದಗಿಸಬೇಕು ಮತ್ತು ಅವರ ಕುಟುಂಬದವರನ್ನು ಸಂಪರ್ಕಿಸಲು ಅವಕಾಶ ನೀಡಬೇಕು. ಹಾಗೆಯೇ ಅವರ ನಿಷ್ಪಕ್ಷಪಾತ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಯ ಎಲ್ಲಾ ಹಕ್ಕುಗಳ ಸಂಪೂರ್ಣ ಖಾತರಿಯನ್ನು ನೀಡಬೇಕು. ಈ ಭಾಗದಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಇಂಟರ್ ನೆಟ್ ನಿಷೇಧಿಸಿರುವುದರಿಂದ ಜನರ ಮಾಹಿತಿ ಪಡೆಯುವ, ಅದನ್ನು ಪ್ರಸಾರ ಮಾಡುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸುಸ್ಥಿರ ಶಾಂತಿ ಮತ್ತು ಸ್ಥಿರತೆಯ ಮಾರ್ಗವು ಕೇವಲ ಸಂವಾದ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಮಾತ್ರ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !