
ಉಧಮ್‌ಸಿಂಗ್ ನಗರ (ಉತ್ತರಾಖಂಡ) – ಇಲ್ಲಿನ ಖತಿಮಾ ಪ್ರದೇಶದ ಕುಟರಿ ಗ್ರಾಮದಲ್ಲಿ ಥಾರೂ ಸಮುದಾಯದ ಜನರು ಸನಾತನ ಧರ್ಮಕ್ಕೆ ಮರಳುವ ಪ್ರಕ್ರಿಯೆ ಮುಂದುವರಿದಿದೆ. ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದ ಥಾರೂ ಸಮುದಾಯದ ೩೬ ಕುಟುಂಬಗಳ ೧೦೬ ಜನರು ವೈದಿಕ ಸಂಪ್ರದಾಯದಂತೆ ತಮ್ಮ ಸ್ವಇಚ್ಛೆಯಿಂದ ಸನಾತನ ಧರ್ಮಕ್ಕೆ ಪುನರ್ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ ಇದೇ ಗ್ರಾಮದ ೭೦ ಜನರು ಮರಳಿ ಸ್ವಧರ್ಮ ಸ್ವೀಕರಿಸಿದ್ದರು. ಗ್ರಾಮ ಪ್ರಧಾನರಾದ ದೀಪಾ ದೇವಿ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪಂಡಿತ್ ಹರೀಶ್ ಜೋಶಿ ಮತ್ತು ಸಾಧು ಮೋಹನ್ ಗಿರಿ ಅವರು ವೈದಿಕ ಮಂತ್ರ ಘೋಷಗಳೊಂದಿಗೆ ಶುದ್ಧೀಕರಣ ಹವನ ಮತ್ತು ಯಜ್ಞ ನೆರವೇರಿಸಿದರು.
೧೦-೧೨ ವರ್ಷಗಳ ಹಿಂದೆ ನಡೆದಿತ್ತು ಮತಾಂತರ
ಸ್ಥಳೀಯ ಜನರ ಪ್ರಕಾರ, ೧೦ ರಿಂದ ೧೨ ವರ್ಷಗಳ ಹಿಂದೆ ಗ್ರಾಮದ ಹಲವು ಥಾರೂ ಕುಟುಂಬಗಳಿಗೆ ಆಮಿಷ ಒಡ್ಡಿ ಅಥವಾ ವಂಚಿಸಿ ಮತಾಂತರ ಮಾಡಲಾಗಿತ್ತು. ಇದರ ನಂತರ ಅವರು ನಿಯಮಿತವಾಗಿ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು, ಕ್ರಿಶ್ಚಿಯನ್ ಪುಸ್ತಕಗಳನ್ನು ಓದಲು ಮತ್ತು ಕೊರಳಿನಲ್ಲಿ ಕ್ರಾಸ್ (ಶಿಲುಬೆ) ಧರಿಸತೊಡಗಿದ್ದರು. ಅಲ್ಲದೆ ಅವರು ಹಿಂದೂ ದೇವತೆಗಳ ಪೂಜೆ ಮಾಡುವುದು, ತಿಲಕ, ಚಂದನ ಇಟ್ಟುಕೊಳ್ಳುವುದು ಮತ್ತು ಪ್ರಸಾದ ಸ್ವೀಕರಿಸುವುದನ್ನು ಸಹ ನಿಲ್ಲಿಸಿದ್ದರು. ಈಗ ಈ ಜನರು ಸ್ವತಃ ಮುಂದೆ ಬಂದು ಸನಾತನ ಧರ್ಮಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾರದೇ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಳ್ಳದಂತೆ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯ ಜೊತೆಯಾಗಿ ಉಳಿಯುವಂತೆ ಪರಿಸರದ ಇತರ ಜನರಿಗೂ ಅವರು ಕರೆ ನೀಡಿದ್ದಾರೆ.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !