ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಸಿಗರೇಟ್ ಮತ್ತು ಮದ್ಯದ ಬಾಟಲಿಗಳು ಪತ್ತೆ; ಆಡಳಿತದಿಂದ ನಿರ್ಲಕ್ಷ್ಯ!

ವಿದ್ಯೆಯ ತವರೂರಾದ ಪುಣೆಯಲ್ಲಿ, ಅದರಲ್ಲೂ ಪುಣೆ ವಿಶ್ವವಿದ್ಯಾಲಯದಲ್ಲಿ ಇಂತಹ ಘಟನೆಗಳು ನಡೆಯುವುದು ಪುಣೆ ನಿವಾಸಿಗಳಿಗೆ ನಾಚಿಕೆಗೇಡಿನ ಸಂಗತಿ! ಮದ್ಯಪಾನವನ್ನು ತಡೆಯುವಲ್ಲಿ ಹಾಸ್ಟೆಲ್ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ.

ಶಾಲೆಯಲ್ಲಿ ಶಿಸ್ತು ಬೇಕಿದ್ದರೆ ಶಿಕ್ಷಕರ ಕೈಯಲ್ಲಿ ಕೋಲು ಇರಬೇಕು ! – ಕೇರಳ ಉಚ್ಚ ನ್ಯಾಯಾಲಯ

ಕೇವಲ ಶಾಲೆಯಲ್ಲಿ ಅಷ್ಟೇ ಅಲ್ಲದೆ, ಸಂಸತ್ತಿನಲ್ಲಿ ಮತ್ತು ಸಚಿವ ಸಂಪುಟದಲ್ಲಿ ಕೂಡ ಅಧ್ಯಕ್ಷರು ಮತ್ತು ಸಭಾಪತಿಗಳು ಕೋಲು ಕೈಗೆತ್ತಿಕೊಳ್ಳಲು ಅನುಮತಿ ನೀಡಬೇಕು. ಅದರಿಂದ ಅಶಿಸ್ತ ರಂಪಾಟ ನಡೆಸುವ ಜನ ಪ್ರತಿನಿಧಿಗಳನ್ನು ಸರಿದಾರಿಗೆ ತರಬಹುದು !

ಪಾಕಿಸ್ತಾನದ ಕಾಲೇಜುಗಳಲ್ಲಿ ಭಾರತೀಯ ಹಾಡುಗಳಿಗೆ ನೃತ್ಯ ಮಾಡುವುದು ನಿಷೇಧ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ಹಾಡುಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಪಂಜಾಬ್ ಉನ್ನತ ಶಿಕ್ಷಣ ಆಯೋಗವು ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಈ ಆದೇಶವನ್ನು ಜಾರಿಗೊಳಿಸಿದೆ.

ವಿದ್ಯಾರ್ಥಿಗಳಲ್ಲಿ ಸುಧಾರಣೆ ಇಲ್ಲ ಎಂದು ಸ್ವತಃ ಮುಖ್ಯೋಪಾಧ್ಯಾಯರು ಬಸ್ಕಿ ಹೊಡೆದರು !

ಸ್ವತಃ ಶಿಕ್ಷೆ ಅನುಭವಿಸಿ ಈ ಸಮಸ್ಯೆ ಬಗೆ ಹರಿಯುವುದಿಲ್ಲ; ತದ್ವಿರುದ್ಧ ಶಿಕ್ಷಕರು ಕರ್ತವ್ಯ ಪಾಲನೆಯಲ್ಲಿ ಕಡಿಮೆ ಬಿದ್ದಿರುವ ಹಣೆಪಟ್ಟೆ ಅಂಟಿಕೊಳ್ಳುತ್ತದೆ!

