ಈ ವರ್ಷ ಸ್ವಾತಂತ್ರ್ಯ ದಿನದಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಶುಭಾಶಯ ಕೋರಲಿಲ್ಲ !

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಮತ್ತು ಪಾಕಿಸ್ತಾನ ಈ ವರ್ಷ ಸ್ವಾತಂತ್ರ್ಯ ದಿನದಂದು ಪರಸ್ಪರ ಶುಭಾಶಯ ಕೋರಲಿಲ್ಲ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ. ಆಗಸ್ಟ್ 14 ರಂದು ಪಾಕಿಸ್ತಾನದ ಮತ್ತು ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು. ಪಾಕಿಸ್ತಾನದ ದಿನಪತ್ರಿಕೆ “ದಿ ನ್ಯೂಸ್” ಈ ಸಂಬಂಧ ಪ್ರಕಟಿಸಿದ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಿದೆ. ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರು ಸ್ವಾತಂತ್ರ್ಯದಿನದಂದು ಪರಸ್ಪರ ಶುಭಾಶಯ ಕೋರುವ ಸಂಪ್ರದಾಯವನ್ನು ಕೊನೆಗೊಳಿಸಿದ್ದಾರೆ. ಇದರಿಂದ ಈ ಎರಡೂ ದೇಶಗಳ ನಡುವಿನ ಸಂಬಂಧ ಎಷ್ಟು ಹದಗೆಟ್ಟಿದೆ ಎಂಬುದು ಗಮನಕ್ಕೆ ಬರುತ್ತದೆ.

ಪಾಕಿಸ್ತಾನಿ ವಾರ್ತವಾಹಿನಿ ‘ಜಿಯೋ ನ್ಯೂಸ್’ ತನ್ನ ಸುದ್ದಿಯಲ್ಲಿ, ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಲು ಭಾರತದ ನಾಯಕತ್ವದ ಆಕ್ರಮಣಶೀಲತೆಯೇ ಕಾರಣ ಎಂದು ಹೇಳಿದೆ. (ಇದನ್ನೇ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ ಎಂದು ಹೇಳುತ್ತಾರೆ ! ಕಳೆದ 75 ವರ್ಷಗಳಲ್ಲಿ ಏನು ಮಾಡಬೇಕಾಗಿತ್ತು ಅದನ್ನು ಭಾರತ ಈಗ ಮಾಡಲು ಪ್ರಾರಂಭಿಸಿದ್ದರಿಂದ ಈಗ ಪಾಕಿಸ್ತಾನಕ್ಕೆ ಬಿಸಿ ತಟ್ಟಿದೆ ! – ಸಂಪಾದಕರು) ಭಾರತದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗಿನಿಂದ ಮತ್ತು ಪ್ರಧಾನಮಂತ್ರಿ ಮೋದಿಯವರು ಅಧಿಕಾರ ಸ್ವೀಕರಿಸಿದ್ದರಿಂದ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. (ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸಿದರೆ, ಅದು ಹಾಗೆ ವರ್ತಿಸುವುದೂ ಆವಶ್ಯಕವಾಗಿದೆ. ಪಾಕಿಸ್ತಾನವು ಭಾರತದೊಂದಿಗೆ ಹೇಗೆ ವರ್ತಿಸುತ್ತದೆ ಎಂದು ಸಂಪೂರ್ಣ ಜಗತ್ತಿಗೆ ತಿಳಿದಿದೆ ! – ಸಂಪಾದಕರು) ನವೆಂಬರ್ 2016 ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ ನಿರಾಕರಿಸಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನವು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಭಾರತವು ಅದನ್ನು ಸಹಿಸಿಕೊಂಡು ಪಾಕಿಸ್ತಾನಕ್ಕೆ ಅದರ ಸ್ವಾತಂತ್ರ್ಯ ದಿನಾಚರಣೆಯಂದು ಶುಭ ಹಾರೈಸುತ್ತಿತ್ತು. ಈಗ ಆ ಕಾಲ ಮುಗಿದಿದೆ ಎಂದು ಭಾರತ ತೋರಿಸುತ್ತಿದೆ ! ಒಂದು ವೇಳೆ ಪಾಕಿಸ್ತಾನಕ್ಕೆ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಇಡುವುದಿದ್ದರೆ, ಅದು ಆ ರೀತಿ ವರ್ತಿಸುವುದು ಆವಶ್ಯಕವಾಗಿದೆ !