ಸರಕಾರದ ನೀತಿಯಿಂದ ೯ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯಾಗಿದೆ ! – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವ ದೆಹಲಿ – ನಮ್ಮ ಸರಕಾರದ ನೀತಿಯಿಂದ ೯ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆ ಸುಧಾರಿಸಿದೆ ಮತ್ತು ಆರ್ಥಿಕ ಅಭಿವೃದ್ಧಿಯಾಗಿದೆ. ಇಂದು ನಾವು ಜಗತ್ತಿನಲ್ಲಿ ಎಲ್ಲಕ್ಕಿಂತ ವೇಗವಾಗಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುತ್ತಿದ್ದೇವೆ, ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವದ ಕುರಿತಾದ ಚರ್ಚೆಯ ಸಮಯದಲ್ಲಿ ಹೇಳಿದರು. ನಿರ್ಮಲಾ ಸೀತಾರಾಮನ್ ಇವರು ಮೋದಿ ಸರಕಾರದ ಕಾರ್ಯಗಳ ಪಟ್ಟಿಯನ್ನೇ ಲೋಕಸಭೆಯಲ್ಲಿ ಪ್ರಸ್ತುತಪಡಿಸಿದರು. ಅವರು,

೧. ‘ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗಾಗಿ ಸರಕಾರ ಅನೇಕ ಕ್ರಮಗಳನ್ನು ಕೂಗೊಂಡಿದೆ. ಈಗ ಬ್ಯಾಂಕುಗಳಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ ಕಾರ್ಯ ನಡೆಯುತ್ತದೆ.

೨. ಸಂಯುಕ್ತ ಪ್ರಗತಿಪರ ಮೈತ್ರಿ ಸರಕಾರದ ಸಮಯದಲ್ಲಿ ಬ್ಯಾಂಕಿನ ಪರಿಸ್ಥಿತಿ ಅತ್ಯಂತ ಕಷ್ಟದಾಯಕವಾಗಿತ್ತು. ಇಂದು ದೇಶದಲ್ಲಿನ ಎಲ್ಲಾ ಸಾರ್ವಜನಿಕ ಕ್ಷೇತ್ರದಲ್ಲಿನ ಬ್ಯಾಂಕುಗಳು ಲಾಭದಲ್ಲಿವೆ.

೩. ಹಣಕಾಸು ಸಚಿವೆ ‘ಆಗುವುದು’, ‘ಸಿಗುವುದು’ ಈ ಶಬ್ದಗಳು ಈಗ ಚಾಲ್ತಿಯಲ್ಲಿ ಇಲ್ಲ. ಜನರು ಈಗ ‘ಆಯಿತು’, ‘ಸಿಕ್ಕಿದೆ’ ಈ ಶಬ್ದ ಪ್ರಯೋಗಗಳನ್ನು ಮಾಡುತ್ತಾರೆ ಎಂದು ಹೇಳಿದರು.