ಅಜಮೇರ (ರಾಜಸ್ಥಾನ) : ಶಾಲೆಯಲ್ಲಿ ಹೋಳಿ ಆಡಲು ಹೇರಿದ್ದ ನಿರ್ಬಂಧವನ್ನು ಹಿಂಪಡೆದ ಸೋಫಿಯಾ ಶಾಲೆ

ಶಿಕ್ಷಣ ಸಚಿವರು ಒಂದು ವೇಳೆ ವಿರೋಧಿಸದಿದ್ದರೆ ಈ ಮಿಷನರಿ ಶಾಲೆಯು ಹೋಳಿ ಆಟದ ನಿಷೇಧವನ್ನು ಕಾಯಂಗೊಳಿಸುತ್ತಿತ್ತು, ಇದನ್ನು ಗಮನದಲ್ಲಿರಿಸಿ ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದರೆ ಅವರು ಚೆನ್ನಾಗಿ ಕಲಿಯುತ್ತಾರೆ! – ಯುನೆಸ್ಕೋ

ಭಾರತದ ಹಿಂದೂಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ! ಹಿಂದೂಗಳು ಆಂಗ್ಲರ ಗುಲಾಮಗಿರಿಯನ್ನು ಬಿಟ್ಟುಕೊಟ್ಟರೆ ಭಾರತದಲ್ಲಿ ಪುನಃ ನಾಲಂದಾ ಮತ್ತು ತಕ್ಷಶಿಲೆಯಂತಹ ಗುಣಮಟ್ಟದ ವಿಶ್ವವಿದ್ಯಾಲಯಗಳು ನಿರ್ಮಾಣವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ!

ಕೃತಕ ಬುದ್ಧಿಮತ್ತೆಯ ಉಪಯೋಗ ಬೇಡ, ಶಿಕ್ಷಕರೇ ಬೇಕು ! 

ಶಿಕ್ಷಣದಲ್ಲಿ ತಾತ್ತ್ವಿಕ ಅಂಗ ಹಾಗೂ ಪ್ರಾಯೋಗಿಕ ಅಂಗ, ಹೀಗೆ ಎರಡು ಅಂಗಗಳಿವೆ. ಪ್ರಾಥಮಿಕ ಅಂಗದಲ್ಲಿ ಕೇವಲ ಪುಸ್ತಕದ ಜ್ಞಾನವನ್ನು ನೀಡಲಾಗುತ್ತದೆ; ಆದರೆ ಈ ಪುಸ್ತಕದ ಜ್ಞಾನವನ್ನು ಹೇಗೆ ಉಪಯೋಗಿಸುವುದು ? ಎಂಬುದನ್ನು ಪ್ರಾಯೋಗಿಕ ಅಂಗದಲ್ಲಿ ಕಲಿಸಲಾಗುತ್ತದೆ.

ಕೇಂಬ್ರಿಡ್ಜ್ ನಲ್ಲಿ ಫೇಲ್‌ ಆಗಿದ್ದ ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಲು ಹೇಗೆ ಸಾಧ್ಯ? – ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ಅಯ್ಯರ್ ಅವರಿಗೆ ಈ ಪ್ರಶ್ನೆ 40 ವರ್ಷಗಳ ನಂತರ ಏಕೆ ಬಂತು? ಈ ಹಿಂದೆ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಅಥವಾ ಮಾತನಾಡಲು ಧೈರ್ಯವಿರಲಿಲ್ಲವೇ?

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮೊಬೈಲ್ ಫೋನ್ ತರುವುದಕ್ಕೆ ನಿಷೇಧವಿಲ್ಲ! – ದೆಹಲಿ ಹೈಕೋರ್ಟ್

ಪ್ರಸ್ತುತ ತಂತ್ರಜ್ಞಾನವು ಶಿಕ್ಷಣದ ಅಗತ್ಯ ಭಾಗವಾಗಿದೆ. ಮೊಬೈಲ್ ಮೂಲಕ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ, ಇದು ಅವರ ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ.

Telugu Compulsory In Schools : ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಲಿಸುವುದು ಕಡ್ಡಾಯ ! – ಕಾಂಗ್ರೆಸ್ ಸರಕಾರದ ಆದೇಶ

ನೆರೆಯ ರಾಜ್ಯವಾದ ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವ ಸಮಯದಲ್ಲಿ ತೆಲಂಗಾಣ ಸರಕಾರ ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