ಬಿಹಾರದ ಶಾಲೆಗಳಲ್ಲಿ ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ರಜೆಗೆ ಕತ್ತರಿ !

ಬಿಹಾರ ಸರಕಾರ ಇತರೆ ಧರ್ಮಗಳ ರಜಾದಿನಗಳನ್ನು ಏಕೆ ರದ್ದುಗೊಳಿಸಿಲ್ಲ ? ಇದರಿಂದ ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಇವರ ಯುತಿ ಸರಕಾರ ಮುಸ್ಲಿಮರು ಮತ್ತು ಕ್ರೈಸ್ತರನ್ನು ನೋಯಿಸುವುದನ್ನು ತಪ್ಪಿಸಿ, ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !

ಆಸ್ಸಾಂನಲ್ಲಿ ಬಹುಪತ್ನಿತ್ವದ ಮೇಲೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಸರಮಾ !

ಆಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚಿನ ವಿವಾಹಗಳ ಮೇಲೆ ನಿರ್ಬಂಧ ಹೇರುವ ಕಾನೂನು ತರಲು ಆಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾರವರು ಸಿದ್ಧತೆ ನಡೆಸಿದ್ದಾರೆ. ಈ ದೃಷ್ಟಿಯಿಂದ ಜನತೆಯಿಂದ ಈ ಪ್ರಸ್ತಾಪಿತ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವಾಗತಿಸಲಾಗಿದೆ.

ಬಿಹಾರ ಸರಕಾರವು ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನ ಉದ್ಯಾನವನದ ಹೆಸರನ್ನು ಬದಲಾಯಿಸಿದ್ದರಿಂದ ವಿವಾದ !

ಕಂಕಡಬಾಗ್ ನಲ್ಲಿರುವ ‘ಅಟಲ್ ಬಿಹಾರಿ ವಾಜಪೇಯಿ ಪಾರ್ಕ್’ನ ಹೆಸರನ್ನು ಬದಲಾಯಿಸಿ ‘ಕೊಕೊನಟ್ ಪಾರ್ಕ’ ಎಂದು ಇಡಲಾಗಿದೆ. ಇಷ್ಟೇ ಅಲ್ಲ, ಇದನ್ನು ಬಿಹಾರದ ಪರಿಸರ ಸಚಿವ ತೇಜ್ ಪ್ರತಾಪ ಯಾದವ್ ಅವರು ಹೊಸದಾಗಿ ಉದ್ಘಾಟಿಸಿದ್ದಾರೆ.

ಲಡಾಖ್ ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬಹಿರಂಗ!

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಂಜೂರ್ ಅಹ್ಮದ್ ಹೆಸರಿನ ಮುಸಲ್ಮಾನ ಯುವಕ ಓರ್ವ ಬೌದ್ಧ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹಿಂದುಗಳ ವಿರೋಧದ ಬಳಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡುವ ಅನುದಾನಕ್ಕೆ ತಡೆ ಆಜ್ಞೆ ನೀಡಿರುವ ಆದೇಶವನ್ನು ಹಿಂಪಡೆದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ !

ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು.

ಈ ವರ್ಷ ಸ್ವಾತಂತ್ರ್ಯ ದಿನದಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಶುಭಾಶಯ ಕೋರಲಿಲ್ಲ !

ಭಾರತ ಮತ್ತು ಪಾಕಿಸ್ತಾನ ಈ ವರ್ಷ ಸ್ವಾತಂತ್ರ್ಯ ದಿನದಂದು ಪರಸ್ಪರ ಶುಭಾಶಯ ಕೋರಲಿಲ್ಲ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ. ಆಗಸ್ಟ್ 14 ರಂದು ಪಾಕಿಸ್ತಾನದ ಮತ್ತು ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು.

ಅವಿಶ್ವಾಸ ಪ್ರಸ್ತಾವಕ್ಕೆ ಮತದಾನವಾಗಿದ್ದರೆ, ಅಹಂಕಾರಿ ಮೈತ್ರಿ ಪಕ್ಷಗಳ ಬಣ್ಣ ಬಯಲಾಗುತ್ತಿತ್ತು ! – ಪ್ರಧಾನಿ ನರೇಂದ್ರ ಮೋದಿ

ಬಂಗಾಳದ ಹಾವಡಾದಲ್ಲಿ ಭಾಜಪವು ಪಂಚಾಯತ್ ರಾಜ್ ಪರಿಷತ್ ಅನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆನ್‌ಲೈನ್’ ಮೂಲಕ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದರು, ಪ್ರಧಾನಿ ಮೋದಿಯವರು, ಪ್ರತಿಪಕ್ಷಗಳು ಮಣಿಪುರದ ಜನತೆಗೆ ದ್ರೋಹ ಬಗೆದಿವೆ.

ಮೊರಾದಾಬಾದ್ (ಉತ್ತರ ಪ್ರದೇಶ)ದಲ್ಲಿ ಭಾಜಪ ನಾಯಕ ಅನುಜ್ ಚೌಧರಿಯವರ ಗುಂಡಿಕ್ಕಿ ಕೊಲೆ !

ಭಾಜಪ ನಾಯಕ ಅನುಜ್ ಚೌಧರಿ (35 ವರ್ಷಗಳು) ಅವರನ್ನು ಆಗಸ್ಟ್ 10, 2023 ರಂದು ಇಲ್ಲಿನ ಪಾರ್ಶ್ವನಾಥ್ ಪ್ರತಿಭಾ ಸೊಸೈಟಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಯಿತು. ಅವರ ಭದ್ರತೆಗೆ ಸಂಭಳ ಪೊಲೀಸರು ಓರ್ವ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದರು.

ಸರಕಾರದ ನೀತಿಯಿಂದ ೯ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯಾಗಿದೆ ! – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನಮ್ಮ ಸರಕಾರದ ನೀತಿಯಿಂದ ೯ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆ ಸುಧಾರಿಸಿದೆ ಮತ್ತು ಆರ್ಥಿಕ ಅಭಿವೃದ್ಧಿಯಾಗಿದೆ. ಇಂದು ನಾವು ಜಗತ್ತಿನಲ್ಲಿ ಎಲ್ಲಕ್ಕಿಂತ ವೇಗವಾಗಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುತ್ತಿದ್ದೇವೆ, ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವದ ಕುರಿತಾದ ಚರ್ಚೆಯ ಸಮಯದಲ್ಲಿ ಹೇಳಿದರು.

ಕೇವಲ ಮಣಿಪುರ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ! – ಸಂಸದ ಚಿರಾಗ್ ಪಾಸ್ವಾನ್

ಬೇಧಭಾವದಿಂದ ಚರ್ಚಿಸುವುದು ಸಂಪೂರ್ಣ ಅಯೋಗ್ಯವಾಗಿದೆ ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.