ಲಡಾಖ್ ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬಹಿರಂಗ!

ಮುಸ್ಲಿಂ ಯುವಕ ಬೌದ್ಧ ಹುಡುಗಿಯೊಂದಿಗೆ ಪಲಾಯನ : ಪ್ರದೇಶ ಉದ್ವಿಗ್ನ

ಲಡಾಖ್ – ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಂಜೂರ್ ಅಹ್ಮದ್ ಹೆಸರಿನ ಮುಸಲ್ಮಾನ ಯುವಕ ಓರ್ವ ಬೌದ್ಧ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ನಂತರ ಆರೋಪಿ ಯುವಕನ ತಂದೆಯನ್ನು ಭಾಜಪ ಪಕ್ಷದಿಂದ ಉಚ್ಚಾಟಿಸಿದೆ. ಅವನ ತಂದೆ ಭಾಜಪದ ರಾಜ್ಯ ಉಪಾಧ್ಯಕ್ಷರಾಗಿದ್ದರು. ಭಾಜಪದ ರಾಜ್ಯಾಧ್ಯಕ್ಷ ಫುಂಚೋಕ್ ಸ್ಟಾಂಜಿನ್ ಮಾತನಾಡಿ, ಲಡಾಖ್ ನಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳ ಜನರು ಯಾವುದೇ ಮಹಿಳೆಯೊಂದಿಗೆ ಓಡಿಹೋಗುವ ಘಟನೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಲಡಾಖ್ ನ ಬೌದ್ಧ ಸಮುದಾಯವು ಯಾವಾಗಲೂ ಇತರಧರ್ಮದೊಂದಿಗಿನ ಮದುವೆಯ ಬಗ್ಗೆ ಸಂವೇದನಾಶೀಲವಾಗಿದೆ. ಕಳೆದ ಕೆಲವು ದಿನಗಳಿಂದ ಲಡಾಖ್ ನಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ ಘಟನೆಗಳಿಂದಾಗಿ ಬೌದ್ಧ ಸಮುದಾಯದಲ್ಲಿ ಆಕ್ರೋಶದ ಅಲೆ ಭುಗಿಲೆದ್ದಿದೆ.