ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳಲ್ಲಿ ಸ್ಫೋಟ : Hormuz Oil Tanker Explosion

ಅಮೆರಿಕದಿಂದ ಸತತ ೭ನೇ ರಾತ್ರಿಯೂ ಇರಾನ್ ಮೇಲೆ ದಾಳಿ

ತೆಹರಾನ್ (ಇರಾನ್) – ಹಾರ್ಮುಜ್ ಜಲಸಂಧಿಯಲ್ಲಿದ್ದ ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ ಸಂಭವಿಸಿದ್ದು, ಬೆಂಕಿ ತಗುಲಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ನೀಡಿದ ತಪ್ಪು ಮಾಹಿತಿಯ ಹಿನ್ನೆಲೆಯಲ್ಲಿ, ಈ ನೌಕೆಗಳು ಸಮುದ್ರದಲ್ಲಿ ಸುರಂಗಗಳನ್ನು (ನೌಕಾ ಮೈನ್ಸ್- ಸುರಂಗ ಬಾಂಬ್) ಅಳವಡಿಸಿದ್ದ ಮಾರ್ಗದಲ್ಲಿ ಚಲಿಸಲು ಪ್ರಯತ್ನಿಸಿವೆ. ಈ ಸುರಂಗಗಳಿಗೆ ಡಿಕ್ಕಿ ಹೊಡೆದ ಕಾರಣ ಸ್ಫೋಟ ಸಂಭವಿಸಿ ಬೆಂಕಿ ತಗುಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ‘ಅಮೆರಿಕನ್ ಸೆಂಟ್ರಲ್ ಕಮಾಂಡ್’, ಐ.ಆರ್.ಜಿ.ಸಿ ನೀಡಿದ ಹೇಳಿಕೆ ತಪ್ಪಾಗಿದೆ ಎಂದು ವಾದಿಸಿದೆ. ಜುಲೈ ೧೭ ರ ತಡರಾತ್ರಿ ಅಮೆರಿಕದ ಸೇನೆ ಇರಾನ್ ಮೇಲೆ ಸತತ ೭ನೇ ರಾತ್ರಿಯೂ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇರಾನ್‌ನ ಕಣ್ಗಾವಲು ಕೇಂದ್ರಗಳು, ಭೂಗತ ಶಸ್ತ್ರಾಸ್ತ್ರ ಸಂಗ್ರಹಾಲಯಗಳು ಮತ್ತು ನೌಕಾಪಡೆಯ ಸಾಮರ್ಥ್ಯಗಳನ್ನು ಗುರಿಯಾಗಿಸಲಾಗಿತ್ತು ಎಂದು ಹೇಳಿದೆ.

ಹಾಗಾದರೆ ಇರಾನ್, ಕುವೈತ್ ಮತ್ತು ಬಹ್ರೇನ್ ದೇಶಗಳೊಳಗೆ ನುಗ್ಗಲಿದೆ! – ಇರಾನ್

ಅಮೆರಿಕ, ಇರಾನ್ ಮೇಲೆ ಭೂಮಾರ್ಗವಾಗಿ ದಾಳಿ ನಡೆಸಿದರೆ, ಇರಾನ್, ಕುವೈತ್ ಮತ್ತು ಬಹ್ರೇನ್ ದೇಶಗಳೊಳಗೆ ನುಗ್ಗಿ ಅಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಹಾಗೂ ಸೈನಿಕರನ್ನು ನಾಶಪಡಿಸಲಿದೆ ಎಂದು ಇರಾನ್ ಸಂಸದ ಅಹ್ಮದ್ ಬಕ್ಷಾಯೇಶ್ ಅರ್ದೇಸ್ತಾನಿ ಎಚ್ಚರಿಕೆ ನೀಡಿದ್ದಾರೆ.