ಪ್ರಶಂಸನೀಯ ನಿರ್ಣಯ !

ಮುಖ್ಯಮಂತ್ರಿಗಳಾದ ನಂತರ ಯೋಗಿ ಆದಿತ್ಯನಾಥರ ಆಡಳಿತವು ಯಾವಾಗಲೂ ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಗಳಾಗುವ ಮೊದಲು ಅರಾಜಕತೆ ಪರಿಸ್ಥಿತಿ ಇತ್ತು. ಹತ್ಯೆ, ಅಪಹರಣ, ಲವ್ ಜಿಹಾದ್, ಹಿಂದೂ-ಮುಸಲ್ಮಾನರಲ್ಲಿ ಗಲಭೆಗಳು ಅಲ್ಲಿ ಯಾವಾಗಲೂ ಇದ್ದವು.

ಜ್ಞಾನವಾಪಿ ಮಸೀದಿಗೆ ತಾಗಿರುವ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ !

ಜ್ಞಾನವಾಪಿ ಮಸೀದಿಯ ಪಕ್ಷವಾದ ‘ಅಂಜುಮಾನ ಇಂತೆಜಾಮಿಯಾ ಕಮೀಟಿ’ಯು ಜ್ಞಾನವಾಪಿ ಮಸೀದಿಗೆ ತಾಗಿರುವ ೧ ಸಾವಿರದ ೭೦೦ ಚದರ ಅಡಿ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ ಕೈಗೊಂಡಿದೆ.

ಉತ್ತರಪ್ರದೇಶದಲ್ಲಿ, ಅಧಿಕಾರಿಗಳು ಮತ್ತು ದಲ್ಲಾಳಿಗಳಿಂದ ರಾಷ್ಟ್ರೀಯ ಕುಟುಂಬ ಲಾಭ ಯೋಜನೆಯಲ್ಲಿ ಹಗರಣ

ಲಕ್ಷ್ಮಣಪುರಿಯ ಸರೋಜಿನಿ ನಗರ ತಾಲೂಕಿನ ಬಂಥರಾ ಮತ್ತು ಚಂದ್ರಾವಲ್ ಗ್ರಾಮಗಳಲ್ಲಿ ಒಟ್ಟು ೮೮ ಜನರು ೨೦೧೯-೨೦ ಹಾಗೂ ೨೦೨೦-೨೦೨೧ ರಲ್ಲಿ ಈ ಯೋಜನೆಯ ಲಾಭ ಪಡೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ, ಈ ಫಲಾನುಭವಿಗಳಲ್ಲಿ ೨೧ ಮಹಿಳೆಯರು, ಅವರ ಗಂಡಂದಿರು ಜೀವಂತವಾಗಿದ್ದಾರೆ.

ಒಂದು ತಿಂಗಳಲ್ಲಿ ಭಾರತದ ೨೦ ಲಕ್ಷ ಅಕೌಂಟ್ ಬಂದ್ ಮಾಡಿದ `ವಾಟ್ಸ್ಅಪ್ ‘ !

ಕೇಂದ್ರ ಸರಕಾರದ ನೂತನ `ಮಾಹಿತಿ ತಂತ್ರಜ್ಞಾನ’ ಕಾನೂನಿನ ಅಡಿಯಲ್ಲಿ ತಿಂಗಳ ವರದಿಯನ್ನು ಸಲ್ಲಿಸುವ ನಿಯಮದ ಪ್ರಕಾರ ‘ವಾಟ್ಸ್ಅಪ್ ‘ ಭಾರತದಲ್ಲಿ ತನ್ನ ಮೊದಲನೇ ತಿಂಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯ ಪ್ರಕಾರ ‘ವಾಟ್ಸ್ಅಪ್’ ಮೇ ೧೫ ರಿಂದ ಜೂನ್ ೧೫ ೨೦೨೧ ಈ ಕಾಲಾವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದ ೨೦ ಲಕ್ಷ ಅಕೌಂಟ್‍ಗಳ ಮೇಲೆ ನಿಷೇಧ ಹೇರಿದೆ.

ಯೋಗಿ ಆದಿತ್ಯನಾಥರ ಕಠಿಣ ಪರಿಶ್ರಮದಿಂದಾಗಿ ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯ ! – ಪ್ರಧಾನಿ ಮೋದಿಯವರಿಂದ ಮೆಚ್ಚುಗೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದ್ದರಿಂದ ಇಂದು ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆ, ಎಂಬ ಪದಗಳಲ್ಲಿ ಪ್ರಧಾನಿ ಮೋದಿಯವರು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಶ್ಲಾಘಿಸಿದ್ದಾರೆ.

ಕೊರೊನಾ ಕಾಲಾವಧಿಯಲ್ಲಿ ಕಾವಡ ಯಾತ್ರೆಗೆ ಅನುಮತಿ ಏಕೆ ?

ಈ ವರ್ಷ ಜುಲೈ ೨೫ ರಿಂದ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ ಪ್ರಾರಂಭವಾಗಲಿದೆ. ಕೆಲವು ಷರತ್ತುಗಳೊಂದಿಗೆ ಅದಕ್ಕೆ ಸರಕಾರವು ಅನುಮತಿಸಿದೆ. ಉತ್ತರಪ್ರದೇಶ ಸರಕಾರದ ಅನುಮತಿಯ ನಂತರ, ಅನುಮತಿ ನಿರಾಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಉತ್ತರಾಖಂಡ ಸರಕಾರವು ಹೇಳಿದೆ.

ಕರ್ನಾಟಕ ಸರಕಾರದಿಂದ ದುರ್ಬಲ ವರ್ಗದವರಿಗೆ ಸಹಾಯವೆಂದು ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ವಿತರಣೆ !

ಹುತಾತ್ಮ, ಸೈನಿಕರ ಪತ್ನಿ, ದೇವದಾಸಿ, ಶವಾಗಾರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿಧವೆಯರು ಮುಂತಾದ ದುರ್ಬಲದವರಿಗೆ ಹಣಕಾಸಿನ ನೆರವು ಎಂದು ‘ಅಮೃತ ಸಿರಿ’ ಯೋಜನೆಯಡಿ ಉತ್ತಮ ತಳಿಗಳ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು, ಎಂಬ ಮಾಹಿತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ಪ್ರಭು ಚವ್ಹಾಣ ಇವರು ನೀಡಿದರು.

ಅಸ್ಸಾಂ ಸರಕಾರದಿಂದ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಎರಡುವರೆ ಲಕ್ಷ ರೂಪಾಯಿಯ ಸಹಾಯ !

ಅಸ್ಸಾಂ ಸರಕಾರವು ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಒಟ್ಟು ೨ ಲಕ್ಷ ೫೦ ಸಾವಿರ ಮೊತ್ತದಷ್ಟು ಸಹಾಯವನ್ನು ಏಕಗಂಟಿನಲ್ಲಿ ನೀಡುವ ಆಯೋಜನೆಯನ್ನು ಆರಂಭಿಸಿದರು. ಯಾವ ಕುಟುಂಬದ ವಾರ್ಷಿಕ ಆದಾಯ ೫ ಲಕ್ಷದ ಒಳಗಿದೆಯೋ, ಅಂತಹ ಕುಟುಂಬದವರಿಗೆ ಈ ಸಹಾಯ ಸಿಗಲಿದೆ.

ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.