ಆಸ್ಸಾಂನಲ್ಲಿ ಬಹುಪತ್ನಿತ್ವದ ಮೇಲೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಸರಮಾ !

ಪ್ರಸ್ತಾಪಿತ ಕಾನೂನುಗಳ ಸಂದರ್ಭದಲ್ಲಿ ಸೂಚನೆಗಳನ್ನು ಹೊರಡಿಸಲಾಗಿದೆ !


ಗೌಹಾಟಿ (ಆಸ್ಸಾಂ) – ಆಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚಿನ ವಿವಾಹಗಳ ಮೇಲೆ ನಿರ್ಬಂಧ ಹೇರುವ ಕಾನೂನು ತರಲು ಆಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾರವರು ಸಿದ್ಧತೆ ನಡೆಸಿದ್ದಾರೆ. ಈ ದೃಷ್ಟಿಯಿಂದ ಜನತೆಯಿಂದ ಈ ಪ್ರಸ್ತಾಪಿತ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವಾಗತಿಸಲಾಗಿದೆ. ಈ ಪ್ರಸ್ತಾಪಿತ ಕಾನೂನಿಗಾಗಿ ರಾಜ್ಯಸರಕಾರವು ವಿಶೇಷ ಸಮಿತಿಯನ್ನೂ ಸ್ಥಾಪಿಸಿತ್ತು. ಸಮಿತಿಯು ಆಗಸ್ಟ್ ೬ ರಂದು ಮುಖ್ಯಮಂತ್ರಿಗಳಿಗೆ ಇದಕ್ಕೆ ಸಂಬಂಧಿಸಿದ ವರದಿಯನ್ನೂ ಸಾದರಪಡಿಸಿತ್ತು. ಅನಂತರ ಈ ಆರ್ಥಿಕ ವರ್ಷದಲ್ಲಿ ಈ ಬಗ್ಗೆ ಕಾನೂನನ್ನು ರಚಿಸುವುದಾಗಿ ಸರಮಾ ರವರು ಘೋಷಿಸಿದ್ದಾರೆ.

(ಸೌಜನ್ಯ – Republic World)

೧. ಇದಕ್ಕೆ ಸಂಬಂಧಿಸಿದಂತೆ ಗೃಹ ಮತ್ತು ರಾಜಕೀಯ ವಿಭಾಗದ ಪ್ರಧಾನ ಕಾರ್ಯದರ್ಶಿಗಳು ನೋಟಿಸ್‌ ಜ್ಯಾರಿ ಮಾಡಿದ್ದಾರೆ. ಅದಕ್ಕನುಸಾರ ‘ರಾಜ್ಯ ಸಂಸತ್ತು ಬಹುಪತ್ನಿತ್ವದ ಮೇಲಿನ ನಿರ್ಬಂಧವನ್ನು ಜಾರಿಗೊಳಿಸುವ ಕಾನೂನು ರಚಿಸಲು ಸಕ್ಷಮವಿದೆ. ಇತರ ರಾಜ್ಯಗಳೂ ಇದಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಬಹುದು’, ಎಂದು ಹೇಳಲಾಗಿದೆ.

೨. ಈ ಹಿಂದೆ ಜನವರಿ ೨೩, ೨೦೨೩ ರಂದು ಆಸ್ಸಾಂ ಸರಕಾರವು ೧೪ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ವಿವಾಹವಾಗುವ ಪುರುಷರ ಮೇಲೆ ‘ಪೋಕ್ಸೋ’ದ ಅಂತರ್ಗತ ಕಾರ್ಯಾಚರಣೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಮುಖ್ಯಮಂತ್ರಿಗಳ ಈ ನಿರ್ಣಯದ ನಂತರ ಆಸ್ಸಾಂ ಪೊಲೀಸರು ಕೇವಲ ಒಂದು ತಿಂಗಳಿನಲ್ಲಿ ರಾಜ್ಯದಾದ್ಯಂತ ೩ ಸಾವಿರಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದರು. ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ವಧುಗಳ ಪತಿ ಹಾಗೂ ಅವರದ್ದೇ ಕುಟುಂಬದಲ್ಲಿನ ಪುರುಷ ಸದಸ್ಯರಾಗಿದ್ದರು.

