ಕಾಸಗಂಜ್ (ಉತ್ತರ ಪ್ರದೇಶ) ದಲ್ಲಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸಿದ ೬ ಕ್ರೈಸ್ತರ ಬಂಧನ

ಮತಾಂತರವನ್ನು ವಿರೋಧಿಸುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ಹಲ್ಲೆಯ ಪ್ರಯತ್ನ

ಹಾಡುಹಗಲೇ ಅದೂ ಕೂಡ ಹಿಂದೂಗಳ ಪ್ರದೇಶಕ್ಕೆ ಬಂದು ಹಿಂದೂಗಳನ್ನು ಮತಾಂತರಿಸಲು ಕ್ರೈಸ್ತರು ಧೈರ್ಯ ಮಾಡುತ್ತಾರೆ, ಅದೇ ರೀತಿ ವಿರೋಧಿಸಿದಾಗ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನವೂ ಆಗುತ್ತದೆ, ಇದು ಗಂಭೀರ ಘಟನೆಯಾಗಿದ್ದು. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ಮತಾಂಧ ಕ್ರೈಸ್ತರ ಬುಡ ಸಹಿತ ಕಿತ್ತು ಎಲ್ಲರನ್ನು ಸೆರೆಮನೆಗೆ ಅಟ್ಟಬೇಕು; ಅದೇ ರೀತಿ ಅವರಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು !

ಕಾಸಗಂಜ್ (ಉತ್ತರ ಪ್ರದೇಶ) – ಕಾಸಗಂಜ್ ಜಿಲ್ಲೆಯ ಗಂಗಪುರದ ಹಿಂದೂ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿರುವವರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ದೂರು ನೀಡಿದ ನಂತರ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ೬ ಜನರು ಇಲ್ಲಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಅವರಿಂದ ಆಕ್ಷೇಪಾರ್ಹ ಸಾಹಿತ್ಯವನ್ನೂ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಶ್ರೀನಿವಾಸ, ರಾಹುಲ ಕುಮಾರ, ಶಿವಕುಮಾರ, ದುರ್ಗೇಶ್, ರಾಮಪಾಲ ಮತ್ತು ಕಿಶನ್ ಎಂದು ಗುರುತಿಸಲಾಗಿದೆ. (ಹಿಂದೂ ಹೆಸರುಗಳನ್ನು ಹೊಂದಿರುವ ಕ್ರೈಸ್ತರು ! ಹಿಂದೂಗಳನ್ನು ಮತಾಂತರಿಸಲು ಸುಲಭವಾಗಬೇಕೆಂದು, ಈ ಕ್ರೈಸ್ತರು ತಮ್ಮ ಹೆಸರುಗಳನ್ನು ಬದಲಾಯಿಸುವುದಿಲ್ಲ. ಇಂತಹವರಿಂದ ಹಿಂದೂಗಳು ಜಾಗರೂಕತೆಯಿಂದ ಇರಬೇಕು ! – ಸಂಪಾದಕರು)

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಈ ಕ್ರೈಸ್ತರನ್ನು ವಿರೋಧಿಸುವಾಗ, ಅವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು. (ಮತಾಂಧ ಕ್ರೈಸ್ತರಿಗೆ ಕಾನೂನಿನ ಭಯವಿಲ್ಲ ಎಂದು ಇದು ತೋರಿಸುತ್ತದೆ ! – ಸಂಪಾದಕರು) ಆಗ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಪೊಲೀಸರು ಈ ೬ ಜನರ ವಿಚಾರಣೆ ಮಾಡಿದಾಗ ಅವರ ಬಳಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾದವು. ಅದರಲ್ಲಿ ಹಿಂದೂಗಳ ದೇವತೆಗಳ ಬಗ್ಗೆ ಅಶ್ಲೀಲ ಬರಹಗಳಿದ್ದವು.