ಅವಿಶ್ವಾಸ ಪ್ರಸ್ತಾವಕ್ಕೆ ಮತದಾನವಾಗಿದ್ದರೆ, ಅಹಂಕಾರಿ ಮೈತ್ರಿ ಪಕ್ಷಗಳ ಬಣ್ಣ ಬಯಲಾಗುತ್ತಿತ್ತು ! – ಪ್ರಧಾನಿ ನರೇಂದ್ರ ಮೋದಿ

ಬಂಗಾಳದಲ್ಲಿ ಭಾಜಪದ ಪಂಚಾಯತ್ ರಾಜ್ ಪರಿಷತ್ !

ನವ ದೆಹಲಿ – ಬಂಗಾಳದ ಹಾವಡಾದಲ್ಲಿ ಭಾಜಪವು ಪಂಚಾಯತ್ ರಾಜ್ ಪರಿಷತ್ ಅನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆನ್‌ಲೈನ್’ ಮೂಲಕ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದರು, ಪ್ರಧಾನಿ ಮೋದಿಯವರು, ಪ್ರತಿಪಕ್ಷಗಳು ಮಣಿಪುರದ ಜನತೆಗೆ ದ್ರೋಹ ಬಗೆದಿವೆ. ಪ್ರತಿಪಕ್ಷಗಳು ಅವಿಶ್ವಾಸ ಪ್ರಸ್ತಾವಕ್ಕೆ ಮತದಾನ ಮಾಡುವ ಮೊದಲೇ ಸದನದಿಂದ ಪಲಾಯನ ಮಾಡಿದವು. ಅವಿಶ್ವಾಸ ಪ್ರಸ್ತಾವಕ್ಕೆ ಮತದಾನ ನಡೆದಿದ್ದರೆ, ಮೈತ್ರಿ ಪಕ್ಷಗಳ ದುರಹಂಕಾರ ಬಯಲಾಗುತ್ತಿತ್ತು ಎಂದು ಹೇಳಿದರು.

ಪ್ರಧಾನಮಂತ್ರಿ ಮಾತನ್ನು ಮುಂದುವರಿಸಿ, ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ನ ರಕ್ತಪಾತವನ್ನು ಇಡೀ ದೇಶ ನೋಡಿದೆ. ಚುನಾವಣೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಮೋದಿ ಟೀಕಿಸಿದ್ದರು. ‘ತೃಣಮೂಲ ಕಾಂಗ್ರೆಸ್ ಭಾಜಪ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿದೆ ಮತ್ತು ಹಲವೆಡೆ ಮತಗಟ್ಟೆಗಳನ್ನು ವಶಪಡಿಸಿಕೊಂಡಿದೆ’, ಎಂದು ಆರೋಪಿಸಿದರು. ಹಾಗೂ ‘ನಮ್ಮ ಕಾರ್ಯಕರ್ತರು ಬಂಗಾಳದ ಕೀರ್ತಿಯನ್ನು ಮರಳಿ ತರುತ್ತಾರೆ’ ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.