೩. ಫೆಬ್ರವರಿ ೨೦೨೩ ರಲ್ಲಿ ಸರಮಾ ರವರು, ಆಸ್ಸಾಂನಲ್ಲಿ ಬಾಲ್ಯವಿವಾಹ ನಿಲ್ಲಬೇಕು. ಬಾಲ್ಯವಿವಾಹದ ವಿರುದ್ಧ ಹೊಸ ಕಾನೂನನ್ನು ೨೦೨೬ ರವರೆಗೆ ರಚಿಸುವ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಇದರಲ್ಲಿ ಜೈಲು ಶಿಕ್ಷೆಯನ್ನು ೨ ವರ್ಷಗಳಿಂದ ೨೦ ವರ್ಷಗಳವರೆಗೆ ಹೆಚ್ಚಿಸಲಾಗುವುದು, ಎಂದು ಹೇಳಿದ್ದರು.

ಈ ಕಾನೂನು ಇಸ್ಲಾಂಗೆ ಮಾರಕವಲ್ಲ ಎಂದು ಸ್ಪಷ್ಟಪಡಿಸಲಾಗಿದೆ !

ಸರಕಾರವು ಜಾರಿಗೆ ತಂದ ನೊಟೀಸ್‌ಗನುಸಾರ ಇಸ್ಲಾಂನ ಸಂದರ್ಭದಲ್ಲಿ ನ್ಯಾಯಾಲಯವು ಒಂದಕ್ಕಿಂತ ಹೆಚ್ಚು ಪತ್ನಿಯರಿರುವುದು ಧರ್ಮದ ಅತ್ಯಾವಶ್ಯಕ ಭಾಗವಲ್ಲ, ಎಂದು ಹೇಳಿದೆ. ಪತ್ನಿಯರ ಸಂಖ್ಯೆಯನ್ನು ಮಿತಿಗೊಳಿಸುವ ಈ ಕಾನೂನು ಧರ್ಮವನ್ನು ಪಾಲಿಸುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದು ಸಮಾಜಕಲ್ಯಾಣ ಮತ್ತು ಸುಧಾರಣೆಯ ಕ್ಷೇತ್ರದಲ್ಲಿ ಬರುತ್ತದೆ. ಆದುದರಿಂದ ಏಕಪತ್ನಿತ್ವಕ್ಕೆ ಮಾನ್ಯತೆ ನೀಡುವ ಈ ಕಾನೂನು ಕಲಮ್‌ ೨೫ನ್ನು ಉಲ್ಲಂಘಿಸುವುದಿಲ್ಲ.

ಸಂಪಾದಕೀಯ ನಿಲುವು

ಇಂದು ಬಹುಪತ್ನಿತ್ವವು ದೇಶದ ಸಂಪನ್ಮೂಲಗಳ ಮೇಲೆ ಅತಿಯಾದ ಹೊರೆ ಹೊರಿಸುತ್ತಿದೆ, ಇದರ ಹಿಂದೆ ‘ಹಮ್‌ ಪಾಚ್‌ ಹಮಾರೆ ಪಚ್ಚೀಸ್’ (ನಾವು ಐದು ನಮ್ಮದು ಇಪ್ಪತ್ತೈದು) ನ ಮಾನಸಿಕತೆಯುಳ್ಳವರೇ ಪ್ರಮುಖ ಕಾರಣವಾಗಿದ್ದಾರೆ, ಈ ಸತ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ! ಈ ತೊಂದರೆಯು ಕೇವಲ ಆಸ್ಸಾಂಗೆ ಮಾತ್ರವಲ್ಲದೇ ಸಂಪೂರ್ಣ ದೇಶಕ್ಕೆ ಆಗುತ್ತಿರುವುದರಿಂದ ಜನತೆಯು ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಪೇಕ್ಷಿಸುತ್ತಿದೆ !