ಗಾಂಜಾ ಸೇವನೆ ಮಾಡಿದ ಆರೋಪ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಮಹಮ್ಮದ್ ನವಾಜ್ ಮೇಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ೩ ತಿಂಗಳ ನಿಷೇಧ ಹೇರಿದೆ. ಅವನ ತಪಾಸಣೆಯ ವರದಿಯಲ್ಲಿ ಗಾಂಜಾಕ್ಕೆ ಸಂಬಂಧಿಸಿದ ನಿಷೇಧಿತ ಅಂಶ ಪತ್ತೆಯಾಗಿದೆ.
೧. ಮಂಡಳಿಯ ಮಾಹಿತಿಯ ಪ್ರಕಾರ ೨೦೨೬ ರಲ್ಲಿ ನಡೆದ ‘ಟಿ-೨೦ ವಿಶ್ವಕಪ್ ಪಂದ್ಯಾವಳಿಯ’ ಅವಧಿಯಲ್ಲಿ ಪಾಕಿಸ್ತಾನ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಪಂದ್ಯದ ನಂತರ ಮಹಮ್ಮದ್ ನವಾಜ್ ಅವನ ಮಾದರಿಯನ್ನು ತಪಾಸಣೆಗಾಗಿ ಪಡೆಯಲಾಗಿತ್ತು. ಅದರಲ್ಲಿ ಅವನ ಶರೀರದಲ್ಲಿ ಗಾಂಜಾದ ಅಂಶ ಪತ್ತೆಯಾಯಿತು. ಈ ಪದಾರ್ಥವು ಮಾದಕ ಪದಾರ್ಥಗಳ ಸೇವನೆಯ ಶ್ರೇಣಿಯಲ್ಲಿ ಬರುತ್ತದೆ.
೨. ಈ ಕುರಿತು ಮಂಡಳಿಯು ಸ್ಪಷ್ಟಪಡಿಸಿದ್ದು, ತನಿಖೆಯ ವೇಳೆಯಲ್ಲಿ ನವಾಜ್ ತಾನು ಗಾಂಜಾವನ್ನು ಪಂದ್ಯದಲ್ಲಿನ ಪ್ರದರ್ಶನವನ್ನು ಸುಧಾರಿಸಲು ಸೇವಿಸಿರಲಿಲ್ಲ, ಬದಲಿಗೆ ಪಂದ್ಯಾವಳಿಯ ಸಮಯದ ಹೊರತಾಗಿ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಅವನ ಮೇಲಿನ ಆಟದಲ್ಲಿ ಪ್ರದರ್ಶನವನ್ನು ಹೆಚ್ಚಿಸುವ ಮಾದಕ ಪದಾರ್ಥವನ್ನು ಸೇವಿಸಿದ ಅಪರಾಧವು ಸಾಬೀತಾಗಲಿಲ್ಲ ಮತ್ತು ಇದೇ ಕಾರಣದಿಂದಾಗಿ ನವಾಜ್ ಗೆ ಕಡಿಮೆ ಶಿಕ್ಷೆಯಾಗಿದೆ. ಮಂಡಳಿಯು ನವಾಜ್ ಮೇಲೆ ೩ ತಿಂಗಳ ನಿಷೇಧ ಹೇರಿತು; ಆದರೆ ಈ ಶಿಕ್ಷೆಯು ೧ ಮೇ ೨೦೨೬ ರಿಂದಲೇ ಅನ್ವಯವಾಗಿದೆ; ಏಕೆಂದರೆ ಅದೇ ದಿನದಿಂದ ಅವನು ಸ್ವತಃ ತಾತ್ಕಾಲಿಕ ಅಮಾನತನ್ನು ಸ್ವೀಕರಿಸಿದ್ದನು. ನವಾಜ್ ವ್ಯಸನಮುಕ್ತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲೂ ಒಪ್ಪಿಗೆ ಸೂಚಿಸಿದ್ದಾನೆ. ಸುಮಾರು ಎರಡೂವರೆ ತಿಂಗಳ ಅವಧಿ ಪೂರ್ಣಗೊಂಡ ನಂತರ ನವಾಜ್ ಮೇಲಿನ ತಾತ್ಕಾಲಿಕ ಅಮಾನತನ್ನು ತೆರವುಗೊಳಿಸಲಾಗಿದೆ.
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !