ಬಿಹಾರ ಸರಕಾರವು ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನ ಉದ್ಯಾನವನದ ಹೆಸರನ್ನು ಬದಲಾಯಿಸಿದ್ದರಿಂದ ವಿವಾದ !

ಪಾಟಲೀಪುತ್ರ (ಬಿಹಾರ) – ಇಲ್ಲಿಯ ಕಂಕಡಬಾಗ್ ನಲ್ಲಿರುವ ‘ಅಟಲ್ ಬಿಹಾರಿ ವಾಜಪೇಯಿ ಪಾರ್ಕ್’ನ ಹೆಸರನ್ನು ಬದಲಾಯಿಸಿ ‘ಕೊಕೊನಟ್ ಪಾರ್ಕ’ ಎಂದು ಇಡಲಾಗಿದೆ. ಇಷ್ಟೇ ಅಲ್ಲ, ಇದನ್ನು ಬಿಹಾರದ ಪರಿಸರ ಸಚಿವ ತೇಜ್ ಪ್ರತಾಪ ಯಾದವ್ ಅವರು ಹೊಸದಾಗಿ ಉದ್ಘಾಟಿಸಿದ್ದಾರೆ. ಒಂದೆಡೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ಗೌರವಾನ್ವಿತ ಅಟಲ್ ಜೀ’ ಎಂದು ಸಂಬೋಧಿಸುತ್ತಾರೆ. ಮತ್ತೊಂದೆಡೆ ಈ ರೀತಿ ಅವರ ಹೆಸರಿನ ಉದ್ಯಾನವನದ ಹೆಸರನ್ನು ಬದಲಾಯಿಸುತ್ತಾರೆ, ಎಂದು ಭಾಜಪ ಆಕ್ರೋಶ ವ್ಯಕ್ತಪಡಿಸಿದೆ. ಆಗಸ್ಟ್ 2018 ರಲ್ಲಿ ವಾಜಪೇಯಿ ಅವರ ನಿಧನದ ಬಳಿಕ ಜನತೆ ಸ್ವಯಂಪ್ರೇರಿತವಾಗಿ ಈ ಉದ್ಯಾನವನಕ್ಕೆ ಅವರ ಹೆಸರನ್ನು ಇಟ್ಟಿದ್ದರು. ಬಿಹಾರದ ಪರಿಸರ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಉದ್ಯಾನವನಕ್ಕೆ ಮರುನಾಮಕರಣ ಮಾಡಿ ಮೊದಲಿನ ಹೆಸರನ್ನು ಇಡುವಂತೆ ಭಾಜಪ ಒತ್ತಾಯಿಸಿದೆ.