ಆಮೀರ್ ಖಾನ್‌ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad

ಮುಂಬಯಿ – ನಟ ಆಮೀರ್ ಖಾನ್ ಅವರು ಮೂರನೇ ಮದುವೆಯಾಗಿರುವುದರ ಹಿನ್ನಲೆಯಲ್ಲಿ ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ‘ಆಮೀರ್ ಖಾನ್ ‘ಲವ್ ಜಿಹಾದ್‌’ಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಅವರಿಗೆ ಜೀವ ಬೆದರಿಕೆ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಸಾರ ಮಾಡಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೆನ್ನಲಾದ ಆರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಈ ಬೆದರಿಕೆ ಹಾಕಿದ್ದಾರೆ. ಬೆದರಿಕೆಯ ಜೊತೆಗೆ ಒಂದು ಆಡಿಯೋ ಕೂಡ ಪ್ರಸಾರವಾಗಿದ್ದು, ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಆಮೀರ್ ಖಾನ್ ಅವರಿಗೆ ಎಚ್ಚರಿಕೆ ನೀಡುತ್ತಿರುವುದು ಕೇಳಿಬಂದಿದೆ. ಆಮೀರ್ ಖಾನ್ ಅವರು ಕೆಲವು ದಿನಗಳ ಹಿಂದಷ್ಟೇ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿದ್ದರು. ಇದು ಆಮೀರ್ ಖಾನ್ ಅವರ ಮೂರನೇ ವಿವಾಹವಾಗಿದೆ.

​’ಆಮೀರ್ ಖಾನ್ ಅವರಂತಹ ವ್ಯಕ್ತಿಗಳು ನಮ್ಮ ಸಂಸ್ಕೃತಿಯ ವಿರುದ್ಧ ‘ಲವ್ ಜಿಹಾದ್’ ಅನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾವು ಇದನ್ನು ಸಹಿಸುವುದಿಲ್ಲ. ಶೀಘ್ರದಲ್ಲೇ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಇದು ನಮ್ಮ ಸನಾತನ ಧರ್ಮಕ್ಕೆ ವಿರುದ್ಧವಾಗಿದೆ” ಎಂದು ಎಚ್ಚರಿಕೆ ನೀಡಲಾಗಿದೆ.

‘ಲವ್ ಜಿಹಾದ್’ ಆರೋಪಕ್ಕೆ ಈ ಹಿಂದೆಯೇ ಉತ್ತರಿಸಿದ್ದ ಆಮೀರ್ ಖಾನ್ !

ಗೌರಿ ಸ್ಪ್ರ್ಯಾಟ್ ಅವರನ್ನು ಮದುವೆಯಾದ ನಂತರ ಆಮೀರ್ ಖಾನ್ ಅವರ ಮೇಲೆ ಲವ್ ಜಿಹಾದ್ ಆರೋಪಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಉತ್ತರಿಸಿದ್ದ ಆಮೀರ್ ಖಾನ್, ನನ್ನ ಇಬ್ಬರೂ ಸಹೋದರಿಯರ ವಿವಾಹವು ಹಿಂದೂ ಯುವಕರೊಂದಿಗೆ ನಡೆದಿದೆ. ನನ್ನ ಮಗಳೂ ಸಹ ಹಿಂದೂ ಯುವಕನನ್ನೇ ಮದುವೆಯಾಗಿದ್ದಾಳೆ. ಹಾಗೆಯೇ ನನ್ನ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್ ಮತ್ತು ಗೌರಿ ಸ್ಪ್ರ್ಯಾಟ್ ಇವರಲ್ಲಿ ಯಾರೂ ಕೂಡ ತಮ್ಮ ಧರ್ಮ ಬದಲಾಯಿಸಿಲ್ಲ. ನಮ್ಮ ವಿವಾಹವು ವಿಶೇಷ ವಿವಾಹ ಕಾಯ್ದೆಯ ನಿಯಮಗಳ ಪ್ರಕಾರ ನಡೆದಿದೆ. ಗೌರಿ ಹಿಂದೂ ಅಲ್ಲ, ಬದಲಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ” ಎಂದು ಖಾನ್ ಸ್ಪಷ್ಟಪಡಿಸಿದ್ದರು.