ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!

ಹಿಂದೂ ಯುವತಿಯರೇ, ಮತಾಂಧ ಮುಸ್ಲಿಮರ ಮಾನಸಿಕತೆಯನ್ನು ಈಗಲಾದರೂ ತಿಳಿಯಿರಿ!

ಮುಂಬಯಿ – ಅಮೀರ್ ಖಾನ್ ಅವರ ಮಲ ಸಹೋದರ ಹೈದರ್ ಅಲಿ ಖಾನ್ ತನ್ನ ಮಾಜಿ ಪತ್ನಿ ಮತ್ತು ನಟಿ ಇವಾ ಗ್ರೋವರ್‌ಗೆ ದೈಹಿಕ ಕಿರುಕುಳ ನೀಡಿದ್ದಾನೆ. ಲೈಂಗಿಕ ಸಂಬಂಧದ ವೇಳೆ ಆತ ಆಕೆಗೆ ಥಳಿಸುತ್ತಿದ್ದನು. ಆಕೆಯ ಇಡೀ ದೇಹದ ಮೇಲೆ ಗಾಯದ ಕಲೆಗಳು ಮೂಡಿದ್ದವು. ಕೇವಲ ೧೮ ದಿನಗಳ ಪರಿಚಯದ ನಂತರ, ತಾಯಿಯ ವಿರೋಧವಿದ್ದರೂ ಹೈದರ್ ಅಲಿ ಖಾನ್ ಹೇಳಿದ್ದಕ್ಕಾಗಿ ಆಕೆ ಆತನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಅಂತರ್ಧರ್ಮೀಯ ವಿವಾಹದ ಕಾರಣದಿಂದಾಗಿ ಆಕೆಯ ತಾಯಿ ಆಕೆಯೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದರು. ಖಾನ್‌ಗೆ ‘ಸ್ಕಿಜೋಫ್ರೇನಿಯಾ’ (ಒಂದು ರೀತಿಯ ಮಾನಸಿಕ ಕಾಯಿಲೆ) ತೊಂದರೆ ಇತ್ತು. ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಂಬಂಧ ಇಟ್ಟುಕೊಳ್ಳುವಂತೆ ಖಾನ್ ಆಕೆಯ ಮೇಲೆ ಒತ್ತಡ ಹೇರಿದ್ದನು. ೫ ವರ್ಷಗಳ ನಂತರ ಆಕೆ ಆತನಿಂದ ವಿಚ್ಛೇದನ ಪಡೆದಳು. ೧೦ ವರ್ಷಗಳ ಕಾಲ ಆಕೆ ತನ್ನ ಮಗಳನ್ನು ನೋಡಿಯೂ ಇರಲಿಲ್ಲ.