ಮೊರಾದಾಬಾದ್ (ಉತ್ತರ ಪ್ರದೇಶ)ದಲ್ಲಿ ಭಾಜಪ ನಾಯಕ ಅನುಜ್ ಚೌಧರಿಯವರ ಗುಂಡಿಕ್ಕಿ ಕೊಲೆ !

ಭಾಜಪ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಭಾಜಪ ನಾಯಕ ಅನುಜ್ ಚೌಧರಿ

ಮೊರಾದಾಬಾದ್ (ಉತ್ತರ ಪ್ರದೇಶ) – ಭಾಜಪ ನಾಯಕ ಅನುಜ್ ಚೌಧರಿ (35 ವರ್ಷಗಳು) ಅವರನ್ನು ಆಗಸ್ಟ್ 10, 2023 ರಂದು ಇಲ್ಲಿನ ಪಾರ್ಶ್ವನಾಥ್ ಪ್ರತಿಭಾ ಸೊಸೈಟಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಯಿತು. ಅವರ ಭದ್ರತೆಗೆ ಸಂಭಳ ಪೊಲೀಸರು ಓರ್ವ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದರು. ಹಾಗೆಯೇ ಅನುಜ್ ಚೌಧರಿ ಅವರು 2 ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ಇಟ್ಟುಕೊಂಡಿದ್ದರು. ಎಂದಿನಂತೆ ಅನುಜ್ ಚೌಧರಿ ತಮ್ಮ ಸ್ನೇಹಿತರೊಂದಿಗೆ ಸೊಸೈಟಿಯಲ್ಲಿ ಓಡಾಡುತ್ತಿದ್ದರು. ಅವರು ಗೇಟ್ ಬಳಿ ಬಂದಾಗ ಎದುರಿನಿಂದ ಬೈಕ್ ನಲ್ಲಿ ಬಂದ ಮೂವರು ಗೂಂಡಾಗಳು ಚೌಧರಿ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ತಲೆ, ಬೆನ್ನು ಮತ್ತು ಭುಜಕ್ಕೆ ಗುಂಡು ತಗುಲಿ ಅನುಜ್ ಚೌಧರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರು ಅನುಜ್ ಚೌಧರಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು; ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದರು. ಪೊಲೀಸ್ ಅಧೀಕ್ಷಕ ಅಖಿಲೇಶ್ ಬದೌರಿಯಾ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.