ಬೆಂಗಳೂರು – ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು. ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ಇನ್ನೂ ಆರಂಭವಾಗದೆ ಇದ್ದರೆ ಅನುದಾನ ಕ್ಕೆ ಮಾನ್ಯತೆ ನೀಡಬಾರದು, ಶೇಕಡ ೫೦ ಅನುದಾನ ನೀಡುವ ಮಾನ್ಯತೆ ಪಡೆದಿದ್ದರೆ ಅದನ್ನು ತಕ್ಷಣ ತಡೆ ಹಿಡಿದು ಅನುದಾನ ನೀಡಬಾರದು, ಮತ್ತು ಅನುದಾನಕ್ಕಾಗಿ ಸಚಿವಾಲಯದಿಂದ ಸಮ್ಮತಿ ನೀಡಿದ್ದರೂ ಅನುದಾನ ತಡೆಹಿಡಿಯಬೇಕೆನ್ನುವ ಅಂಶಗಳಿಂದ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಇದರ ನಂತರ ಹಿಂದೂ ಸಂಘಟನೆಗಳಿಂದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ರಾಜ್ಯದ ಮಾಜಿ ಸಚಿವ ಹಾಗೂ ಭಾಜಪದ ನಾಯಕಿ ಶಶಿಕಲಾ ಜೊಲ್ಲೆ ಇವರು ಧಾರ್ಮಿಕ ದತ್ತಿ ಇಲಾಖೆಯ ನಿರ್ಣಯಕ್ಕೆ ಟೀಕಿಸುತ್ತಾ, ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ಬಹಳ ಮಹತ್ವವಿದೆ. ನಮ್ಮ ಸರಕಾರ ಇರುವಾಗ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡುತ್ತಿತ್ತು. ಚುನಾವಣೆಯ ಆಚಾರ ಸಂಹಿತೆ ಜಾರಿ ಆದ ನಂತರ ಎರಡನೆಯ ಕಂತು ನೀಡಲು ಸಾಧ್ಯವಾಗಲಿಲ್ಲ. ಅನುದಾನ ತಡೆಯುವುದಕ್ಕೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಸರಕಾರಕ್ಕೆ ಇದು ಶೋಭಿಸುವುದಿಲ್ಲ. ಈ ಆದೇಶ ಸರಕಾರ ಹಿಂಪಡೆಯಬೇಕು. ರಾಜ್ಯದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರ ನಡೆಯಬೇಕು. ನಾವು ಅನುಮೋದಿಸಿರುವ ಅನುದಾನ ಸರಕಾರ ನೀಡುವುದು ಸರಕಾರದ ಕರ್ತವ್ಯವಾಗಿದೆ, ಈ ಆದೇಶ ಹಿಂಪಡೆಯಬೇಕು ಹಾಗೂ ಹಾಗೆ ಆಗದಿದ್ದರೆ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದರು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನದ ಉತ್ಪನ್ನದಲ್ಲಿ ಗಣನೀಯ ಹೆಚ್ಚಳ !
ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ದೆಣಗಿಗಳಲ್ಲಿ ಎರಡರಷ್ಟು ಹೆಚ್ಚಳವಾಗಿದೆ. ಜೂನ್ ೧೧, ೨೦೨೩ ರಿಂದ ಜುಲೈ ೧೫, ೨೦೨೩ ವರೆಗೆ ೫೮ ದೇವಸ್ಥಾನಗಳಿಗೆ ೧೯ ಕೋಟಿ ರೂಪಾಯಿ ಆನ್ಲೈನ್ ದೇಣಗೆ ದೊರೆತಿದೆ.
ಆಕ್ರೋಶಕ್ಕೆ ಹೆದರಿದ ಸರ್ಕಾರ: ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಆದೇಶ ವಾಪಸ್! https://t.co/tyf2QyFHkV via @KannadaPrabha @XpressBengaluru @RLR_BTM
— kannadaprabha (@KannadaPrabha) August 18, 2023