ಕೇವಲ ಮಣಿಪುರ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ! – ಸಂಸದ ಚಿರಾಗ್ ಪಾಸ್ವಾನ್

ಸಂಸದ ಚಿರಾಗ್ ಪಾಸ್ವಾನ್

ನವ ದೆಹಲಿ – ಎಲ್ಲಾ ರಾಜ್ಯಗಳಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು. ಮಣಿಪುರದಲ್ಲಿ ಭಾಜಪ ಅಧಿಕಾರದಲ್ಲಿ ಇರುವುದರಿಂದ ಆ ರಾಜ್ಯದಲ್ಲಿನ ಹಿಂಸಾಚಾರದ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ ರಾಜಸ್ಥಾನ, ಬಂಗಾಳ, ಕರ್ನಾಟಕ ರಾಜ್ಯಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಚರ್ಚಿಸುವುದು ಅವಶ್ಯಕವಾಗಿದೆ. ಈ ರೀತಿ ಬೇಧಭಾವದಿಂದ ಚರ್ಚಿಸುವುದು ಸಂಪೂರ್ಣ ಅಯೋಗ್ಯವಾಗಿದೆ ಎಂದು ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.