
ವಾಷಿಂಗ್ಟನ್ (ಅಮೆರಿಕ) – ಇರಾನ್ ಕ್ಷಿಪಣಿ ದಾಳಿಯಿಂದ ರಕ್ಷಣೆಗಾಗಿ ಜೋರ್ಡಾನ್‌ನಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಅಮೆರಿಕ, ಜುಲೈ ೧೯ರ ಮುಂಜಾನೆ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ. ಇರಾನ್ ದಾಳಿಯ ನಂತರ ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದು, ನಾಲ್ವರು ಗಾಯಗೊಂಡಿದ್ದರು. ಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
“ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ನೌಕೆಗಳನ್ನು ಮುನ್ನಡೆಸುವ ಇರಾನ್ ಸಾಮರ್ಥ್ಯವನ್ನು ತಗ್ಗಿಸುವುದು ಮತ್ತು ಜೋರ್ಡಾನ್‌ನಲ್ಲಿ ಅಮೆರಿಕದ ಸೈನಿಕರ ಮೇಲೆ ದಾಳಿ ಮಾಡಿದ ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಸೇನೆಗೆ ತಕ್ಷಣ ತಿರುಗೇಟು ನೀಡುವುದು ನಮ್ಮ ಈ ದಾಳಿಯ ಮುಖ್ಯ ಉದ್ದೇಶಗಳಾಗಿವೆ” ಎಂದು ಅಮೆರಿಕ ಸೇನೆ ತಿಳಿಸಿದೆ.
ಸಂಘರ್ಷ ಮತ್ತಷ್ಟು ತೀವ್ರಗೊಳ್ಳಲಿದೆ ! – ಇರಾನ್
ಅಮೆರಿಕದ ಸೇನೆಯು ಇರಾನ್‌ನ ದಕ್ಷಿಣ ಕರಾವಳಿ ನಗರವಾದ ಸಿರಿಕ್ ಹತ್ತಿರದ ಪ್ರದೇಶ ಮತ್ತು ಹಾಜಿ ಅಬಾದ್ ಹತ್ತಿರದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಇರಾನ್ ಮಾಹಿತಿ ನೀಡಿದೆ. ಅಮೆರಿಕದ ದಾಳಿಯ ನಂತರ ಈ ಸಂಘರ್ಷ ಮತ್ತಷ್ಟು ತೀವ್ರಗೊಳ್ಳಲಿದೆ ಮತ್ತು ಅಮೆರಿಕ ಇದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಕಳೆದ ವಾರ ಕದನ ವಿರಾಮ ಕೊನೆಗೊಂಡ ನಂತರ ಎರಡೂ ದೇಶಗಳು ಪರಸ್ಪರರ ಮೇಲೆ ದಾಳಿ ಮುಂದುವರೆಸುತ್ತಿರುವುದರಿಂದ ಈ ಹೇಳಿಕೆ ಬಂದಿದ್ದು, ಇದು ಪ್ರಾದೇಶಿಕವಾಗಿ ದೊಡ್ಡ ಸಂಘರ್ಷದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ನವಾಜ್ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ೩ ತಿಂಗಳು ನಿಷೇಧ !
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion