ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !

  • ಸಿಂಧುತ್ವವಿರುವ ದಾಖಲೆಗಳಿಲ್ಲದ ಕಾರಣ ಕ್ರಮ

  • ಕಾನೂನಾತ್ಮಕವಾಗಿ ವಾದ ಮಂಡಿಸಲೂ ಅವಕಾಶವಿಲ್ಲ

ನ್ಯೂಯಾರ್ಕ್ (ಅಮೆರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಆಡಳಿತವು ಸಿಂಧುತ್ವವಿರುವ ದಾಖಲೆಗಳಿಲ್ಲದೆ ವಾಸಿಸುತ್ತಿರುವ ೧೮ ಸಹಸ್ರ ಭಾರತೀಯ ನಾಗರಿಕರನ್ನು ಅಮೆರಿಕದಿಂದ ಹೊರಹಾಕುವ ಸಿದ್ಧತೆಗಳನ್ನು ಆರಂಭಿಸಿದೆ. ಸಂಬಂಧಪಟ್ಟವರಿಗೆ ಕಾನೂನಾತ್ಮಕವಾಗಿ ತಮ್ಮ ವಾದವನ್ನು ಮಂಡಿಸುವ ಅವಕಾಶವೂ ಸಿಗುವುದಿಲ್ಲ. ಇಂತಹವರನ್ನು ದೇಶದಿಂದ ಹೊರಗೆ ಕಳುಹಿಸಲು ಪುನಃ ಮಿಲಿಟರಿ ವಿಮಾನಗಳನ್ನು ಬಳಸಲಾಗುವುದು. ದಾಖಲೆಗಳಿಲ್ಲದೆ ವಾಸಿಸುತ್ತಿರುವವರ ಪತ್ತೆಗಾಗಿ ಸರಕಾರಿ ಆಡಳಿತವು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಯಾರ ಬಳಿ ಸಿಂಧುತ್ವವಿರುವ ದಾಖಲೆಗಳಿಲ್ಲವೋ; ಅಂತಹವರನ್ನು ಗಡಿಪಾರು ಮಾಡಲು ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಹೊಸ “ತಾತ್ಕಾಲಿಕ ಬಂಧನ ಕೇಂದ್ರ”ನಿರ್ಮಿಸಲಾಗಿದ್ದು, ಇದಕ್ಕಾಗಿ ಸುಮಾರು ೧೬ ಸಾವಿರ ೫೦೦ ಕೋಟಿ ಭಾರತೀಯ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಸುಮಾರು ೧೨ ಸಾವಿರ ವಲಸಿಗರು ತಂಗಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದ ನ್ಯೂಯಾರ್ಕ್, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಜರ್ಸಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇಂತಹ ಭಾರತೀಯ ನಾಗರಿಕರ ಜೀವನವು ಅಸ್ತವ್ಯಸ್ತಗೊಂಡಿರುವುದು ಬೆಳಕಿಗೆ ಬಂದಿದೆ. ‘ತಾತ್ಕಾಲಿಕ ಬಂಧನ ಕೇಂದ್ರಗಳಲ್ಲಿ’ ಕೆಲವು ವ್ಯಕ್ತಿಗಳೊಂದಿಗೆ ದುರ್ನಡತೆ ನಡೆದಿರುವ ಬಗ್ಗೆಯೂ ದೂರುಗಳು ಬಂದಿವೆ.

೨೦೨೫ ರಲ್ಲಿ ೩ ಸಾವಿರ ೫೬೭ ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು !

ಭಾರತದ ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ೨೦೨೫ ರಲ್ಲಿ ಅಮೆರಿಕದಿಂದ ೩ ಸಾವಿರ ೫೬೭ ಭಾರತೀಯ ನಾಗರಿಕರನ್ನು ಗಡಿಪಾರು ಮಾಡಲಾಗಿತ್ತು. ಜೂನ್ ೨೦೨೬ ರವರೆಗೆ ೧ ಸಾವಿರದ ೭೬ ಭಾರತೀಯ ನಾಗರಿಕರನ್ನು ಭಾರತಕ್ಕೆ ಮರಳಿ ಕಳುಹಿಸಲಾಗಿದೆ. ೫ ಫೆಬ್ರವರಿ ೨೦೨೫ ರಂದು ಅಮೆರಿಕವು ಮೊದಲ ಬಾರಿಗೆ ಮಿಲಿಟರಿ ವಿಮಾನದ ಮೂಲಕ ೧೦೪ ಭಾರತೀಯರನ್ನು ಅಮೃತಸರಕ್ಕೆ ಕಳುಹಿಸಿತ್ತು. ಈ ಸಮಯದಲ್ಲಿ ಅನೇಕ ಜನರಿಗೆ ಕೈಕೋಳ ಮತ್ತು ಕಾಲಿಗೆ ಬೇಡಿಗಳನ್ನು ಹಾಕಲಾಗಿತ್ತು. ಇದರ ಛಾಯಾಚಿತ್ರಗಳು ಮುನ್ನೆಲೆಗೆ ಬಂದ ನಂತರ ದೇಶಾದ್ಯಂತ ವಿವಾದ ಸೃಷ್ಟಿಯಾಗಿತ್ತು. ಸಂಸತ್ತಿನಲ್ಲಿಯೂ ಗದ್ದಲ ನಡೆದಿತ್ತು.

ಸಂಪಾದಕೀಯ ನಿಲುವು

  • ಅಮೆರಿಕಾವು ಬೃಹತ್ ಪ್ರಮಾಣದಲ್ಲಿ ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಸಾವಿರಾರು ಜನರನ್ನು ವಿಮಾನಗಳ ಮೂಲಕ ಅವರ ದೇಶಕ್ಕೆ ಮರಳಿ ಕಳುಹಿಸುತ್ತದೆ, ಆದರೆ ಭಾರತಕ್ಕೆ ಬೆರಳೆಣಿಕೆಯಷ್ಟು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಹೊರಹಾಕಲು ಸಾಧ್ಯವಾಗುತ್ತಿಲ್ಲ !
  • ಭಾರತದಲ್ಲಿ ೫ ಕೋಟಿ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿರುವಾಗ, ಅವರನ್ನು ಹೊರಹಾಕಲು ಈಗ ಭಾರತವು ಅಮೆರಿಕದಿಂದ ಪಾಠ ಕಲಿಯಬೇಕಾಗಿದೆ !