ಶಾಲೆಯಲ್ಲಿ ಭಗವದ್ಗೀತೆ ಕಲಿಸಬಾರದು, ಇದಕ್ಕಾಗಿ ‘ಜಮೀಯತ-ಉಲೇಮಾ-ಏ-ಹಿಂದ್’ ನಿಂದ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮನವಿ

ನ್ಯಾಯಾಲಯ ರಾಜ್ಯ ಸರಕಾರದಿಂದ ಸ್ಪಷ್ಟೀಕರಣ ಕೇಳಿದೆ

ಕಾರ್ಣವತಿ (ಗುಜರಾತ) – ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲು ರಾಜ್ಯ ಸರಕಾರದ ನಿರ್ಧಾರದ ಮೇಲೆ ಗುಜರಾತ್ ಉಚ್ಚ ನ್ಯಾಯಾಲಯ ಸರಕಾರದ ಬಳಿ ಸ್ಪಷ್ಟೀಕರಣ ಕೇಳಿದೆ. ಗುಜರಾತನ ಭಾಜಪ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯದ ೬ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ‘ಶ್ರೀಮದ್ ಭಗವದ್ಗೀತೆ ಸಾರ’ ಕಲಿಸಲು ಮಾರ್ಚ್ ತಿಂಗಳಿನಲ್ಲಿ ಘೋಷಣೆ ಮಾಡಿತ್ತು. ಈ ನಿರ್ಧಾರಕ್ಕೆ ‘ಜಮೀಯತ-ಉಲೇಮಾ-ಏ-ಹಿಂದ್’ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿದೆ. ಈ ಬಗ್ಗೆ ನ್ಯಾಯಾಲಯ ಸರಕಾರದ ಹತ್ತಿರ ಸ್ಪಷ್ಟೀಕರಣ ಕೇಳಿದೆ; ಆದರೆ ಈ ನಿರ್ಧಾರವನ್ನು ರದ್ದುಪಡಿಸಿಲ್ಲ.

ನ್ಯಾಯಾಲಯ ಸರಕಾರಕ್ಕೆ ಆಗಸ್ಟ್ ೧೮ ರ ವರೆಗೆ ಅದರ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿದೆ. ‘ಜಮಿಯತ-ಉಲೇಮಾ-ಏ-ಹಿಂದ್’ ಅರ್ಜಿಯಲ್ಲಿ, ಭಾರತೀಯ ಸಂಸ್ಕೃತಿಯ ಮೌಲ್ಯ ಮತ್ತು ಸಿದ್ದಾಂತ, ಹಾಗೂ ಜ್ಞಾನದ ಪ್ರಣಾಲಿ ಶಾಲೆಯ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ; ಆದರೆ ಅದರಲ್ಲಿ ಒಂದು ಧರ್ಮದ ಪವಿತ್ರ ಗ್ರಂಥದ ಸಿದ್ಧಾಂತಕ್ಕೆ ಆದ್ಯತೆ ನೀಡುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ ? ಎಂದು ಕೇಳಿದೆ.

ಸಂಪಾದಕೀಯ ನಿಲುವು

ಗಢವಾ (ಜಾರ್ಖಂಡ್)ಇಲ್ಲಿಯ ಶಾಲೆಯಲ್ಲಿ ಶೇ. ೭೫ ಮುಸಲ್ಮಾನ ವಿದ್ಯಾರ್ಥಿ ಇರುವುದರಿಂದ ಮುಸಲ್ಮಾನರು ಶಾಲೆಯಲ್ಲಿ ಇಸ್ಲಾಮಿ ನಿಯಮ ಜಾರಿ ಮಾಡುವುದಕ್ಕಾಗಿ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ ಹೇರಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಕೈಜೋಡಿಸಿ ಪ್ರಾರ್ಥನೆ ಮಾಡುಲು ತಡೆದಿದ್ದಾರೆ. ಇದರ ವಿರೋಧದಲ್ಲಿ ‘ಜಮಿಯತ್-ಉಲೇಮಾ-ಏ-ಹಿಂದ್’ ಎಂದಾದರೂ ಮನವಿ ದಾಖಲಿಸಿದ್ದಾರೆಯೇ ?